Friday, December 27, 2024

Latest Posts

Barley ತಿನ್ನುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ..?

- Advertisement -

ಸುಮಾರು ಹದಿನಾರರ ಶತಮಾನದಲ್ಲಿ ಗೋಧಿಗಿಂತಲೂ ಬಾರ್ಲಿಯೇ ಪ್ರಮುಖ ಆಹಾರವಾಗಿತ್ತು. ಅಂದಿನವರ ಆರೋಗ್ಯವನ್ನು ಇಂದಿನವರಿಗೆ ಹೋಲಿಸಿದರೆ ಅವರ ಆರೋಗ್ಯ ಎಷ್ಟೋ ಉತ್ತಮವಾಗಿತ್ತು. ಚೀನಾ, ಈಜಿಪ್ಟ್, ಗ್ರೀಸ್ ಮತ್ತು ರೋಮನ್ನರು ಅಂದಿನ ತಮ್ಮ ಆಹಾರದಲ್ಲಿ ಬಾರ್ಲಿಯ ಸೇವನೆಯನ್ನು ಇತಿಹಾಸದಲ್ಲಿ ದಾಖಲಿಸಿದ್ದಾರೆ. ಈಜಿಪ್ಟ್‌ನ ಇತಿಹಾಸದಲ್ಲಿ ತಿಳಿಸಿರುವ ಪ್ರಕಾರ ನಿತ್ಯವೂ ಬಾರ್ಲಿಯ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಹಲವು ಐತಿಹಾಸಿಕ ಮತ್ತು ಪುರಾತನ ಗ್ರಂಥಗಳಲ್ಲಿ ಈ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಬನ್ನಿ, ಈ ಉತ್ತಮ ಧಾನ್ಯದ ನೀರನ್ನು ಕುಡಿಯುವುದರ ಮೂಲಕ ಪಡೆಯಬಹುದಾದ ಅದ್ಭುತ ಪ್ರಯೋಜನಗಳನ್ನು ತಿಳಿಯೋಣ. ಬಾರ್ಲಿ ನೀರನ್ನು ತಯಾರಿಸುವುದು ಹೇಗೆ? ಬಾರ್ಲಿ ನೀರನ್ನು ಒಂದು ಸಲಕ್ಕೆ ಮಾಡಿಯೂ ಕುಡಿಯಬಹುದು ಅಥವಾ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ತಯಾರಿಸಿ ಫ್ರಿಜ್ಜಿನಲ್ಲಿ ಶೇಖರಿಸಿಟ್ಟುಕೊಂಡು ಪ್ರತಿದಿನ ಬಳಸಲೂಬಹುದು. ಒಂದು ಸಲದ ಉಪಯೋಗಕ್ಕೆ ಒಂದು ಲೋಟ ನೀರಿಗೆ ಎರಡು ದೊಡ್ಡ ಚಮಚದಷ್ಟು ಬಾರ್ಲಿಯನ್ನು ಸೇರಿಸಿ ಕುದಿಸಿ. ಒಂದೆರಡು ನಿಮಿಷ ಕುದಿಸಿದ ಬಳಿಕ ಒಂದೆರಡು ಕಾಳುಗಳನ್ನು ಹಿಚುಕಿ ನೋಡಿ ಪೂರ್ಣವಾಗಿ ಬೆಂದಿದ್ದರೆ ಒಲೆಯಿಂದ ಇಳಿಸಿ. ಕೆಲವೊಮ್ಮೆ ಹೆಚ್ಚು ಒಣಗಿರುವ ಬಾರ್ಲಿ ಪೂರ್ಣವಾಗಿ ಕುದಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಬಾರ್ಲಿ ಬೆಂದ ಬಳಿಕ ಒಲೆಯಿಂದ ಇಳಿಸಿ ಸ್ವಚ್ಛವಾದ ಬಟ್ಟೆಯ ಮೂಲಕ ಸೋಸಿ. ಬಟ್ಟೆಯನ್ನು ಎರಡೂ ಬದಿಯಿಂದ ಸುರುಳಿ ಸುತ್ತುತ್ತಾ ಒತ್ತಡದಿಂದ ಬಾರ್ಲಿಯ ನೀರನ್ನು ಪೂರ್ಣವಾಗಿ ಹಿಂಡಿಕೊಳ್ಳಿ. ಈ ನೀರು ತಣಿಯಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಸಾಮಾನ್ಯ ಬಿಸಿ ಇರುವಂತೆಯೇ ಕುಡಿಯಿರಿ. ನಿಮ್ಮ ಆಯ್ಕೆಯ ರುಚಿಯನ್ನು ಪಡೆಯಲು ಲಿಂಬೆ, ಉಪ್ಪು, ಅಥವಾ ಸಕ್ಕರೆಯನ್ನೂ ಸೇರಿಸಿ ಕುಡಿಯಬಹುದು. ಬಾರ್ಲಿ ಒಂದು ಉತ್ತಮ ಮೂತ್ರವರ್ಧಕವಾಗಿದ್ದು ದೇಹದಿಂದ ಮೂತ್ರದ ಮೂಲಕ ವಿಷಕಾರಿ ವಸ್ತುಗಳು ಹೊರಹೋಗಲು ಸಹಕರಿಸುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹಕರಿಸುತ್ತದೆ ಬಾರ್ಲಿಯ ಸೇವನೆಯಿಂದ ದೇಹದ ಬೆವರು ಹೆಚ್ಚಿನ ಪ್ರಮಾಣದಲ್ಲಿ ಹೊರಹರಿಯಲು ನೆರವಾಗುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಈ ಬೆವರು ಅಗತ್ಯವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಖಾರವಾದ ಊಟವನ್ನು ಸೇವಿಸಿದ ಬಳಿಕ ಹೊಟ್ಟೆಯಲ್ಲಿ ಉರಿಯುಂಟಾಗುವುದರಿಂದ ಬಾರ್ಲಿ ತಡೆಯುತ್ತದೆ. ಹಾಗಾಗಿ ಖಾರದ ಊಟದ ಬಳಿಕ ಬಾರ್ಲಿ ನೀರನ್ನು ಸೇವಿಸಲು ಮರೆಯದಿರಿ. ಮಧುಮೇಹಿಗಳಿಗೂ ಉತ್ತಮವಾಗಿದೆ ಬಾರ್ಲಿಯಲ್ಲಿರುವ ಬೀಟಾ ಗ್ಲುಕಾನ್ ಆಹಾರದಲ್ಲಿರುವ ಗ್ಲುಕೋಸ್ ಸಕ್ಕರೆಯನ್ನು ರಕ್ತದಲ್ಲಿ ಸೇರಿಸುವ ಗತಿಯನ್ನು ನಿಧಾನಗೊಳಿಸುವ ಕಾರಣ ಮಧುಮೇಹಿಗಳು ಸಹಾ ಸುರಕ್ಷಿತವಾಗಿ ಸೇವಿಸಬಹುದು. ಮಧುಮೇಹಿಗಳ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಪ್ರಮಾಣ ಏರಿದರೆ ಅಪಾಯಕಾರಿಯಾದುದರಿಂದ ಬಾರ್ಲಿ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ನಿಧಾನವಾಗಿ ಲಭ್ಯವಾಗುವಂತೆ ಮಾಡಿ ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಬಾರ್ಲಿ ನೀರಿನಲ್ಲಿ ಹೆಚ್ಚಿನ ನಾರು ಇರುವುದರಿಂದ ಪಚನಕ್ರಿಯೆ ಮತ್ತು ರಕ್ತಸಂಚಾರ ಸುಗಮಗೊಳ್ಳುತ್ತದೆ. ಪರಿಣಾಮವಾಗಿ ರಕ್ತದಲ್ಲಿದ್ದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಕ್ಕೆ ಹೆಚ್ಚಿನ ಒತ್ತಡ ನೀಡುವ ಅಗತ್ಯ ಕಡಿಮೆಯಾಗುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆಗಳಿಗೆ ರಾಮಬಾಣ ಮೂತ್ರಪಿಂಡಗಳಲ್ಲಿ ಉತ್ಪತ್ತಿಯಾಗುವ ಕಲ್ಲುಗಳಿಗೆ ಆಹಾರದಲ್ಲಿರುವ ಲವಣಗಳು ಕಾರಣವಾಗಿವೆ. ಒಂದು ಚಿಕ್ಕ ಕಣದಿಂದ ಪ್ರಾರಂಭವಾಗುವ ಇವು ದಿನಗಳೆದಂತೆ ದೊಡ್ಡದಾಗುತ್ತಾ ಹೋಗುತ್ತವೆ. ಒಂದು ನಿರ್ದಿಷ್ಟ ಪ್ರಮಾಣಕ್ಕೆ ಬೆಳೆದ ಬಳಿಕ ನೋವು ನೀಡಲು ಪ್ರಾರಂಭವಾಗುತ್ತದೆ. ಅಲ್ಲಿಯವರೆಗೂ ಈ ಕಲ್ಲುಗಳ ಇರುವಿಕೆಯೇ ಗೊತ್ತಾಗುವುದಿಲ್ಲ. ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ಈ ಕಲ್ಲುಗಳು ನಿಧಾನವಾಗಿ ಕರಗುತ್ತವೆ. ಪರಿಣಾಮವಾಗಿ ಮೂತ್ರಪಿಂಡಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಅತಿಸಾರ ನಿಲ್ಲುತ್ತದೆ ಅತಿಸಾರದಿಂದ ಬಳಲುತ್ತಿರುವವರಿಗೆ ತಕ್ಷಣವೇ ಒಂದು ಲೋಟ ಬಾರ್ಲಿ ನೀರನ್ನು ಕುಡಿಸುವ ಮೂಲಕ ಅತಿಸಾರವನ್ನು ನಿಲ್ಲಿಸಬಹುದು. ಅಲ್ಲದೇ ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ದೇಹವನ್ನು ತಂಪಾಗಿರಿಸುತ್ತದೆ. ಚರ್ಮದ ಕಾಂತಿ ಹೆಚ್ಚಿಸುತ್ತದೆ ಬಾರ್ಲಿಯ ನೀರನ್ನು ಸೋಸಿ ಮುಖವನ್ನು ತೊಳೆಯಲು ಬಳಸುವ ಮೂಲಕ ಮುಖದ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಸೆಳೆತ ಹೆಚ್ಚಿಸಿ ವೃದ್ಧಾಪ್ಯದ ಚಿಹ್ನೆಗಳನ್ನು ತಡವಾಗಿಸುತ್ತದೆ. ಇದರಲ್ಲಿ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಯಾವುದೇ ವಯಸ್ಸಿನವರು ಸೇವಿಸಬಹುದಾದ ಧಾನ್ಯವಾಗಿದೆ. ಗಂಟಲ ಬೇನೆ ಕಡಿಮೆಗೊಳಿಸುತ್ತದೆ ಕೊಂಚ ಬಿಸಿಯಾಗಿರುವ ಮತ್ತು ಸೋಸಿದ ಬಾರ್ಲಿ ನೀರನ್ನು ಕುಡಿಯುವ ಮೂಲಕ ಗಂಟಲ ಬೇನೆ, ಗಂಟಲ ಸೋಂಕು ಮೊದಲಾದ ತೊಂದರೆಗಳನ್ನು ಶೀಘ್ರವೇ ಗುಣಪಡಿಸಬಹುದು. ಅಜೀರ್ಣ ಅಥವಾ ಇತರ ಕಾರಣಗಳಿಂದ ಹೊಟ್ಟೆ ಮತ್ತು ಜಠರಗಳಲ್ಲಿ ಸಂಗ್ರಹವಾಗಿದ್ದ ವಿಷಕಾರಿ ಘನ ಮತ್ತು ವಾಯುಗಳನ್ನು ಹೊರಹಾಕಲು ಬಾರ್ಲಿ ನೀರು ಅತ್ಯಂತ ಸಮರ್ಥವಾಗಿದೆ. ಹೊಟ್ಟೆಯುಬ್ಬರ ಕಂಡುಬಂದ ತಕ್ಷಣ ಒಂದು ಲೋಟ ಬಾರ್ಲಿ ನೀರಿಗೆ ಕೊಂಚ ಲಿಂಬೆರಸ ಸೇರಿಸಿ ಕುಡಿಯುವುದು ಇನ್ನೂ ಉತ್ತಮವಾದ ಪರಿಹಾರ ನೀಡುತ್ತದೆ.

- Advertisement -

Latest Posts

Don't Miss