Tuesday, June 3, 2025

Latest Posts

ಬಾಲಿವುಡ್‌ನ್ನೇ ಇಲ್ಲಿ ಕರೆಸೋಣ ಎಂದಿದ್ದ ಮಾತನ್ನು ನಿಜ ಮಾಡಿದ್ರಾ ಯಶ್..?

- Advertisement -

Movie News: ಕೆಜಿಎಫ್ 2 ಸಿನಿಮಾ ಸೂಪರ್ ಹಿಟ್ ಆದಾಗ, ಹಲವರು ರಾಕಿಂಗ್‌ ಸ್ಟಾಾರ್‌ ಯಶ್ ಬಳಿ, ನೀವು ಬಾಲಿವುಡ್‌ಗೆ ಹೋಗುತ್ತೀರಾ ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಯಶ್, ನಾನು ಬಾಲಿವುಡ್‌ಗೆ ಯಾಕೆ ಹೋಗಬೇಕು..? ಬಾಲಿವುಡ್‌ನೇ ಇಲ್ಲಿ ಕರೆಸೋಣ ಬಿಡಿ ಎಂದು ಹೇಳಿದ್ದರು. ಮಾತು ಅಂದ್ರೆ ಇದು ಎಂದು ಅವರ ಅಭಿಮಾನಿಗಳು ಖುಷಿ ಪಟ್ಟಿದ್ದರು.

ಸದ್ಯದ ಪರಿಸ್ಥಿತಿ ನೋಡಿದ್ರೆ, ಯಶ್ ಹೇಳಿದ ಮಾತನ್ನ ನಿಜ ಮಾಡುತ್ತಿದ್ದಾರಾ ಅನ್ನೋ ಸಂಶಯ ಬರುತ್ತಿದೆ. ಕರೀನಾ ಕಪೂರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್‌ನಲ್ಲಿ ನಟಿಸುತ್ತಾರೆ ಅನ್ನೋ ಗುಸು ಗುಸು ಕೇಳಿ ಬರ್ತಿದೆ. ಇನ್ನು ಕೆಲ ದಿನಗಳ ಹಿಂದೆ ಬಾಲಿವುಡ್ ಬೆಡಗಿ, ಕರೀನಾ ಕಪೂರ್‌, ತನಗೆ ಯಶ್ ಜೊತೆ ನಟಿಸಲು ಇಷ್ಟವೆಂದು ಹೇಳಿದ್ದರು.

ಅಲ್ಲದೇ, ಶೀಘ್ರವೇ ಎಕ್ಸೈಟಿಂಗ್ ವಿಷಯ ಹೇಳಲಿದ್ದೇನೆ ಎಂದು ಕರೀನಾಕಪೂರ್ ಟೀಂ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಮೊದಲು ಕರೀನಾ ಬಳಿ, ಕನ್ನಡ ಸಿನಿಮಾದಲ್ಲಿ ನಟಿಸುತ್ತೀರಾ ಎಂದು ಕೇಳಿದ್ದಾಗ, ಅವಕಾಶ ಸಿಕ್ಕರೆ, ಉತ್ತಮ ಕಥೆ ಸಿಕ್ಕರೆ, ಖಂಡಿತ ನಟಿಸುತ್ತೇನೆ ಎಂದು ಕರೀನಾ ಹೇಳಿದ್ದರು. ಇದೀಗ ಕರೀನಾ ನಿಜವಾಗಲೂ ಯಶ್ ಜೊತೆ ನಟಿಸುತ್ತಿದ್ದಾರಾ ಅನ್ನೋ ಸಂಶಯ ಯಶ್ ಅಭಿಮಾನಿಗಳ ಕಾತುರ ಹೆಚ್ಚಿಸಿದೆ.

ಸ್ಯಾಂಡಲ್‌ವುಡ್ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ಕಳ್ಳತನ

ಅನ್ನಪೂರ್ಣಿ ಸಿನಿಮಾ ಡೈಲಾಗ್ ವಿರುದ್ಧ ರಾಮಭಕ್ತರ ಆಕ್ರೋಶ..!

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರ್‌ಗೆ ಆಹ್ವಾನ..

- Advertisement -

Latest Posts

Don't Miss