Tuesday, April 15, 2025

Latest Posts

ಪರಿಶೀಲನಾ ಹಂತದಲ್ಲಿ ಕೃಷಿ ವಿಶ್ವವಿದ್ಯಾಲಯಗಳ AICRP ಹುದ್ದೆಗಳ ಭರ್ತಿ ಮಾಡುವಂತೆ ನಿರ್ದೇಶನ..!

- Advertisement -

ಬೆಂಗಳೂರು/ಬೆಳಗಾವಿ,ಡಿ.24:ರಾಜ್ಯದ ನಾಲ್ಕು ಕೃಷಿ ವಿಜ್ಞಾನಗಳ ವಿಜ್ಞಾನ ಕೃಷಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ಕೇಂದ್ರಗಳು / ಕೃಷಿ ಸಂಶೋಧನಾ ಕೇಂದ್ರಗಳಲ್ಲಿನ ಖಾಲಿಯಿರುವ ಎ.ಐ.ಸಿಆರ್.ಪಿ (AICRP) ಹುದ್ದೆಗಳ ಭರ್ತಿ ವಿಚಾರ ಪರಿಶೀಲನಾ ಹಂತದಲ್ಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮೇಲ್ಮನೆಗೆ ಸ್ಪಷ್ಟಪಡಿಸಿದ್ದಾರೆ.

ಪದವೀಧರ ಕ್ಷೇತ್ರದ ಸದಸ್ಯ ಎಸ್.ವಿ.ಸಂಕನೂರ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿರುವ ಬಿ.ಸಿ.ಪಾಟೀಲ್,
ಎ.ಐ.ಸಿ.ಎ.ಆರ್‌.ಪಿ ನಿಂದ ಶೇ .100 ರಷ್ಟು ಅನುದಾನಿತ ಕೆವಿಕೆ ಯಲ್ಲಿ ಖಾಲಿ ಇರುವ 49 ಬೋಧಕರ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವಂತೆ ಎಲ್ಲಾ ನಾಲ್ಕು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಿಗೆ ನಿರ್ದೇಶಿಸಲಾಗಿದೆ.
ಅಲ್ಲದೇ ಬೆಂಗಳೂರು ಮತ್ತು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಿಂದ ಪುಸ್ತಾವನೆಯು ಸ್ವೀಕೃತವಾಗಿದ್ದು , ಇದನ್ನು ಪರಿಶೀಲಿಸಲಾಗುತ್ತಿದೆ. 4 ರಾಜ್ಯದಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿ ಖಾಲಿಯಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡುವ ಕುರಿತು ಪರಿಷ್ಕೃತ ಪುಸ್ತಾವನೆಗಳು ಸಹ ಪರಿಶೀಲನೆಯ ಹಂತದಲ್ಲಿರುತ್ತದೆ ಎಂದಿದ್ದಾರೆ.

- Advertisement -

Latest Posts

Don't Miss