‘ಮೊಬೈಲ್ ಬಿಡಿ, ಪುಸ್ತಕ ಓದಿ.. ಸ್ವಾರ್ಥ, ಅಹಂಕಾರ, ದುರಾಸೆ ಬಿಡಿ ದೇವರನ್ನು ಕಾಣಿ ‘

ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಹಲವು ವಿಷಯಗಳನ್ನ ಹೇಳಿದ್ದಾರೆ. ತಮ್ಮ ಸಿನಿ ಜರ್ನಿ ಬಗ್ಗೆ, ತಾವು ಸಿನಿಮಾ ಮಾಡುವ ಕಾಲದಲ್ಲಿ, ರಂಗಭೂಮಿಯಲ್ಲಿದ್ದ ಕಾಲದಲ್ಲಿ ಹೇಗಿತ್ತು ಅನ್ನೋ ಬಗ್ಗೆ, ಮತ್ತು ತಮ್ಮ ಸಹ ಕಲಾವಿದರು ಹೇಗಿದ್ದರು ಅನ್ನೋ ಬಗ್ಗೆಯೂ ಹೇಳಿದ್ದಾರೆ. ಅಲ್ಲದೇ ಜೀವನ ಪಾಠವೂ ಹೇಳಿದ್ದಾರೆ.

ದೊಡ್ಡಣ್ಣರ ಪ್ರಕಾರ, ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಹೊರತು. ಮೊಬೈಲ್ ಬಳಕೆಯಿಂದ ಜ್ಞಾನ ವೃದ್ಧಿಯಾಗುವುದಿಲ್ಲ. ನೀವು ಮೊಬೈಲ್ ಬಳಕೆ ಬಿಟ್ಟು ಸ್ವಲ್ಪ ದಿನ ಪುಸ್ತಕ ಓದಿ. ನಿಮ್ಮಲ್ಲಿ ಎಂಥ ನಾಲೆಜ್ ಬೆಳೆದಿದೆ, ನಿಮ್ಮಲ್ಲೆಷ್ಟು ಬದಲಾವಣೆಯಾಗಿದೆ ಎಂದು ನಿಮಗೇ ಆಶ್ಚರ್ಯವಾಗುತ್ತದೆ. ಇಷ್ಟು ದಿನ ನಾನೆಂಥ ಕಂದಾಚಾರ ನಂಬಿದ್ದೆ. ಪುಸ್ತದಲ್ಲಿ ಎಷ್ಟೆಲ್ಲ ಜ್ಞಾನವಿದೆ, ಎಷ್ಟೆಲ್ಲ ಉತ್ತಮವಾದ ವಿಷಯವಿದೆ ಅನ್ನೋದು ನಿಮಗೆ ಗೊತ್ತಾಗುತ್ತದೆ ಅಂತಾರೆ ದೊಡ್ಡಣ್ಣ.

ಮನುಷ್ಯ ಸ್ವಾರ್ಥ, ಅಹಂಕಾರ, ದುರಾಸೆ ಬಿಟ್ಟರೆ ದೇವರನ್ನು ಕಾಣಬಹುದು. ನನ್ನಿಂದಾನೇ ಆಗಿದ್ದು, ನಾನೇ ಮಾಡಿಸಿದ್ದು, ಎಲ್ಲ ನನಗೇ ಬೇಕು ಅನ್ನೋದು ಸ್ವಾರ್ಥ. ಎಷ್ಟು ಕೊಟ್ಟರೂ ಇನ್ನೂ ಬೇಕು ಅನ್ನೋದು ದುರಾಸೆ. ಇನ್ನು ಸುಯೋಧನನನ್ನು ಸಸಾರ ಪೃಥ್ವಿ ಒಡೆಯ ಎಂದು ಕರೆಯುತ್ತಾರೆ. ಅಂಥ ಒಡೆಯ ಅಹಂಕಾರದಿಂದ ದುರ್ಯೋಧನನಾದ. ಹಾಗಾಗಿ ಅಹಂಕಾರ, ದುರಾಸೆ, ಸ್ವಾರ್ಥ ಬಿಟ್ಟರೆ ಮನುಷ್ಯ ದೇವರನ್ನು ಕಾಣಬಹುದು ಅಂತಾರೆ ದೊಡ್ಡಣ್ಣ.

About The Author