Monday, April 14, 2025

Latest Posts

ಬಳ್ಳಾರಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ..

- Advertisement -

Bellary: ಬಳ್ಳಾರಿ: ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಾಲೀಮು ನಡೆಸಿರೋ ಕಾಂಗ್ರೆಸ್ ಹತ್ತು ಹಲವು ಕಾರ್ಯಕ್ರಮ ಮಾಡೋ ಮೂಲಕ ಕಾರ್ಯರ್ತಕರನ್ನು ಜೊತೆಗೆ ಕರೆದುಕೊಂಡು ಹೋಗುವ ಯತ್ನ ಮಾಡುತ್ತಿದೆ. ಎಸ್ಸಿ, ಎಸ್ಟಿ, ಓಬಿಸಿ ಮತ್ತು ಅಲ್ಪಸಂಖ್ಯಾತರಿಗಾಗಿಯೇ ಕಾಂಗ್ರೆಸ್ ಈ ಬಾರಿ ಲೀಡರ್ಶಿಪ್ ಡೆವಲಪ್ಮೆಂಟ್ ಮಿಷನ್ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದ್ರೇ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಮುಖಂಡರ ಪೋಟೋ ಹಾಕಿಲ್ಲವೆಂದು ಕಾರ್ಯಕರ್ತರು ಗಲಾಟೆ ಮಾಡೋ ಮೂಲಕ ಮತ್ತೊಮ್ಮೆ ಬಳ್ಳಾರಿ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಎತ್ತಿ ತೋರಿಸಿದ್ದಾರೆ. ಈ ಕುರಿತು ಒಂದು ವರದಿ ನೋಡೋಣ ಬನ್ನಿ…!

ಬೆಳಗಾವಿ ಆಯ್ತು, ಈಗಾ ಬಳ್ಳಾರಿ ಕಾಂಗ್ರೆಸ್’ನಲ್ಲಿ ಭಿನ್ನಮತ ಸ್ಫೋಟ

ಸಿಡಬ್ಲೂಸಿ ಸದಸ್ಯ ನಾಸೀರ್ ಹುಸೇನ್ ಪೋಟೋ ಮಿಸ್

ಎಐಸಿಸಿ ಸದಸ್ಯರ ಮುಂದೇನೇ ಕೈ ಕಾರ್ಯಕರ್ತರ ವಾಗ್ವಾದ

ಗಲಾಟೆ ಮಾಡದಂತೆ ಕೈಮುಗಿದ ಸಚಿವ ನಾಗೇಂದ್ರ

ಬಳ್ಳಾರಿ, ರಾಯಚೂರು, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆ ಮುಖಂಡರ ಸಭೆಯಲ್ಲಿ ಅಸಮಾಧಾನ. ಎಐಸಿಸಿ ಸದಸ್ಯರ ಮುಂದೆಯೇ ಬಳ್ಳಾರಿ ಕಾರ್ಯಕರ್ತರ ಅಸಮಾಧಾನ ಸ್ಪೋಟ. ಭಾಷಣದಲ್ಲಿಯೇ ಕೈಮುಗಿದು ಸುಮ್ಮನಿರಿ ಎಂದ ಸಚಿವ ನಾಗೇಂದ್ರ. ಹೌದು, ಬಳ್ಳಾರಿ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸಾಭಿತಾಗಿದೆ. ವಿಧಾನ ಸಭೆ ಚುನಾವಾಣೆ ಮಾದರಿಯಲ್ಲಿ ಲೋಕಸಭೆ ಚುನಾವಣೆಗೂ ಎಸ್ಸಿ, ಎಸ್ಟಿ, ಓಬಿಸಿ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಗಟ್ಟಿ ಮಾಡುವ ನಿಟ್ಟಿನಲ್ಲಿ ಎಸ್ಟಿ ಮೀಸಲು ಕ್ಷೇತ್ರವಾಗಿರೋ ಬಳ್ಳಾರಿ, ರಾಯಚೂರು ಜಿಲ್ಲೆಯ ಮುಖಂಡರಿಗಾಗಿ ವಿಶೇಷವಾದ ಲೀಡರ್ ಶಿಪ್ ಡೆವಲಪ್ಮೆಂಟ್ ಮಿಷನ್ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಅವರ ಪೋಟೋಗಾಗಿ ಮಾಜಿ ಬುಡಾ ಅಧ್ಯಕ್ಷ ಹುಮಾಯೂನ್ ಖಾನ್ ಅಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಕೆಲ ಕಾಂಗ್ರೆಸ್ ಕಾರ್ಯಕರ್ತರ ತಮ್ಮ ತಮ್ಮ ನಾಯಕರ ಪೋಟೋ ಇಲ್ಲವೆಂದು ಜೋರು ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದ್ರು. ಈ ವೇಳೆ ನಾಗೇಂದ್ರ ವೇದಿಕೆಯಲ್ಲಿಯೇ ಕೈಮುಗಿದು ಇದು ಕಾಂಗ್ರೆಸ್, ಇದೊಂದು ದೊಡ್ಡ ಸಮುದ್ರ ಇಲ್ಲಿ ಯಾರನ್ನು ಬೇಕೆಂದು ಬಿಡೋದಿಲ್ಲ. ಶಿಷ್ಟಾಚಾರದ ಪ್ರಕಾರವೇ ಪೋಟೋ ಹಾಕಿರುತ್ತಾರೆ. ಇನ್ಮೂಂದೆ ಬಳ್ಳಾರಿ ಕಮಿಟಿಯಿಂದಲೇ ಪ್ರತ್ಯೇಕ ಶಿಷ್ಟಾಚಾರ ಮಾಡೋ ಮೂಲಕ ಪ್ರತಿಯೊಬ್ಬರ ಪೋಟೋ ಹಾಕುತ್ತೇನೆ ಎಂದರು.

ಎಸ್ಸಿ,ಎಸ್ಟಿ, ಓಬಿಸಿ ಮತ್ತು ಅಲ್ಪಸಂಖ್ಯಾತರಿಗಾಗಿಯೇ ಕಾರ್ಯಕ್ರಮ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಐದಕ್ಕೆ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ರು. ನಿಗಮ ಮಂಡಳಿ ನೀಡ್ತಿಲ್ಲ ಮತ್ತು ಶಾಸಕ ಸಚಿವರು ಕೈಗೆ ಸಿಗೋದಿಲ್ಲ ಅನ್ನೋ ಅಸಮಾಧಾನ ಕಾಂಗ್ರೆಸ್ ಕಾರ್ಯಕರ್ತರ ಮನದಲ್ಲಿತ್ತು. ಇದೀಗ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಅದು ಸ್ಟೋಟವಾಗಿದೆ. ಆದ್ರೇ, ಇದು ಮುಂಬರುವ ಲೋಕಸಭೆ ಚುನಾವಣೆಯ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಅನ್ನೋದನ್ನ ಸದ್ಯ ಕಾದು ನೋಡಬೇಕಿದೆ.

ಕರ್ನಾಟಕ ಟಿವಿ ಬಳ್ಳಾರಿ…

Varthur Santhosh : ಕನ್ನಡದ ಬಿಗ್‌ಬಾಸ್ ಸೆಟ್‌ನಲ್ಲೇ “ಆ ಸ್ಪರ್ಧಿ” ಅರೆಸ್ಟ್

‘400-500 ಕೋಟಿ ಖರ್ಚು ಮಾಡಿ ಸುವರ್ಣ ಸೌಧವನ್ನ ಭೂತ ಬಂಗಲೆ ಮಾಡುವುದು ಸರಿಯಲ್ಲ’

ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಬದಲಾವಣೆ ಖಚಿತ: ವಿನಯ್ ಕುಲಕರ್ಣಿ

- Advertisement -

Latest Posts

Don't Miss