Thursday, December 4, 2025

Latest Posts

ಲಹರಿ ವೇಲುಗೆ ರಾಜಕಾರಣ ಬೇಕಾ? ಅಕ್ರಮಗಳು-ಸುಳ್ಳಿನ ಕಂತೆಗಳು!: Lahari Velu Podcast

- Advertisement -

Sandalwood: ಲಹರಿ ಸಂಸ್ಥೆ ಸಂಸ್ಥಾಪಕ ಲಹರಿ ವೇಲು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ.

ನಿಮ್ಮ ಪ್ಲಸ್-ಮೈನಸ್ ಹೇಳೋದಾದ್ರೆ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಲಹರಿ ವೇಲು, ಪ್ಲಸ್ ನನ್ನ ಫ್ಯಾಮಿಲಿ. ನಾನು ಏನೇ ಕೆಲಸ ಮಾಡಿದ್ರೂ ಬೆಂಬಲವಾಗಿ ನನ್ನ ಫ್ಯಾಮಿಲಿ ನನ್ನ ಜತೆ ಇರುತ್ತದೆ. ನನ್ನ ಸ್ನೇಹಿತರೂ ನನ್ನನ್ನು ಬೆಂಬಲಿಸುತ್ತಾರೆ. ನನ್ನ ಮೈನಸ್ ಅಂದ್ರೆ, ನಾನು ತುಂಬಾ ಸೆನ್ಸಿಟಿವ್. ನನ್ನ ಪತ್ನಿನೂ ಅದನ್ನ ಹ್ಯಾಂಡಲ್ ಮಾಡೋಕ್ಕಾಗಲ್ಲ ಅಂತಾರೆ ಲಹರಿ.

ಇನ್ನು ರಾಾಜಕಾರಣದ ಬಗ್ಗೆ ಉತ್ತರಿಸಿದ ಲಹರಿ ವೇಲು, ಬಿಜೆಪಿಗೆ ನಾನು ಬಂದಾಗ, ನನ್ನ ಸ್ನೇಹಿತರು, ಪತ್ರಿಕಾ ಮಿತ್ರರು ಸೇರಿ ಲಹರಿಗೆ ರಾಜಕಾರಣ ಬೇಕಾ ಎಂದು ಪ್ರಶ್ನಿಸಿದ್ದರು. ಅಲ್ಲದೇ ರಾಜಕಾರಣ ಅಂದ್ರೆ ಗಲೀಜು, ಅಂಥವರ ಹಿಂದೆ ನೀವು ಇರಕ್ಕಾಗಲ್ಲ ಎಂದು ಹಲವರು ಸಲಹೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ನಾನು ರಾಜಕಾರಣದಲ್ಲಿ ಎಲ್ಲರೂ ಕೆಟ್ಟವರು ಅಂತಾನೇ ಹೇಳಲಾಗುತ್ತದೆ. ಆದರೆ ಮೌಲ್ಯಯುತವಾಗಿ ಬದುಕಿ ಹೋದವರಿದ್ದಾರೆ. ಇಂದು ನಾನು ಯುವ ಪೀಳಿಗೆಯವರಿಗೆ ರಾಜಕೀಯಕ್ಕೆ ಹೋಗಬೇಡಿ ಅಂದ್ರೆ, ನಮ್ಮ ದೇಶ ಭವಿಷ್ಯದಲ್ಲಿ ಛಿದ್ರ ಛಿದ್ರವಾಗತ್ತೆ ಅಂತಾ ಹೇಳಿದ್ರಂತೆ ವೇಲು. ಅವರ ಜೀವನದ ಇನ್ನಷ್ಟು ಸ್ವಾರಸ್ಯಕರ ಸಂಗತಿಗಳನ್ನು ತಿಳಿಯಲು ವೀಡಿಯೋ ನೋಡಿ.

- Advertisement -

Latest Posts

Don't Miss