ಹಾಸನ : ಅರಕಲಗೂಡು ತಾಲೂಕು ಹಳ್ಳಿ ಮೈಸೂರು ಹೋಬಳಿಯ ಗುಡ್ಡೇನಹಳ್ಳಿ ಏತನೀರಾವರಿ ಯೋಜನೆಯಲ್ಲಿ ನಿರ್ಮಾಣವಾದ ಕೆರೆಯಲ್ಲಿ ನೀರು ತುಂಬಿಸಿದ ಕಾರಣ ಕುಡಿಯುವ ನೀರಿನ ಅಭಾವ ಎದುರಾಗಿದೆ, ಹಾಗಾಗಿ ಗ್ರಾಮಕ್ಕೆ ಆಗಮಿಸಿದ ರೈತ ನಾಯಕ ಮತ್ತು ಬಿಜೆಪಿ ಮುಖಂಡ ದಿವಾಕರ್ ಗೌಡ ರೈತರ ಜೊತೆ ಚರ್ಚೆ ನಡೆಸಿದರು.
ಹಾಸನ ಜಿಲ್ಲೆಯ ಗೆಜಗಿನಹಳ್ಲಿ ಗ್ರಾಮದ ಜನ ಕುಡಿಯುವ ನೀರನ್ನು ಹರಸಿ ಸುಮಾರು 20 ಮೈಲಿಯವರೆಗೂ ಹೋಗಿ ನೀರು ತರುವ ಪರಿಸ್ಥಿತಿ ಇದೆ. ಗ್ರಾಮದಲ್ಲಿ ಏತನೀರಾವರಿ ಯೋಜನೆಯಲ್ಲಿ ಮಂಜೂರಾದ ಕೆರೆ ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಕೆರೆ ಇದ್ರೂ ಇಲ್ಲಿಯವರೆಗೂ ನೀರು ತುಂಬಿಸದ ಕಾರಣ ಸುತ್ತಮುತ್ತಲ ನಾಲ್ಕು ಹಳ್ಳಿಗಳಿಗೆ ಕುಡಿಯವ ನೀರಿನ ಅಭಾವ ಎದುರಾಗಿದೆ ಹಾಗಾಗಿ ಕೆರೆಗೆ ನೀರು ತುಂಬಿಸಲು ಗ್ರಾಮಸ್ಥರು ಮನವಿ ಮಾಡಿದರು.
ಇನ್ನು ಗ್ರಾಮಕ್ಕೆ ಭೇಟಿ ನೀಡಿದ ರೈತ ನಾಯಕ ಹಾಗೂ ಬಿಜೆಪಿ ಮುಖಂಡರಾದ ದಿವಾಕರ್ ಗೌಡ ರೈತರೊಂದಿಗೆ ಚರ್ಚೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆಗೆ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿದರು . ಹಾಗೂ ಸಮಸ್ಯೆಗೆ ಬೇಗ ಪರಿಹಾರ ದೊರೆಯದಿದ್ದರೆ ಉಗ್ರವಾದ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Bjp logo: ಜಗದೀಶ್ ಶೆಟ್ಟರ್ ಆರು ಬಾರಿ ಶಾಸಕರಾಗಿದ್ದೂ ಬಿಜೆಪಿ ಚಿಹ್ನೆಯಿಂದಲೇ.!!
Lad Foundation ಲಾಡ್ ಫೌಂಡೇಶನ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ..!