`ಹೆಂಗೆ ನಾವು’ ಅಂತ ಕೇಳ್ತಾ ಕೇಳ್ತಾ ಕನ್ನಡಿಗರ ಮನಸ್ಸು ಗೆದ್ದ ಅಪ್ಪಟ ಕನ್ನಡದ ಕ್ಯೂಟ್ ಬ್ಯೂಟಿ ರಚನಾ ಇಂದರ್. ಈ ಸುಂದರಿ ವರ್ಷವಿಡೀ ನಿಮ್ಮನ್ನು ರಂಜಿಸೋಕೆ ಹೊಸ ಹೊಸ ಸಿನಿಮಾಗಳ ಮೂಲಕ ಬರುತ್ತಿದ್ದಾರೆ. ಸದ್ಯ ನಿರ್ದೇಶಕ ಶಶಾಂಕ್‌ರ `ಲವ್ ೩೬೦’ ಟ್ರೆöÊಲರ್ ರಿಲೀಸ್ ಆಗಿ ಸೂಪರ್‌ಹಿಟ್ ಆಗಿದೆ. ಎರಡನೇ ಸಿನಿಮಾದಲ್ಲೇ ರಚಾನಾರಿಗೆ ಪರ್ಫಾಮೆನ್ಸ್ ಇರುವ ಕ್ಯಾರೆಕ್ಟರ್ ಸಿಕ್ಕಿದೆ. ಮುಂದಿನ ಸಿನಿಮಾ ಗೋಲ್ಡನ್‌ಸ್ಟಾರ್ ಗಣೇಶ್ ಜೊತೆ ಅಭಿನಯಿಸಿರೋ ತ್ರಿಬಲ್ ರೈಡಿಂಗ್ ಕೂಡ ಶೂಟ್ ಮುಗಿಸಿದೆ. ರಿಷಭ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಕೂಡ ರಿಲೀಸ್ ಹತ್ತಿರ ಬಂದು ನಿಂತಿದೆ.
ಮೂರು ಬಿಗ್ ಸಿನಿಮಾಗಳ ಮೂಲಕ ರ‍್ತಿರೋ ರಚನಾ ಈಗ ಎಂ.ಬಿ.ಎ ಎಕ್ಸಾಂ ಕೂಡ ಬರೆಯುತ್ತಿದ್ದು ಸದ್ಯ ಸ್ಯಾಂಡಲ್‌ವುಡ್‌ನ ಲಕ್ಕಿ ಬ್ಯೂಟಿ ಅಂತಾನೇ ಹೇಳಬಹುದು. ಮಾಧ್ಯಮಗಳ ಮುಂದೆ ಹೆಚ್ಚು ಕಾಣಿಸಿಕೊಳ್ಳದ ರಚನಾ ತಮ್ಮ ಬಾಲ್ಯ, ಸ್ಕೂಲ್ ದಿನಗಳು ಮತ್ತು ಕಾಲೇಜು ದಿನಗಳ ಜೊತೆ ಸಿನಿಮಾ ಕನಸುಗಳನ್ನೂ ಬಿಚ್ಚಿಟ್ಟಿದ್ದಾರೆ. ಕಡಿಮೆ ಮಾತನಾಡೋ ಈ ಚೆಂದದ ಚೆಲುವೆಯ ಮಾತುಗಳನ್ನೂ ಕೇಳೋದು ಕೂಡ ಚಂದ. ಗೋಲ್ಡನ್‌ಸ್ಟಾರ್ ಜೊತೆ ನಾಯಕಿಯಾದ ಅನುಭವ, ರಿಷಭ್ ಶೆಟ್ಟಿಯವರ ಮಾಡೋ ಹೆಂಗೆ ನಾವು ತಮಾಷೆಗಳು ಈಗಿನ ಸಿನಿಮಾ ನೆನಪುಗಳಾದ್ರೆ ಬಾಲ್ಯದ ದಿನಗಳು, ಅಣ್ಣನ ಜೊತೆ ಆಟ ಪಾಠಗಳ ನೆನಪುಗಳನ್ನು ಮೆಲುಕು ಹಾಕಿದ್ರು ರಚನಾ.
ಸುದೀಪ್-ದರ್ಶನ್, ರಾಧಿಕಾ ಪಂಡಿತ್.? ರಚಿತಾ ರಾಮ್..? ಇವರಲ್ಲಿ ಯಾರು ಫೇವರೆಟ್ ಅಂದ್ರೆ ಮಾತ್ರ ನಾನ್ ಹೇಳ್ಲಾ ಅಂತ ಕೇಳಿ ಹೆಂಗೆ ನಾವು ಅಂತ ಹೇಳೋಕೆ ರೆಡೀನೇ ಇರಲಿಲ್ಲ. ಹಿಂಗೆಲ್ಲಾ ಕೇಳ್ಬೇಡಿ ನೀವು ಕಷ್ಟ ಆಗುತ್ತೆ ಅಂತ ಉತ್ತರ ಕೊಡೋಕೆ ಪರದಾಡಿದ ಲವ್ ಮಾಕ್ಟೇಲ್ ಅದಿತಿ ಈಗ ಕನ್ನಡದ ಭರವಸೆಯ ನಟಿಯಾಗುವ ಎಲ್ಲಾ ಲಕ್ಷಣಗಳನ್ನೂ ತೋರಿಸ್ತಿದ್ದಾರೆ. ಅವರಿಗೆ ನಮ್ಮ ಕಡೆಯಿಂದಾನೂ ಅಲ್ ದ ಬೆಸ್ಟ್. ಅಪರೂಪಕ್ಕೆ ಸಿಗೋ ಕನ್ನಡದ ಈ ಅನುರೂಪದ ಸುಂದರಿಯ ಫುಲ್ ಇಂಟರ್‌ವ್ಯೂ ಸದ್ಯದಲ್ಲೇ ನೋಡಿ ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ.
ಓಂ,
ಕರ್ನಾಟಕ ಟಿವಿ