Wednesday, April 23, 2025

Latest Posts

ಇನ್ಶೂರೆನ್ಸ್ ಹಣ ಪಡೆಯಲು ಈ ಭೂಪ ಮಾಡಿದ್ದೇನು ಗೊತ್ತಾ..?

- Advertisement -

International News: ಮನುಷ್ಯನಿಗೆ ಯಾವಾಗ ಏನು ಸಮಸ್ಯೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಯಾವಾಗ ಏನು ಬೇಕಾದರೂ ಆಗಬಹುದು. ಈ ವೇಳೆ ಹಣದ ಸಮಸ್ಯೆ ಬಾರದಿರಲು ಎಂದು ಹಲರು ಇನ್ಶೂರೆನ್ಸ್ ಮಾಡಿಸಿರುತ್ತಾರೆ. ಬದುಕಿರುವವರೆಗೂ ನಮಗೇನಾದರೂ ಆರೋಗ್ಯ ಸಮಸ್ಯೆ ಬಂದರೆ ಮಾತ್ರ, ಆ ಇನ್ಶೂರೆನ್ಸ್ ಬಳಕೆಗೆ ಬರುತ್ತದೆ. ಆದರೆ ನೀವು ಬದುಕಿರುವವರೆಗೂ ನಿಮಗೆ ಏನೂ ಆಗದಿದ್ದಲ್ಲಿ, ನೀವು ಕಟ್ಟಿದ ಹಣ ಹಾಗೆ ಹೋಗುತ್ತದೆ.

ಹೀಗೆ ತಾನು ಕಟ್ಟಿದ ಇನ್ಶೂರೆನ್ಸ್ ಹಣ ಹಾಳಾಗಬಾರದು. ಆ ಹಣ ತನಗೆ ಸಿಗಲೇಬೇಕೆಂದು ಓರ್ವ ವ್ಯಕ್ತಿ ತನ್ನ ಎರಡೂ ಕಾಲುಗಳನ್ನು ಕತ್ತರಿಸಿಕೊಂಡಿದ್ದಾನೆ. ಬಳಿಕ ತನಗೆ ಅಪಘಾತವಾಗಿದೆ, ಇನ್ಶೂರೆನ್ಸ ಹಣ ಕೊಡಿ ಎಂದು ಕಂಪನಿಗೆ ಕೇಳಿದ್ದಾನೆ. ಈ ವ್ಯಕ್ತಿಗೆ ಈಗಾಗಲೇ 60 ವರ್ಷ ವಯಸ್ಸಾಗಿದೆ. ಈತನ ಕಾಲಿನ ಪರಿಸ್ಥಿತಿ ಕಂಡ ಪೊಲೀಸರು ಇವನಿಗೆ ಅಪಘಾತವಾದ ಹಾಗೆ ಕಾಣುತ್ತಿಲ್ಲವೆಂದು ಅಂದಾಜಿಸಿದ್ದಾರೆ.

ಕಾಲು ಕಟ್ ಆಗಿದ್ದಕ್ಕೆ ಸುಳ್ಳು ಹೇಳುತ್ತ ಹೇಳುತ್ತ ರಾಶಿ ರಾಶಿ ಸುಳ್ಳು ಹೇಳಿದ್ದಾನೆ. ಆದರೆ ಅಷ್ಟು ಸುಲಭವಾಗಿ ಇನ್ಶುರೆನ್ಸ್ ಹಣ ಕೊಡದ ಪೊಲೀಸರು, ಚೆನ್ನಾಗಿ ತನಿಖೆ ನಡೆಸಿ, ಸತ್ಯಾಂಶ ಬಯಲಿಗೆಳೆದಿದ್ದಾರೆ. ಈತನಿಗೆ ಪಾರ್ಶ್ವ ವಾಯುವಿದ್ದ ಕಾರಣ, ಕಾಲು ಉಪಯೋಗಕ್ಕೆ ಬರುತ್ತಿರಲಿಲ್ಲ. ಹಾಗಾಗಿ ಕಾಲು ಇದ್ದರೂ ಇಲ್ಲದಿದ್ದರೂ ಒಂದೇ ಅನ್ನೋ ರೀತಿ ಈ ವ್ಯಕ್ತಿಯ ಜೀವನವಾಗಿದ್ದು, ಕಾಲು ಕತ್ತರಿಸಿ, ಬಕೇಟ್‌ನಲ್ಲಿ ತನ್ನ ಕಾಲುಗಳನ್ನು ಹಾಕಿ, ಅಡಗಿಸಿಟ್ಟಿದ್ದ. ಇದನ್ನು ನೋಡಿದ ಪೊಲೀಸರು ದಂಗಾದಿದ್ದಾರೆ.

ಜಾರ್ಖಂಡ್‌ನ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

ಬಾಲಿವುಡ್ ಹಾಡುಗಾರ, ಗಝಲ್ ಮಾಂತ್ರಿಕ ಪಂಕಜ್‌ ಉದಾಸ್ ನಿಧನ

ದಾಖಲೆ ಬರೆದ ರಾಮಲಲ್ಲಾ: ಒಂದೇ ತಿಂಗಳಲ್ಲಿ 25 ಕೋಟಿ ಕಾಣಿಕೆ ಸಂಗ್ರಹ

- Advertisement -

Latest Posts

Don't Miss