Wednesday, October 29, 2025

Latest Posts

ಪದೇ ಪದೇ ತಲೆನೋವು ತೊಂದ್ರೆ ಕೊಡ್ತಾ ಇದ್ಯಾ? ಈ ಮನೆಮದ್ದನ್ನೊಮ್ಮೆ ಪ್ರಯೋಗಿಸಿ

- Advertisement -

Health Tips: ನಾವು ಬಳಸುವ ಗ್ಯಾಜೇಟ್ಸ್‌ ಕಾರಣದಿಂದಲೋ, ಇಲ್ಲಾ ನಮ್ಮ ಜೀವನ ಶೈಲಿಯಿಂದಲೋ, ಅಥವಾ ಈಗ ಬರುತ್ತಿರುವ ಹೊಸ ಹೊಸ ವೈರಸ್‌ಗಳ ಕಾರಣದಿಂದಲೋ, ಅಥವಾ ನಾವು ಸೇವಿಸುವ ಆಹಾರದ ಕಾರಣಕ್ಕೋ, ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ಅದರಲ್ಲೂ ಹೆಚ್ಚಿನ ಜನರಿಗೆ ಕಾಡುವ ಸಮಸ್ಯೆ ಅಂದ್ರೆ, ತಲೆನೋವಿನ ಸಮಸ್ಯೆ. ಹಾಗಾದ್ರೆ ಪದೇ ಪದೇ ತಲೆ ನೋವಿನ ಸಮಸ್ಯೆ ಬರಲು ಕಾರಣವೇನು ಅನ್ನೋ ಬಗ್ಗೆ ಪಾರಂಪರಿಕ ವೈದ್ಯೆ ಡಾ. ಪವಿತ್ರಾ ಅವರು ವಿವರಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಯಾರು ನಿದ್ದೆ ಮಾಡುವುದಿಲ್ಲವೋ, ಯಾರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದಿಲ್ಲವೋ, ಹೆಚ್ಚು ಹೊತ್ತು ಉಪವಾಸ ಮಾಡುತ್ತಾರೋ. ಅಂಥವರಿಗೆ ತಲೆ ನೋವಿನ ಸಮಸ್ಯೆ ಕಾಡುತ್ತದೆ.

ಇಷ್ಟೇ ಅಲ್ಲದೇ, ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವುದು, ಜೀರ್ಣವಾಗದ ಆಹಾರವನ್ನು ಹೆಚ್ಚು ತಿನನ್ನುವುದು, ಮಲಬದ್ಧತೆ ಆಗುವಂಥ ಆಹಾರವನ್ನು ಸೇವಿಸುವುದರಿಂದಲೂ, ಕಡಿಮೆ ನೀರು ಕುಡಿಯುವುದರಿಂದಲೂ, ಹೆಚ್ಚು ಟೀ ಕಾಫಿ ಸೇವನೆ ಮಾಡುವುದರಿಂದಲೂ ತಲೆ ನೋವು ಕಾಣಿಸಿಕೊಳ್ಳುತ್ತದೆ.

ಇನ್ನು ತಲೆ ನೋವು ಬಂದ ಬಳಿಕ ನಿಮಗೆ ವಾಂತಿಯಾದರೆ, ಅದು ತಲೆನೋವು ಶಮನ ಮಾಡಲು ಬಂದಂಥ ವಾಂತಿಯಾಗಿರುತ್ತದೆ. ಹಾಗಾಗಿ ಈ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ವಾಂತಿಯಾಗುವುದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶ ಹೊರಗೆ ಹೋಗಿ, ತಲೆ ನೋವು ಕಡಿಮೆಯಾಗುತ್ತದೆ.

ಆದರೆ ತಲೆನೋವು ಬಂದ ತಕ್ಷಣ ಮಾತ್ರೆ ತೆಗೆದುಕೊಳ್ಳಬಾರದು ಅಂತಾರೆ ವೈದ್ಯರು. ತಲೆ ನೋವು ಬಂದಾಗ, ಹಸಿ ಶುಂಠಿ ಮತ್ತು ಅರಿಶಿನವನ್ನು ತೇಯ್ದು ಹಣೆಗೆ ಹಚ್ಚಿಕೊಂಡರೆ, ತಲೆನೋವು ಮಾಯವಾಗುತ್ತದೆ. ಹಸುವಿನ ಹಾಲಿನಿಂದ ತಯಾರಾದ ಮೊಸರಿನ ಜೊತೆ, ಕೆಂಪಕ್ಕಿ ಅನ್ನವನ್ನು ಸೂರ್ಯ ಹುಟ್ಟುವ ಮುನ್ನವೇ ಸೇವಿಸಬೇಕು. ಇದರಿಂದಲೂ, ತಲೆನೋವು ಮಾಯವಾಗುತ್ತದೆ.

ಸೇಬು ಹಣ್ಣಿನ ಜೊತೆ ಉಪ್ಪನ್ನು ಬೆರೆಸಿ ತಿನ್ನುವುದರಿಂದ, ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ತುಪ್ಪದೊಂದಿಗೆ ಸೇವಿಸಿದರೆ, ತಲೆನೋವು ಕ್ರಮೇಣ ಶಮನವಾಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಯೋ ನೋಡಿ.

- Advertisement -

Latest Posts

Don't Miss