Health Tips: ಬೇಸಿಗೆ ಗಾಲ ಶುರುವಾಗಿದೆ. ನಾವು ಮಳೆಗಾಲ, ಚಳಿಗಾಲದಲ್ಲಿ ಹೇಗೆ ದೇಹವನ್ನು ಬೆಚ್ಚಗೆ ಇಟ್ಟು, ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತೇವೋ, ಅದೇ ರೀತಿ ಬೇಸಿಗೆಯಲ್ಲೂ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಕಾರಣ, ಬೇಸಿಗೆಯಲ್ಲಿಯೂ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ.
ಚಿಕನ್ ಗುನ್ಯಾ, ಢೆಂಗ್ಯೂ ರೋಗಗಳು ಕೂಡ ಬೇಸಿಗೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ನಾವು ಬೇಸಿಗೆಯಲ್ಲಿಯೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆ, ಬಿಸಿ ನೀರಿನ ಸೇವನೆ ಹೆಚ್ಚು ಮಾಡಬೇಕು. ಉಗುರು ಬೆಚ್ಚಗಿನ ನೀರನ್ನು ಹೆಚ್ಚು ಕುಡಿಯಬೇಕು.
ಬೇಸಿಗೆ ಎಂದು ಹಲವರು ಹೊರಗಿನ ಕೂಲ್ ಡ್ರಿಂಕ್ಸ್ , ಐಸ್‌ಕ್ರೀಮ್ ಸೇವಿಸುತ್ತಾರೆ. ಅಲ್ಲದೇ, ಸಿಕ್ಕ ಸಿಕ್ಕಲ್ಲಿ ನೀರು ಸೇವಿಸುತ್ತಾರೆ. ಇವೆಲ್ಲವೂ ರೋಗಗಳು ಬರುವ ಮಾರ್ಗವಾಗಿದ್ದು, ಆಹಾರ ಸೇವನೆಯಿಂದಲೇ ರೋಗ ಬಾಧೆ ಶುರುವಾಗುತ್ತದೆ. ಹಾಗಾಗಿ ಆದಷ್ಟು ಮನೆಯಲ್ಲೇ ತಯಾರಿಸಿ, ಫ್ರೆಶ್ ತಿಂಡಿ, ಜ್ಯೂಸ್, ಉಗುರು ಬೆಚ್ಚಗಿನ ನೀರಿನ ಸೇವನೆ ಮಾಡಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.