Tuesday, October 15, 2024

Latest Posts

ಲಂಡನ್ ನಲ್ಲಿ ಪತ್ನಿಯೊಂದಿಗೆ ಶಿವಣ್ಣ ಜಾಲಿ ರೌಂಡ್ಸ್

- Advertisement -

ಯಶಸ್ವಿ ಭುಜದ ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿರುವ ಶಿವಣ್ಣ, ಪತ್ನಿ ಗೀತಾ ಅವರ ಜೊತೆ ಲಂಡನ್ ರೌಂಡ್ಸ್ ಹಾಕುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಭುಜದ ನೋವಿನಿಂದ ಬಳಲುತ್ತಿದ್ದ ಶಿವಣ್ಣ, ಇತ್ತೀಚೆಗಷ್ಟೇ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ರು. ಅಲ್ಲೇ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಿವಣ್ಣ, ತಮ್ಮ ಹುಟ್ಟುಹಬ್ಬವನ್ನು ಸಹಿತ, ಅಲ್ಲಿಯೇ ಆಚರಿಸಿಕೊಂಡಿದ್ದಾರು. ಸದ್ಯ ರೆಸ್ಟ್ ನಲ್ಲಿರುವ ಡಾ. ಶಿವರಾಜ್ ಕುಮಾರ್, ಪತ್ನಿಯೊಂದಿಗೆ ಲಂಡನ್ ಸುತ್ತುತ್ತಿದ್ದಾರೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾತೆ ತೆರೆದಿರುವ ಶಿವಣ್ಣ, “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು. ಲಂಡನ್ ಬಂದ್ಮೇಲೆ ಊರೆಲ್ಲ ಸುತ್ತ ಬೇಕು” ಅಂತ ಟ್ವಿಟರ್ ಮಾಡಿದ್ದಾರೆ. ಜೊತೆಗೆ ನಾನು ಹಾಗು ನನ್ನ ಗೀತಾ ಅಂತ ಬರೆದು ಕೊಂಡಿದ್ದಾರೆ.

https://www.youtube.com/watch?v=YFTWCF4XEVU
- Advertisement -

Latest Posts

Don't Miss