Spiritual: ಪರಿಚಯವಿಲ್ಲದವರಾಾಗಲಿ, ಪರಿಚಯವಿದ್ದವರೇ ಆಗಲಿ, ಅವರು ನಿನ್ನನ್ನು ಕರೆಯದಿದ್ದರೊ, ನೀನಾಗಿ ಅವರ ಮನೆಗೆ ಎಂದಿಗೂ ಹೋಗಬಾರದು ಅಂತಾ ಹಿರಿಯರು ಹೇಳುತ್ತಾರೆ. ಹೀಗ್ಯಾಕೆ ಹೇಳುತ್ತಾರೆ..? ಇದರ ಹಿಂದಿರುವ ಕಾರಣವಾದರೂ ಏನು ಅಂತಾ ತಿಳಿಯೋಣ ಬನ್ನಿ..
ಹಿರಿಯರು ಹೇಗೆ ಕರೆಯದಿದ್ದವರ ಮನೆಗೆ ಹೋಗಬಾರದು ಅಂತಾ ಹೇಳುತ್ತಾರೋ, ಅದೇ ರೀತಿ ಚಾಣಕ್ಯರು ಕೂಡ ಈ ಮಾತನ್ನು ಹೇಳಿ, ಈ ಮಾತಿನ ವಿವರವನ್ನು ಸಹ ನೀಡಿದ್ದಾರೆ. ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಹೇಳುವ ಪ್ರಕಾರ, ನಾವು ಕರೆಯದೇ ಇದ್ದವರ ಮನೆಗೆ ಹೋದಾಗ, ಅಲ್ಲಿ ನಮಗೆ ಅವಮಾನವಾಗಬಹುದು. ಅವರು ನಮಗೆ ಬೆಲೆ ಕೊಡದಿರಬಹುದು. ನೀವು ಹೊರಡಿ ಎನ್ನುವ ರೀತಿ, ಅವರು ನಿಮ್ಮನ್ನು ನಿರ್ಲಕ್ಷಿಸಬಹುದು. ಅಥವಾ ಮನಸ್ಸಿಗೆ ಬೇಸರವಾಗುವಂತೆ ಮಾತನಾಡಲೂಬಹುದು.
ಅಲ್ಲದೇ, ಕೆಲವೊಮ್ಮೆ ನೀವು ನಿಮ್ಮ ಸ್ನೇಹಿತರೊಂದಿಗೆ, ಅವರ ಸ್ನೇಹಿತರ ಅಥವಾ ಸಂಬಂಧಿಕರ ಮನೆಗೆ ಹೋಗಬಹುದು. ಆ ಮನೆಯ ಜನ ನಿಮಗೆ ಮತ್ತು ನೀವು ಅವರಿಗೆ ಅಪರಿಚಿತರಾಗಿರಬಹುದು. ಅಂಥ ಮನೆಗೆ ಹೋದಾಗ, ನಿಮಗೆ ಬೆಲೆ ಸಿಗದಿದ್ದಲ್ಲಿ, ನೀವು ಇನ್ನೆಂದಿಗೂ ಅಂಥ ಮನೆಗೆ ಹೋಗಕೂಡದು. ಬರೀ ಸ್ನೇಹಿತರ ಮನೆ ಅಲ್ಲ, ಕೆಲವೊಮ್ಮೆ ಸಂಬಂಧಿಕರು ಕೂಡ ನಮ್ಮನ್ನು ನಿರ್ಲಕ್ಷಿಸುತ್ತಾರೆ. ಯಾಕಾದ್ರೂ ಬಂದನೋ, ಇವನಿಗೆ ಬೇರೆ ಸತ್ಕಾರ ಮಾಡಬೇಕು ಅನ್ನೋ ರೀತಿ ನಡೆದುಕೊಳ್ಳುತ್ತಾರೆ. ಅಂಥ ಸಂಬಂಧಗಳಿಂದ ನಾವು ದೂರವಿರುವುದೇ ಉತ್ತಮ ಅಂತಾರೆ ಚಾಣಕ್ಯರು.
ಕೆಲವೊಮ್ಮೆ ಅವರಾಡುವ ಮಾತುಗಳು ನಮ್ಮ ಮಾನಸಿಕ ನೆಮ್ಮದಿ ಹಾಳು ಮಾಡಬಹುದು. ಇನ್ನು ಸಂಬಂಧಿಕರ ಮನೆಯಲ್ಲಿ ಕೊಂಚ ದಿನವಿದ್ದು, ಆ ಊರಿನಲ್ಲೇ ಕೆಲಸ ಹುಡುಕಬೇಕಾದ, ಅಥವಾ ಶಾಲೆ, ಕಾಲೇಜು, ಹಾಸ್ಟೇಲು ಹುಡುಕಬೇಕಾದ ಪರಿಸ್ಥಿತಿ ಇರುತ್ತದೆ. ಅಂಥ ಸಮಯದಲ್ಲಿ ಆದಷ್ಟು ಬೇಗ ನಿಮ್ಮ ಕೆಲಸ ಮುಗಿಸಿಬಿಡಿ. ಹೆಚ್ಚು ದಿನ ಸಂಬಂಧಿಕರ ಮನೆಯಲ್ಲಿದ್ದರೆ, ನಿಮಗೂ ಗೌರವ ಸಿಗುವುದಿಲ್ಲ, ನಿಮ್ಮ ಕುಟುಂಬಸ್ಥರಿಗೂ ಗೌರವ ಸಿಗುವುದಿಲ್ಲ. ಅಲ್ಲದೇ, ಮಾನಸಿಕ ನೆಮ್ಮದಿ ಹಾಳಾಗುತ್ತದೆ. ನಿಮಗೆ ಸ್ವಾತಂತ್ರ್ಯವಿರುವುದಿಲ್ಲ. ಅಲ್ಲದೇ, ಗೌರವವಿಲ್ಲದ ಜಾಗ ಯಾವುದಿದ್ದರೂ, ಅಲ್ಲಿ ಇರಬಾರದು ಅಂತಾರೆ ಚಾಣಕ್ಯರು.
ಪತ್ನಿಯಲ್ಲಿ ಇಂಥ ಗುಣವಿದ್ದರೆ, ಪತಿ ಶ್ರೀಮಂತನಾಗುವುದು ಗ್ಯಾರಂಟಿ ಅಂತಾರೆ ಚಾಣಕ್ಯರು