Friday, September 20, 2024

Latest Posts

ಕ್ಷಮೆಯಾಚನೆ ಪತ್ರ ಬರೆಯುವಂತೆ ಡ್ರೋನ್ ಪ್ರತಾಪ್‌ಗೆ ಲೀಗಲ್ ನೋಟೀಸ್ ಜಾರಿ..

- Advertisement -

Bigboss News: ಈ ಬಾರಿ ಬಿಗ್‌ಬಾಸ್ ಸೀಸನ್ 10ರಲ್ಲಿ ಬರೀ ಕೇಸ್, ಜೈಲು ಇದೇ ಆಗಿದೆ. ಮೊದಲು ವರ್ತೂರ್ ಸಂತೋಷ್ ಅವರು ಹುಲಿ ಉಗುರು ಧರಿಸಿದ್ದರು ಎಂಬ ಕಾರಣಕ್ಕೆ, ಬಿಗ್‌ಬಾಸ್ ಮನೆಗೆ ಬಂದು, ಪೊಲೀಸರು ಅವರನ್ನು ಕರೆದೊಯ್ದಿದ್ದರು. ಬಳಿಕ ಜಾಮೀನಿನ ಮೇಲೆ ವರ್ತೂರ್ ಹೊರಗೆ ಬಂದರು. ಇನ್ನು ತನೀಷಾ ಜಾತಿ ಬಗ್ಗೆ ಮಾತನಾಡಿ, ಜಾತಿ ನಿಂದನೆ ಕೇಸ್‌ ಮೈಮೇಲೆ ಎಳೆದುಕೊಂಡರು. ಇದೀಗ ಡ್ರೋನ್ ಪ್ರತಾಪ್‌ ವಿರುದ್ಧವೂ ಲೀಗಲ್ ನೋಟೀಸ್ ಕಳಿಸಲಾಗಿದೆ.

ಬಿಗ್‌ಬಾಸ್ ವೇದಿಕೆಯಲ್ಲಿ ಮಾತನಾಡುವ ಅವಕಾಶ ಸಿಕ್ಕಾಗ, ಡ್ರೋನ್ ಪ್ರತಾಪ್ ಕೆಲ ಮಾತುಗಳನ್ನಾಡಿದ್ದರು. ಕೊರೋನಾ ಸಮಯದಲ್ಲಿ ಹೊಡೆದು ಟಾರ್ಚರ್ ಕೊಟ್ಟಿದ್ದರು. ಅಲ್ಲದೇ, ನಾನು ಮಾನಸಿಕ ರೋಗಿ ಎಂದು ಒಪ್ಪಿಕೊಳ್ಳುವಂತೆ, ತಲೆಗೆ ಹೊಡೆದಿದ್ದರು. ನೀನು ಹುಚ್ಚ ಅಂತ ಒಪ್ಪಿಕೊಂಡು ಪೇಪರ್‌ಗೆ ಸಹಿ ಹಾಕು ಎಂದು ಹಿಂಸೆ ಕೊಟ್ಟರು. ಮಾಧ್ಯಮಗಳಿಗೆ ಇವನು ಬರೀ ಸುಳ್ಳು ಹೇಳುತ್ತಾನೆ ಎಂದು ಸುದ್ದಿ ಹಬ್ಬಿಸಿದ್ದರು ಎಂದು ಪ್ರತಾಪ್ ಆರೋಪಿಸಿದ್ದ.

ಈ ವಿಷಯಕ್ಕೆ ಕೆಲ ದಿನಗಳ ಹಿಂದೆಯೇ ಆಕ್ರೋಶ ಹೊರಹಾಕಿದ್ದ ಮಾಜಿ ಬಿಬಿಎಂಪಿ ನೋಡಲ್ ಅಧಿಕಾರಿ, ಡಾ.ಪ್ರಯಾಗ್, ಇದೀಗ ತಮ್ಮ ವಕೀಲರ ಮೂಲಕ, ಡ್ರೋನ್ ಪ್ರತಾಪ್‌ಗೆ ಲೀಗಲ್ ನೋಟೀಸ್ ಕಳಿಸಿದ್ದಾರೆ. ಸದ್ಯ ಪಶು ವೈದ್ಯರಾಗಿರುವ ಪ್ರಯಾಗ್, ಈ ಹಿಂದೆ ಕೊರೋನಾ ಸಮಯದಲ್ಲಿ ನೋಡಲ್ ಅಧಿಕಾರಿಯಾಗಿದ್ದರು. ಪ್ರತಾಪ್ ಕ್ವಾರಂಟೈನ್ ಸಮಯದಲ್ಲಿ ಅವರೇ ಅಧಿಕಾರದಲ್ಲಿದ್ದು, ಪ್ರತಾಪ್ ರೂಲ್ಸ್ ಬ್ರೇಕ್ ಮಾಡಿದ್ದಾಗ, ರೂಲ್ಸ್ ಪ್ರಕಾರ ನಡೆದುಕೊಳ್ಳಲು ಹೇಳಿದ್ದೆ. ಆ ಸಮಯ ಪೂರ್ತಿ ನಾನೇ ಕಾರ್ಯ ನಿರ್ವಹಿಸಿದ್ದೆ. ಸರ್ಕಾರದ ರೂಲ್ಸ್ ಪ್ರಕಾರವೇ ನಡೆದುಕೊಂಡಿದ್ದೆ ಹೊರತು, ಅವನಿಗೆ ನಾವು ಯಾವುದೇ ಚಿತ್ರಹಿಂಸೆ ನೀಡಿರಲಿಲ್ಲ ಎಂದು ಪ್ರಯಾಗ್ ಹೇಳಿದ್ದಾರೆ.

ಇದೀಗ ಪ್ರತಾಪ್‌ಗೆ ಲೀಗಲ್ ನೋಟೀಸ್ ನೀಡಿದ್ದು, ಬಿಗ್‌ಬಾಸ್ ವೇದಿಕೆಯಲ್ಲಿ ತಾನು ಕೊಟ್ಟ ಹೇಳಿಕೆ ಸುಳ್ಳು ಎಂದು ವಿವರವಾಗಿ ಲಿಖಿತ ರೂಪದಲ್ಲಿ ಪ್ರತಾಪ್, ಕ್ಷಮೆಯಾಚನೆ ಪತ್ರ ಬರೆದುಕೊಡಬೇಕು. ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಕೇಸ್ ಹಾಕಲಿದ್ದೇವೆ ಎಂದು ಪ್ರಯಾಗ್ ಹೇಳಿದ್ದಾರೆ.

ವಾರಣಾಸಿಯ ಬಾಲಕಿಯ ಕವಿತೆಗೆ ಮಾರುಹೋದ ಪ್ರಧಾನಿ ಮೋದಿ

ಕೋಲಾರದ ವಿದ್ಯಾರ್ಥಿಗಳನ್ನು ಭೇಟಿಯಾಗಿ, ಸಾಂತ್ವಾನ ಹೇಳಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

‘ಚಿತ್ರರಂಗದಲ್ಲಿ ಚಾಪುಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತಾ?’

- Advertisement -

Latest Posts

Don't Miss