Wednesday, February 5, 2025

Latest Posts

Doddaballapura : ಪಾಗಲ್ ಪ್ರೇಮಿಯಿಂದ ಚಾಕು ಇರಿತ..!

- Advertisement -

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ (Doddaballapura) ಯೋಗಿ ನಾರಾಯಣಪ್ಪ ಬಡಾವಣೆಯಲ್ಲಿ (Yogi Narayanappa Layout) ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪಾಗಲ್ ಪ್ರೇಮಿಯೊಬ್ಬ ಪ್ರಿಯತಮೆಯ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಪ್ರಭಾವತಿ ಚಾಕು ಇರಿತಕ್ಕೆ ಒಳಗಾದ ಯುವತಿ. ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ (government hospital) ಪ್ರಭಾವತಿ ಸ್ಟಾಪ್ ನರ್ಸ್ (Stop Nurse) ಆಗಿ ಕೆಲಸ ಮಾಡುತ್ತಿದ್ದಳು. ಅದೇ ಆಸ್ಪತ್ರೆಯಲ್ಲಿ ಗಿರೀಶ್ ಎಂಬ ವ್ಯಕ್ತಿ ಅಕೌಂಟೆಂಟ್ (Accountant) ಆಗಿ ಕೆಲಸ ಮಾಡುತ್ತಿದ್ದೆ. ಈ ಹಿನ್ನೆಲೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ನಂತರ ಎರಡು ಕುಟುಂಬದ ಒಪ್ಪಿಗೆಯ ಮೇರೆಗೆ ಮದುವೆ ಮಾತುಕತೆ ಕೂಡ ನಡೆದಿತ್ತು. ಕೆಲ ದಿನಗಳ ಹಿಂದೆ ಮದುವೆ ಆಗಲು ಹುಡುಗಿ ಮನೆಯಿಂದ ನಿರಾಕರಣೆ ಆಗಿತ್ತು. ಮನನೊಂದ ಹುಡುಗ ಗಿರೀಶ್ ಇವತ್ತು ಮನೆಗೆ ಬಂದು ಇವತ್ತೇ ಪ್ರಭಾವತಿ ಗೆ ಚಾಕು ಇರಿದಿದ್ದಾನೆ. ಪ್ರಭಾವತಿಗೆ ಕತ್ತು , ಹೊಟ್ಟೆ, ಬೆನ್ನಿಗೆ ಇರಿದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಪ್ರಕರಣ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ (Doddaballapura Town Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest Posts

Don't Miss