ಕೋಲಾರ : ಐಪಿಎಸ್ ಅಧಿಕಾರಿ ರಾಜಕುಮಾರ್ ಅವರ ಸಿನಿಮಾಗಳನ್ನು ನೋಡಿ ಕನ್ನಡ ಕಲಿತು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ..ಅನೇಕ ಜನರು ಹೊರ ರಾಜ್ಯದಿಂದ ಬಂದವರ ಜೊತೆಗೆ ಅವರ ಮಾತೃಭಾಷೆಯಲ್ಲಿಯೇ ಮಾತನಾಡಲು ಪ್ರಯತ್ನ ಮಾಡುತ್ತಾರೆ. ಆದರೆ ಕೆಲವರು ಮಾತ್ರ ಕರ್ನಾಟಕಕ್ಕೆ ಬಂದ ಕೂಡಲೇ ಕನ್ನಡ ಕಲಿಯಲು ಆರಂಭಿಸಿ ಕನ್ನಡ ಪ್ರೇಮವನ್ನ ಮೆರೆಯುತ್ತಾರೆ..
ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ, ಚಂದನವನದ ರಾಜ, ಕನ್ನಡಿಗರ ಪಾಲಿನ ಅಣ್ಣಾವ್ರು, ವರನಟ ಡಾ. ರಾಜ್ ಕುಮಾರ್ ಅವರ ಸಿನಿಮಾಗಳನ್ನು ನೋಡದ ವ್ಯಕ್ತಿಯೇ ಇಲ್ಲ ಡಾ.. ರಾಜಕುಮಾರ್. ಸಾವಿರಾರು ಜನಗಳ ಪಾಲಿಗೆ ಅವರ ಸಿನಿಮಾಗಳು ಸ್ಪೂರ್ತಿ ಆಗುತ್ತಿದ್ದವು… ರಾಜಕುಮಾರ್ ನಟಿಸಿದ ಬಂಗಾರದಂತಹ ಮನುಷ್ಯ ಸಿನಿಮಾ ನೋಡಿ ಅದೆಷ್ಟು ಜನ ಯುವಕರು ಪಟ್ಟಣ ಬಿಟ್ಟು ಹಳ್ಳಿಗೆ ಬಂದು ಮತ್ತೆ ವ್ಯವಸಾಯದಲ್ಲಿ ತೊಡಗಿಕೊಂಡರು ಅಂದ್ರೆ ರಾಜ್ ಅವರ ಸಿನಿಮಾಗಳಲ್ಲಿ ಬದುಕಿನ ಪಾಠ ಅಷ್ಟರಮಟ್ಟಿಗೆ ಇತ್ತು. ಸದಾ ಕಾಲಕ್ಕೂ ಎಲ್ಲರಿಗೂ ಸ್ಫೂರ್ತಿಯಾಗಿರುವ ರಾಜಕುಮಾರ್ ಅವರು ಈಗ ಐಪಿಎಸ್ ಅಧಿಕಾರಿ ಒಬ್ಬರ ಪಾಲಿಗೆ ಸ್ಫೂರ್ತಿಯಾಗಿದ್ದಾರೆ…
ಅನೇಕ ಜನರು ಹೊರ ರಾಜ್ಯದಿಂದ ಬಂದವರ ಜೊತೆಗೆ ಅವರ ಮಾತೃಭಾಷೆಯಲ್ಲಿಯೇ ಮಾತನಾಡಲು ಪ್ರಯತ್ನ ಮಾಡುತ್ತಾರೆ.. ಕನ್ನಡ ಕಬ್ಬಿಣದ ಕಡಲೆ ಎಂದು ಕೊಂಡು ಕನ್ನಡ ಕಲಿಯುವ ಗೋಜಿಗೆ ಹೋಗುವುದಿಲ್ಲ.
ಆದರೆ ಕೆಲವರು ಮಾತ್ರ ಕರ್ನಾಟಕಕ್ಕೆ ಬಂದ ಕೂಡಲೇ ಕನ್ನಡ ಕಲಿಯಲು ಆರಂಭಿಸಿ ಕನ್ನಡ ಪ್ರೇಮವನ್ನ ಮೆರೆಯುತ್ತಾರೆ. ಇಲ್ಲೊಬ್ಬ ಐಪಿಎಸ್ ಅಧಿಕಾರಿ ರಾಜಕುಮಾರ್ ಅವರ ಸಿನಿಮಾಗಳನ್ನು ನೋಡಿ ಕನ್ನಡ ಕಲಿತು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ..
ಹೌದು. ಕೋಲಾರ ಜಿಲ್ಲೆಯ ಜಿಲ್ಲಾ ರಕ್ಷಣಾಧಿಕಾರಿ ಯಾಗಿರುವ ಡಿ. ಕಿಶೋರ್ ಬಾಬು ಅವರು, ಅಣ್ಣಾವ್ರ ಸಿನಿಮಾಗಳನ್ನು ನೋಡಿ ಕನ್ನಡ ಮಾತನಾಡಲು ಕಲಿತು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.