Health Tips: ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇಂಥ ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವೇನು..? ಇದಕ್ಕೆ ಚಿಕಿತ್ಸೆ ಹೇಗೆ ತೆಗೆದುಕೊಳ್ಳಬೇಕು ಎಂದು ಈಗಾಗಲೇ ಕರ್ನಾಟಕ ಟಿವಿ ಹೆಲ್ತ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವು ವೈದ್ಯರು ಬಂದು ವಿವರಿಸಿದ್ದಾರೆ. ಅದೇ ರೀತಿ ಇಂದು ಕಿಡ್ನಿ ಪ್ರಾಬ್ಲಮ್ ಪುರುಷರಿಗೆ ಹೆಚ್ಚಾ..? ಮಹಿಳೆಯರಿಗೆ ಹೆಚ್ಚಾ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ ಸ್ತ್ರೀಯರಿಗೆ ಹೋಲಿಸಿದರೆ, ಪುರುಷರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಏಕೆಂದರೆ, ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಈ ಸಮಸ್ಯೆಯನ್ನು ನೆಗ್ಲೆಕ್ಟ್ ಮಾಡಲು ಶುರು ಮಾಡುತ್ತಾರೆ. ಹಾಗಾಗಿ ಪುರುಷರಲ್ಲಿ ಕಿಡ್ನಿಯಲ್ಲಿ ಕಲ್ಲಾಗುವ ಸಮಸ್ಯೆ ಹೆಚ್ಚು ಅಂತಾರೆ ವೈದ್ಯರು.
ಈ ಸಮಸ್ಯೆ ಉದ್ಭವಿಸಬಾರದು ಅಂದ್ರೆ ನೀವು ಚೆನ್ನಾಗಿ ನೀರು ಕುಡಿಯಬೇಕು. ನಿಮಗೆ ಜೀರ್ಣಿಸಿಕೊಳ್ಳಲು ಸಾಧ್ಯವಿರುವಷ್ಟು ನೀರಿನ ಸೇವನೆ ಮಾಡಬೇಕು. ಯಾವಾಗಲಾದರೂ ಮೂತ್ರ ವಿಸರ್ಜನೆ ಅಪರೂಪವಾದರೆ ತೊಂದರೆ ಇಲ್ಲ. ಆದರೆ ಪ್ರತಿದಿನ ಮೂತ್ರ ವಿಸರ್ಜನೆ ಸರಿಯಾಗಿ ಆಗಬೇಕು. ಆದರೆ 5ರಿಂದ 10 ನಿಮಿಷಕ್ಕೊಮ್ಮೆ ನಿಮಗೆ ಮೂತ್ರ ವಿಸರ್ಜಿಸಬೇಕು ಅಥವಾ ಪದೇ ಪದೇ ಮೂತ್ರ ಬರುತ್ತಲೇ ಇದೆ ಅಂದಾಗ, ಆರೋಗ್ಯ ಸಮಸ್ಯೆ ಇದೆ ಎಂದರ್ಥ. ಹಾಗಂತ ಯಾವುದೇ ಕಾರಣಕ್ಕೂ ಯೂರಿನ್ ತಡೆದುಕೊಳ್ಳಬಾರದು. ಇಂಥ ಸಮಸ್ಯೆ ಇದ್ದಲ್ಲಿ ವೈದ್ಯರ ಬಳಿ ಹೋಗಿ, ಪರೀಕ್ಷಿಸಿಕೊಂಡು, ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.
ಡಾಾ.ವಿದ್ಯಾಶಂಕರ್ ಅವರನ್ನು ನೇರವಾಗಿ ಭೇಟಿಯಾಗಲು 9380195215 ಈ ನಂಬರ್‌ಗೆ ಸಂಪರ್ಕಿಸಿ.