Saturday, July 20, 2024

Latest Posts

APPU ಅಭಿನಯದ ಜೇಮ್ಸ್ ಚಿತ್ರದ ಟೀಸರ್ ಇಂದು ಬಿಡುಗಡೆ..!

- Advertisement -

ಬೆಂಗಳೂರು : ಅಪ್ಪು ಅಭಿಮಾನಿಗಳೆಲ್ಲರೂ ಕಾತುರದಿಂದ ಕಾಯುತ್ತಿದ್ದ ನಮ್ಮೆಲ್ಲರ ನೆಚ್ಚಿನ ಪುನೀತ್ ರಾಜಕುಮಾರ್ (Puneeth Rajkumar) ಅವರ ಜೇಮ್ಸ್ ಚಿತ್ರದ ಟೀಸರ್ (Teaser of the movie James) ಇಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಇದರಲ್ಲಿ ಅಪ್ಪು ಈ ಹಿಂದೆ ಎಂದೂ ಕಂಡಿರದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾದ ಟೀಸರ್ ಕಂಡು ಅಪ್ಪು ಫ್ಯಾನ್ಸ್ (Appu Fans) ತುಂಬಾ ಖುಷಿಯಾಗಿದ್ದಾರೆ. ಕನ್ನಡಿಗರು ಮಾತ್ರವಲ್ಲದೆ, ದೇಶದಾದ್ಯಂತ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಬಿಡುಗಡೆಗೆ ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಟೀಸರ್ ನಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಸಕ್ಕತ್ ಆಕ್ಷನ್ ದೃಶ್ಯಗಳು ಇವೆ. ಅಪ್ಪು ಗನ್ ಹಿಡಿದು ಮಿಂಚಿದರೆ, ಟೀಸರ್ ಕೊನೆಯಲ್ಲಿ ನನಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿ ಅಭ್ಯಾಸ ಎನ್ನುವ ಶಿವಣ್ಣನವರ ಪಂಚಿಂಗ್ ಡೈಲಾಗ್ (Shivanna’s Punching Dialogue) ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿರುವಂತಹ ಜೇಮ್ಸ್ ನಲ್ಲಿ ಅಪ್ಪು ಸೋಲ್ಜರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾದಲ್ಲಿ ಶಿವರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಒಟ್ಟಿಗೆ ನಟಿಸಿರುವ ಮೊದಲ ಸಿನಿಮಾ. ಇನ್ನು ಮಾರ್ಚ್ 17ರಂದು (On March 17th) ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನದಂದೇ ಜೇಮ್ಸ್ ಚಿತ್ರ ಬಿಡುಗಡೆಯಾಗಲಿರುವುದು ಅಪ್ಪು ಅಭಿಮಾನಿಗಳಿಗೆ ಸಕ್ಕತ್ ಖುಷಿಯಾಗುತ್ತೆ ಇರುವಂತಹ ವಿಚಾರವಾಗಿದೆ. ಇನ್ನು ಜೇಮ್ಸ್ ಚಿತ್ರವನ್ನು ಕನ್ನಡ ಸೇರಿದಂತೆ ತೆಲುಗು ತಮಿಳು ಹಿಂದಿ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

- Advertisement -

Latest Posts

Don't Miss