Saturday, July 27, 2024

Latest Posts

ಮೆಂತ್ಯೆ ಸೊಪ್ಪಿನ ಛೋಲೆ ಮಾಡೋದು ಹೇಗೆ ಗೊತ್ತಾ..?

- Advertisement -

Recipe: ಛೋಲೆ ಅಂದ್ರೆ ಎಲ್ಲರಿಗೂ ನೆನಪಿಗೆ ಬರೋದು ಕಡಲೆ ಕಾಳಿನ ಛೋಲೆ. ಆದ್ರೆ ನಾವಿಂದು ಮೇಥಿ ಛೋಲೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

1 ಕಪ್ ಬಿಳಿ ಕಡಲೆ ಕಾಳನ್ನು ನೀರಿನಲ್ಲಿ ನೆನೆಸಿ, ಬೇಯಿಸಿಟ್ಟುಕೊಳ್ಳಿ. ಈಗ ಪ್ಯಾನ್ ಬಿಸಿ ಮಾಡಿ, ಎರಡು ಸ್ಪೂನ್ ಎಣ್ಣೆ, ಚಿಕ್ಕ ತುಂಡು ಚಕ್ಕೆ, ಲವಂಗ, ಚಿಟಿಕೆ ಜೀರಿಗೆ ಹಾಕಿ ಹುರಿಯಿರಿ. ಬಳಿಕ 2 ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಬಳಿಕ ನಾಲ್ಕು ಎಸಳು ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ ಹಾಕಿ ಹುರಿಯಿರಿ. ಬಳಿಕ ಮೆಂತ್ಯೆ ಸೊಪ್ಪು ಸೇರಿಸಿ, 2 ನಿಮಿಷ ಸೊಪ್ಪಿನ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.

ಬಳಿಕ 3 ಬೇಯಿಸಿ, ಪ್ಯೂರಿ ಮಾಡಿಕೊಂಡ ಟೊಮೆಟೋ ಮಿಕ್ಸ್ ಮಾಡಿ, 2 ನಿಮಿಷ ಹುರಿಯಿರಿ. ಈಗ 1 ಸ್ಪೂನ್ ಛೋಲೆ ಮಸಾಲಾ, ಅರ್ಧ ಸ್ಪೂನ್ ಧನಿಯಾ ಮತ್ತು ಜೀರಿಗೆ ಪುಡಿ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಗರಂ ಮಸಾಲೆ ಪುಡಿ, ಚಿಟಿಕೆ ಸಕ್ಕರೆ, 3 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.

ಈಗ ಬೇಯಿಸಿಟ್ಟುಕೊಂಡ ಕಡಲೆ ಸೇರಿಸಿ ಮತ್ತಷ್ಟು ಬೇಯಿಸಿ. ಬಳಿಕ ಕೊತ್ತೊಂಬರಿ ಸೊಪ್ಪು ಮತ್ತು ಕಸೂರಿ ಮೇಥಿಯನ್ನು ಸೇರಿಸಿದರೆ ಮೆಂತ್ಯೆ ಸೊಪ್ಪಿನ ಛೋಲೆ ರೆಡಿ.

ಕೂದಲು ಅಂದವಾಗಿರಬೇಕು, ದಟ್ಟವಾಗಿರಬೇಕು ಎಂದಲ್ಲಿ ಈ ಆಹಾರಗಳನ್ನು ಸೇವಿಸಿ..

ಮುಟ್ಟು ಮುಂದೂಡಲು ಪದೇ ಪದೇ ಮಾತ್ರೆ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ..?

ಇಲ್ಲಿದೆ ಸ್ವಾದಿಷ್ಟಕರ ಮನೆ ಊಟ: Good morning Hotel ಸ್ಪೆಶಾಲಿಟಿ ಏನು..?

- Advertisement -

Latest Posts

Don't Miss