Devotional:
ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ, ಸಡಗರ ಸಂಭ್ರಮದಿಂದ ಬಂಧು ಮಿತ್ರರೊಂದಿಗೆ, ಹೊಸ ಬಟ್ಟೆಗಳನ್ನು ತೊಟ್ಟು, ಬಗೆಬಗೆಯ ಸಿಹಿತಿನಿಸುಗಳನ್ನು ಮಾಡಿ ಸಂಭ್ರಮಿಸುತ್ತಾರೆ. ಮಹಾಲಕ್ಷ್ಮೀಯನ್ನು ಪೂಜಿಸಿ ಮನೆತುಂಬಿಸಿ ಕೊಳ್ಳುವ ಹಬ್ಬ ದೀಪಾವಳಿ.ಕೆಲವು ಕಡೆ ಉಡುಗೊರೆಗಳನ್ನು ನೀಡುವುದು ದೀಪಾವಳಿ ಆಚರಣೆಯ ಒಂದು ಭಾಗವಾಗಿದೆ, ಆದರೆ ಕೆಲವು ಉಡುಗೊರೆಗಳನ್ನು ನೀಡುವುದು, ಕೆಲವು ಉಡುಗೊರೆಗಳನ್ನು ಸ್ವೀಕರಿಸುವುದು ಅಮಂಗಳ ಎಂದು ಹೇಳಲಾಗುತ್ತದೆ.ಹಾಗಾದರೆ ದೀಪಾವಳಿಯಲ್ಲಿ ಯಾವ ಉಡುಗೊರೆಗಳನ್ನು ನೀಡಬಾರದು ಮತ್ತು ಯಾವ ಉಡುಗೊರೆಗಳನ್ನು ಸ್ವೀಕರಿಸಬಾರದು ಎಂಬುದರ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ.
ದೀಪಾವಳಿ ಹಬ್ಬವೇ ಒಂದು ವಿಶೇಷವಾದರೆ, ದೀಪಾವಳಿಯ ದಿನದಂದು ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ನೀಡುವ ಉಡುಗೊರೆಯು ಮತ್ತಷ್ಟು ವಿಶೇಷ. ದೀಪಾವಳಿ ಹಬ್ಬದಂದು ನೀವು ನೀಡುವ ಉಡುಗೊರೆಗಳು ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀಳುತ್ತದೆ .ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಉಡುಗೊರೆಗಳನ್ನು ನೀಡಲು, ಹಲವಾರು ದಿನಗಳ ಮುಂಚಿತವಾಗಿ ಪ್ರಾರಂಭಿಸುತ್ತಾರೆ,ದೀಪಾವಳಿಯ ದಿನ ಕೊಡುವ ಉಡುಗೊರೆಗಳ ಪರಿಣಾಮವೇನೆನ್ನುವುದರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಕೆಲವು ಉಡುಗೊರೆಯನ್ನು ನೀಡುವುದರಿಂದ ನಿಮ್ಮ ಭವಿಷ್ಯದ ಮೇಲೆ ಮಾತ್ರವಲ್ಲದೆ, ಉಡುಗೊರೆ ತೆಗೆದು ಕೊಳ್ಳುವವರ ಭವಿಷ್ಯದ ಮೇಲೂ ಪರಿಣಾಮ ಬೀಳುತ್ತದೆ .
ದೀಪಾವಳಿಯ ದಿನ ಕುಬೇರ ದೇವಿಯನ್ನು ಹೊಂದಿರುವ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಉಡುಗೊರೆಯಾಗಿ ನೀಡಬಾರದು .ಇದನ್ನೂ ಉಡುಗೊರೆಯಾಗಿ ನೀಡುವವರಿಗೆ ಶ್ರೇಯಸ್ಕರವಲ್ಲ ಹಾಗೂ ಈ ದಿನ ಲಕ್ಷ್ಮೀ ದೇವಿಯ ವಿಗ್ರಹವನ್ನು ಉಡುಗೊರೆಯಾಗಿ ನೀಡಬಾರದು ,ಹೀಗೆ ನೀಡಿದರೆ ನೀವು ನಿಮ್ಮ ಅದೃಷ್ಟವನ್ನು ಇತರರಿಗೆ ನೀಡುತ್ತಿದ್ದೀರಿ ಎಂದರ್ಥ. ಚಾಕು, ಕತ್ತರಿಯನ್ನು ಅಥವಾ ತೀಕ್ಷ್ಣವಾದ ಅಂಚುಗಳನ್ನು ಹೊಂದಿರುವ ಯಾವುದೇ ವಸ್ತುವನ್ನು ಉಡುಗೊರೆಯಾಗಿ ನೀಡಬೇಡಿ ಹಾಗೂ ಈ ವಸ್ತುವನ್ನು ಖರೀದಿಸಬಾರದು. ನಾಣ್ಯ ಅಥವಾ ಹಣವನ್ನು ನೀಡಬಾರದು,ಈ ದಿನಗಳಲ್ಲಿ ಯಾರಿಗೂ ಕೂಡ ಕೊತ್ತಂಬರಿ ನೀಡಬಾರದು. ಕೊತ್ತಂಬರಿ ಸಂಪತ್ತನ್ನು ಹೆಚ್ಚಿಸುವ ಒಂದು ಅಂಶವೆಂದು ಪರಿಗಣಿಸಲಾಗುತ್ತದೆ, ಮತ್ತು ಕೊತ್ತಂಬರಿಯನ್ನು ಲಕ್ಷ್ಮಿ ದೇವಿಯ ಆರಾಧನೆಯಲ್ಲಿ ಬಳಸಲಾಗುತ್ತದೆ. ಮುಳ್ಳು ಸಸ್ಯಗಳ ಫೋಟೋಗಳನ್ನು ಉಡುಗೊರೆಯಾಗಿ ನೀಡಬಾರದು ಹಾಗೂ ದೇವತೆಗಳು ಹೋರಾಟ ನಡೆಸುತ್ತಿರುವುದು ಅಥವಾ ಉಗ್ರಸ್ವರೂಪಿಯಾಗಿರುವ ಚಿತ್ರಗಳನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು ಹಾಗೂ ನೀವು ತೆಗೆದುಕೊಳ್ಳಬಾರದು .
ದೀಪಾವಳಿಯ ಸಂದರ್ಭದಲ್ಲಿ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಸಿಹಿತಿಂಡಿಗಳನ್ನು ನೀಡಬೇಕು ದೀಪಾವಳಿ ದಿನದಂದು ಸಿಹಿತಿಂಡಿಗಳನ್ನು ನೀಡುವುದರಿಂದ,ನಿಮ್ಮ ಮದ್ಯೆ ಮಾಧುರ್ಯ ಹೆಚ್ಚುತ್ತದೆ ಎನ್ನುವ ನಂಬಿಕೆಯಿದೆ.
2023ರ ನಂತರ ಈ ಮೂರು ರಾಶಿಗಳಿಗೆ ಶುರುವಾಗಲಿದೆ ಕೆಟ್ಟ ಸಮಯ ನಿಮ್ಮ ರಾಶಿಯು ಕೂಡ ಇದರಲ್ಲಿ ಇದ್ಯಾ …?
ಜ್ಯೋತಿಷ್ಯದ ಪ್ರಕಾರ ಮಂಗಳವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

