Move News: ತಮಿಳು ನಟ ಸೂರ್ಯ ಮತ್ತು ಅವರ ಪತ್ನಿ ಜ್ಯೋತಿಕಾ ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ವಿಷಯ ಹಲವು ದಿನಗಳಿಂದ ಹರಿದಾಡುತ್ತಿದೆ. ಆದರೆ ಈ ಬಗ್ಗೆ ನಟಿ ಜ್ಯೋತಿಕಾ ಸ್ಪಷ್ಟನೆ ನೀಡಿದ್ದಾರೆ.
ಇವರಿಬ್ಬರು ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರೆಂಬ ವಿಷಯ ಹಬ್ಬಲು ಶುರುವಾದ ಬಳಿಕ, ಜ್ಯೋತಿಕಾ ಮತ್ತು ಸೂರ್ಯ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರೂ ಒಂದೇ ಸಿನಿಮಾದಲ್ಲಿ ನಟನೆಯೂ ಮಾಡಿದ್ದಾರೆ. ಸೂರ್ಯನ ಸಿನಿಮಾವನ್ನು ಜ್ಯೋತಿಕಾ ನಿರ್ಮಾಣ ಕೂಡ ಮಾಡಿದ್ದಾರೆ. ಇಷ್ಟು ಚಂದದ ಜೋಡಿ ಬೇರೆ ಬೇರೆ ಆಗ್ತಿದೆಯಲ್ಲಾ ಎಂದು ಇವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.
ಇನ್ನು ಈ ಸುದ್ದಿ ಹಬ್ಬಲು ಕಾರಣವೇನೆಂದರೆ, ಸೂರ್ಯ ಚೆನ್ನೈನಲ್ಲಿ ಇದ್ದಾರೆ. ಜ್ಯೋತಿಕಾ ಮತ್ತು ಅವರ ಮಕ್ಕಳು ಮುಂಬೈನಲ್ಲಿ ಇದ್ದಾರೆ. ಈ ಕಾರಣಕ್ಕೆ ಇಬ್ಬರ ನಡುವಿನ ವೈವಾಹಿಕ ಸಂಬಂಧ ಸರಿ ಇಲ್ಲವೆಂದು ಹೇಳಲಾಗುತ್ತಿತ್ತು. ಇನ್ನು ಈ ಸುದ್ದಿ ನಿಜ. ಸೂರ್ಯ ಚೆನ್ನೈನಲ್ಲಿ ಇದ್ದಾರೆ. ಪತ್ನಿ ಮಕ್ಕಳು ಮುಂಬೈನಲ್ಲಿ ಇದ್ದಾರೆ.
ಆದರೆ ಇದೆಲ್ಲ ಸುಳ್ಳು ಎಂದು ಗಲ್ಲಿ ಗಾಸಿಪ್‌ಗೆಲ್ಲ ಜ್ಯೋತಿಕಾ ಫಲ್‌ಸ್ಟಾಪ್ ಇಟ್ಟಿದ್ದಾರೆ. ತನಗೆ ಮುಂಬೈನಲ್ಲಿ ಪ್ರಾಜಕ್ಟ್ ಇದೆ. ಅಲ್ಲದೇ ಮಕ್ಕಳನ್ನೂ ನೋಡಿಕೊಳ್ಳಬೇಕು. ಪದೇ ಪದೇ ನಾನು ಚೆನ್ನೈನಿಂದ ಮುಂಬೈಗೆ ಬಂದರೆ, ಮಕ್ಕಳ ಎಜುಕೇಶನ್‌ಗೂ ತೊಂದರೆಯಾಗುತ್ತದೆ. ಹಾಗಾಗಿ ಸೂರ್ಯ ಚೆನ್ನೈನಲ್ಲಿ ಇದ್ದಾರೆ. ನಾನು ಮುಂಬೈಗೆ ಬಂದು ಮಕ್ಕಳೊಂದಿಗೆ ವಾಸಿಸುತ್ತಿದ್ದೇನೆ. ಇದಕ್ಕೆ ಕಾರಣ, ಮಕ್ಕಳ ಭವಿಷ್ಯ ವಿನಃ, ನಮ್ಮ ವೈವಾಹಿಕ ಜೀವನ ಚೆನ್ನಾಗಿಯೇ ಇದೆ. ನಾವು ಡಿವೋರ್ಸ್ ತೆಗೆದುಕೊಳ್ಳುತ್ತಿಲ್ಲ ಎಂದು ಜ್ಯೋತಿಕಾ ಹೇಳಿದ್ದಾರೆ.
ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿ ಬಂದು ನಟಿಯರೊಂದಿಗೆ ಪಾರ್ಟಿ ಮಾಡಿದ Vicky Jain
ಬಾಯ್‌ಫ್ರೆಂಡ್‌ನೊಂದಿಗೆ ಶವವಾಗಿ ಪತ್ತೆಯಾದ ನೀಲಿ ಚಿತ್ರ ತಾರೆ Jesse Jane