Hubballi News: ಹುಬ್ಬಳ್ಳಿ: ಇದೇ 20ರಂದು ಹುಬ್ಬಳ್ಳಿಯಲ್ಲಿ ಮೇಯರ್ ಉಪಮೇಯರ್ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ನಂಬರ್ ಗೇಮ್ ಇಲ್ಲ. ಆದರೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಅಧಿಕಾರ ಹಿಡಿಯಬೇಕು ಎಂಬ ಕಾರಣಕ್ಕೆ, ಡಿಸಿಎಂ ಡಿ.ಕೆ.ಶಿವಕುಮಾರ್ ಶೇಟ್ಟರ್‌ಗೆ ಮೇಯರ್ ಟಾಸ್ಕ್ ಕೊಟ್ಟಿದ್ದಾರೆ.
ಕಳೆದ ವಾರವಷ್ಟೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಈ ಟಾಸ್ಕ್ ನೀಡಲಾಗಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಸ್ವತಃ ಮಾತನಾಡಿ ತಮ್ಮ ಪರವಾಗಿ ಪಾಲಿಕೆಯ 11 ಬಿಜೆಪಿ ಸದಸ್ಯರು ಇದ್ದಾರೆ. ಅಲ್ಲದೆ ನಾನು ಬಿಜೆಪಿ ಬಿಡುವದರಿಂದ ಒಂದು ಫ್ಲಡ್ ಗೇಟ್ ಓಪನ್ ಆಗುವುದಿದೆ. ಅದನ್ನ ಆದಷ್ಟು ಶೀಘ್ರದಲ್ಲಿ ನೀವು ನೋಡುತ್ತೀರಿ ಎನ್ನುವ ದೂರ ದೃಷ್ಟಿ ಶೇಟ್ಟರ್ ದೂರದೃಷ್ಟಿ ಹೇಳಿಕೆ ನೀಡಿದ್ದರು.
ಇದೇ 20 ರಂದು ಶೆಟ್ಟರ್ ಪರವಾಗಿ ಇರುವ ಬಿಜೆಪಿ ಸದಸ್ಯರು ಯಾರು ಎನ್ನುವ ಕುತೂಹಲಕ್ಕೆ ತೆರೆ ಎಳಿಯುವ ದಿನವಾಗಿದೆ. ಶೆಟ್ಟರ್ ಹಿಂಬಾಲಕರಾಗಿರುವ ಕೆಲ ಬಿಜೆಪಿ ಸದಸ್ಯರು ಬಹಿರಂಗವಾಗಿ ಕಾಂಗ್ರೆಸ್ಗೆ ಬೆಂಬಲಿಸುವ ಸಾಧ್ಯತೆ ಕೂಡ ಇದೆ ಎಂದು ದಟ್ಟವಾಗಿ ಹೇಳಲಾಗುತ್ತಿದೆ.
ಇನ್ನು ಪಾಲಿಕೆಯಲ್ಲಿ 82 ಸದಸ್ಯರ ಬಲ ಹೊಂದಿದೆ. ಬಿಜೆಪಿಯ 39 , ಕಾಂಗ್ರೆಸ್‍ನ 33 , ಎಐಎಂಐಎಂ ನ 3 ,ಜೆಡಿಎಸ್‍ನ 1 ಹಾಗೂ 6 ಜನ ಪಕ್ಷೇತರರಿದ್ದಾರೆ. ಈ ಹಿಂದೆ ಐವರು ಪಕ್ಷೇತರರು ಹಾಗೂ ಜೆಡಿಎಸ್ ನ ಮತ್ತೊಬ್ಬರು ಬಿಜೆಪಿಗೆ ಬೆಂಬಲ ನೀಡಿದ್ದರು. ಮೇಯರ್ -ಉಪ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಪಾಲಿಕೆ ವ್ಯಾಪ್ತಿಯ ಸಂಸದರು , ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಮತ ನೀಡುವ ಅಧಿಕಾರ ಹೊಂದಿದ್ದಾರೆ.
ಗ್ರಾಮೀಣ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ಗೆಲುವಿನಿಂದ ಕಾಂಗ್ರೆಸ್ ಮತ ಬ್ಯಾಂಕ್ ಸಂಖ್ಯೆ 34ಕ್ಕೇ ಏರಿದೆ. ಅಲ್ಲದೆ ಪಕ್ಷೇತರರರ ಕೂಡ ಕಾಂಗ್ರೆಸ್ ಬೆಂಬಲಿಸುವ ಸಾದ್ಯತೆ ಇದೆ. ಇನ್ನು ಜಗದೀಶ್ ಶೆಟ್ಟರ್ ಮ್ಯಾಜಿಕ್ ನಡೆದರೆ ಸುಲಭವಾಗಿ ಕಾಂಗ್ರೆಸ್ ಪಾಲಿಕೆಯಲ್ಲಿ ಅಧಿಕಾರ ಚುಕ್ಕಾಣಿ ಹಿದಿಯುವ ಸಾಧ್ಯತೆ ಇದೆ.
ಎಂಪಿ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರದ ಬಗ್ಗೆ ವಿಜಯೇಂದ್ರ ಏನಂದ್ರು..?