Tuesday, September 17, 2024

Latest Posts

ಇನ್ಮೇಲೆ ಮೇಕಪ್ ಮಾಡಿ ಮೊಡವೆಗಳನ್ನ ಮುಚ್ಚಿಕೊಳ್ಳುವುದು ಬೇಡ

- Advertisement -

Beauty Tips: ಹದಿಹರೆಯದ ವಯಸ್ಸಿಗೆ ಬಂದ ಬಳಿಕ ಮುಖದಲ್ಲಿ ಮೊಡವೆಯಾಗುವುದು ಕಾಮನ್. ಆದರೆ ಮೊಡವೆ ಯಾಕಾಗಿದೆ ಎಂಬ ಕಾರಣ ತಿಳಿದುಕೊಳ್ಳದೇ, ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಪ್ರಾಡಕ್ಟ್‌ಗಳನ್ನು ಬಳಸಿ, ಮೇಕಪ್ ಮಾಡಿಕೊಂಡು ಆ ಮೊಡವೆಯನ್ನು ಮುಚ್ಚಿಕೊಳ್ಳಲಾಗುತ್ತದೆ. ಆದರೆ ನಾವು ಮೊಡವೆ ಆಗಿರುವುದಕ್ಕೆ ಕಾರಣವೇನೆಂದು ತಿಳಿದುಕೊಂಡರೆ, ಮೇಕಪ್ ಮಾಡಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಈ ಬಗ್ಗೆ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರು ವಿವರಣೆ ನೀಡಿದ್ದಾರೆ.

ದೇಹದಲ್ಲಿ ರಕ್ತ ಶುದ್ಧವಿಲ್ಲದಿದ್ದಾಗ, ಮುಖದಲ್ಲಿ ಮೊಡವೆಯಾಗುತ್ತದೆ. ಅಲ್ಲದೇ, ದೇಹದಲ್ಲಿ ಉಷ್ಣತೆ ಹೆಚ್ಚಾದಾಗಲೂ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳುತ್ತದೆ. ಹಾರ್ಮೋನಲ್ ಇಂಬ್ಯಾಲೆನ್ಸ್ ಆದಾಗಲೂ ಈ ಸಮಸ್ಯೆ ಉದ್ಭವಿಸುತ್ತದೆ. ಕರುಳಿನಲ್ಲಿ ಕಲ್ಮಶವಿದ್ದು, ಕರುಳಿನ ಸಮಸ್ಯೆ ಇದ್ದಾಗ, ಹೆಚ್ಚು ಮಾಂಸಾಹಾರ, ಕರಿದ ಪದಾರ್ಥ ಸೇವಿಸಿದಾಗ, ಬೇಕರಿ ತಿಂಡಿಯ ಸೇವನೆ ಅತಿಯಾದಾಗ, ನೀರಿನ ಸೇವನೆ ಕಡಿಮೆಯಾದಾಗ, ಮುಖದ ಮೇಲೆ ಮೊಡವೆ ಬರುವುದು ಸಹಜ.

ಮುಖದ ಸೌಂದರ್ಯ ಹಾಳಾಗುತ್ತಿದೆ. ಮೊಡವೆ ಹೆಚ್ಚುತ್ತಿದೆ ಎಂದರೆ, ನಿಮ್ಮ ಆರೋಗ್ಯವೂ ಹಾಳಾಗುತ್ತಿದೆ ಎಂದರ್ಥ. ಇದೆಲ್ಲ ಸಮಸ್ಯೆಗೆ ಪರಿಹಾರ ಬೇಕು ಅಂದ್ರೆ, ನೀವು ನೀರಿನ ಸೇವನೆಯನ್ನು ಹೆಚ್ಚು ಮಾಡಿಕೊಳ್ಳಬೇಕು. ಒಂದೇ ಬಾರಿ ಅಲ್ಲದಿದ್ದರೂ, ಆಗಾಗ ನೀರು ಕುಡಿಯುವ ಅಭ್ಯಾಸ ನಿಮಗಿರಬೇಕು. ಇದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

ಪ್ರತಿದಿನ ಸೂರ್ಯಾಸ್ತವಾಗುವುದರೊಳಗೆ ಎಳನೀರು, ಮಜ್ಜಿಗೆ ಸೇವನೆ ಮಾಡಿ. ರಾತ್ರಿ ಹಾಲಿನ ಸೇವನೆ ಮಾಡಿ. ಇದರೊಂದಿಗೆ ಹಣ್ಣು, ತರಕಾರಿ ಸೇವನೆ ಯತೇಚ್ಛವಾಗಿ ಮಾಡಿದರೆ, ನಿಮ್ಮ ಸೌಂದರ್ಯದ ಜೊತೆಗೆ, ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss