Health Tips: ಈ ಪ್ರಕೃತಿಯಿಂದ ನಮಗೆ ಸಿಕ್ಕಿರುವ ಆರೋಗ್ಯಕರ, ಅದ್ಭುತ ಉಡುಗೊರೆಗಳಲ್ಲಿ ಎಳನೀರು ಕೂಡ ಒಂದು. ಆದರೆ ಸಿಟಿಯಲ್ಲಿ ಅಷ್ಟು ಸುಲಭವಾಗಿ ಎಳನೀರು ನಿಮ್ಮ ಕೈಗೆಟುಕುವುದಿಲ್ಲ. ಯಾಕಂದ್ರೆ, ಎಳನೀರಿನ ಸೇವನೆಯಿಂದ ಆರೋಗ್ಯಕ್ಕೆ ಎಂಥ ಅದ್ಭುತ ಲಾಭವಿದೆ ಎಂದು ಗೊತ್ತಾದ ಬಳಿಕ, ಅದರ ಬೆಲೆ ಹೆಚ್ಚಾಗಿದೆ. ಹಾಗಾಗಿ ಹಲವರು ಎಳನೀರಿನ ಸೇವನೆ ಮಾಡುವುದನ್ನೇ ಬಿಟ್ಟಿದ್ದಾರೆ. ಆದರೆ ಎಳನೀರಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅತ್ಯುತ್ತಮ ಲಾಭಗಳಿದೆ. ಅದೇನೆಂದು ತಿಳಿಯೋಣ ಬನ್ನಿ..
ನಿಮ್ಮ ದೇಹದ ತೂಕ ಇಳಿಸಬೇಕು ಅಂದ್ರೆ ಎಳನೀರು ಕುಡಿಯಿರಿ. ನೀವು ತೂಕ ಇಳಿಸಬೇಕು ಎಂದಿದ್ದೀರಿ. ಡಯಟ್ ಮಾಡುತ್ತಿದ್ದೀರಿ ಎಂದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರಿನ ಸೇವನೆ ಮಾಡಿ. ನಿಮ್ಮ ದೇಹದ ತೂಕ ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ. ನಿಮ್ಮ ದೇಹದಲ್ಲಿರುವ ಕೆಟ್ಟ ಕಾಲೆಸ್ಟ್ರಾಲ್ ಕಡಿಮೆ ಮಾಡಿ, ನಿಮ್ಮ ತೂಕ ಕಡಿಮೆ ಮಾಡಲು ಎಳನೀರು ಸಹಕಾರಿಯಾಗಿದೆ.
ಮುಖದಲ್ಲಿ ಹೊಳಪು ಬರಬೇಕು ಅಂದ್ರೆ ಎಳನೀರು ಸೇವಿಸಿ. ನಿಮ್ಮ ಮದುವೆ ಫಿಕ್ಸ್ ಆಗಿದೆ. ಅಥವಾ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಬೇಕಿದೆ ಎಂದಲ್ಲಿ. ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಎಳನೀರಿನ ಸೇವನೆ ಮಾಡಿ. ಇದರಿಂದ ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚುತ್ತದೆ. ನಿಮ್ಮ ಮುಖದಲ್ಲಿ ಮೊಡವೆಯಾಗುವುದಿಲ್ಲ. ನಿಮ್ಮ ದೇಹ ತಂಪಾಗಿರುತ್ತದೆ.
ಕೂದಲ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ, ಎಳನೀರು ಕುಡಿಯಿರಿ. ಕೂದಲು ಹೆಚ್ಚು ಉದುರುತ್ತಿದೆ. ಒಣಗುತ್ತಿದೆ. ಕೂದಲ ಬುಡ ಆರೋಗ್ಯವಾಗಿಲ್ಲವೆಂದಲ್ಲಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರಿನ ಸೇವನೆ ಮಾಡಿ, ನಿಮ್ಮ ಕೂದಲಿಗೆ ಹೊಳಪು ಬರುವುದಲ್ಲದೇ, ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ.
ದೇಹದಲ್ಲಿ ನಿರ್ಜಲೀಕರವಾಗಬಾರದು ಅಂದ್ರೆ ಎಳನೀರು ಕುಡಿಯಿರಿ. ನಿಮ್ಮ ದೇಹದಲ್ಲಿ ನಿರ್ಜಲೀಕರಣವಾದ್ರೆ, ನಿಮ್ಮ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ. ಹಲವು ಖಾಯಿಲೆಗಳು ಬರುತ್‌ತದೆ. ಹಾಾಗಾಗಬಾರದು ಅಂದ್ರೆ, ನೀವು ಎಳನೀರಿನ ಸೇವನೆ ಮಾಡಬೇಕು. ಪ್ರತಿದಿನವಾಗದಿದ್ದರೂ, ವಾರಕ್ಕೆ ಎರಡು ಬಾರಿಯಾದರೂ ಎಳನೀರಿನ ಸೇವನೆ ಮಾಡಬೇಕು.
ಕಿಡ್ನಿಯಲ್ಲಿ ಕಲ್ಲಾಗಬಾರದು ಅಂದ್ರೆ ಎಳನೀರು ಸೇವಿಸಿ. ಕಿಡ್ನಿಯಲ್ಲಿ ಕಲ್ಲಾಗಬಾರದು ಅಂದ್ರೆ, ನೀವು ಹೆಚ್ಚು ನೀರು ಕುಡಿಯಬೇಕು. ಹೆಚ್ಚು ನೀರು ಕುಡಿಯಲು ಸಾಧ್ಯವಾಗದಿದ್ದಲ್ಲಿ, ಪ್ರತಿದಿನ ಅಥವಾ ವಾರಕ್ಕೆ ಎರಡರಿಂದ ಮೂರು ಬಾರಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರಿನ ಸೇವನೆ ಮಾಡಬೇಕು.
ಚೆಂದದ, ಆರೋಗ್ಯಕರ ಮಗು ಬೇಕಂದ್ರೆ ಎಳನೀರು ಸೇವಿಸಿ. ಗರ್ಭಿಣಿಯಾಗಿದ್ದಾಗ, ಮೂರು ತಿಂಗಳು ತುಂಬಿದ ಬಳಿಕ ಎಳನೀರಿನ ಸೇವನೆ ಮಾಡಬೇಕು. ಇದರಿಂದ ನಿಮಗೆ ಹುಟ್ಟುವ ಮಗು, ಮುದ್ದುಮುದ್ದಾಗಿಯೂ, ಬೆಳ್ಳಗೆ ಮತ್ತು ಗಟ್ಟಿಮುಟ್ಟಾಗಿರುತ್ತದೆ. ಅಲ್ಲದೇ, ತಾಯಿಯ ಆರೋಗ್ಯ, ಸೌಂದರ್ಯ ಚೆನ್ನಾಗಿರುತ್ತದೆ.
ದೇಹಕ್ಕೆ ಚೈತನ್ಯ ಬೇಕು ಅಂದ್ರೆ ಎಳನೀರಿನ ಸೇವನೆ ಮಾಡಿ. ನಿಮ್ಮ ದೇಹದಲ್ಲಿ ಶಕ್ತಿ ಇಲ್ಲ. ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಿಶ್ಶಕ್ತಿ ಎನ್ನಿಸುತ್ತಿದೆ ಎಂದಲ್ಲಿ, ಎಳನೀರಿನ ಸೇವನೆ ಮಾಡಿ. ಇದರಿಂದ ದೇಹಕ್ಕೆ ಇನ್‌ಸ್ಟಂಟ್ ಆಗಿ ಶಕ್ತಿ ಬರುತ್ತದೆ. ಹಾಾಗಾಗಿ ಬೇಧಿಯಾದ ಸಂದರ್ಭದಲ್ಲಿ ಎಳನೀರಿನ ಸೇವನೆ ಮಾಡಲು ಹೇಳಲಾಗುತ್ತದೆ.