Movie News: ನಟಿ ಅರುಂಧತಿ ನಾಯರ್‌ಗೆ ಅಪಘಾತವಾಗಿ, ಆಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಪ್ರತಿದಿನ ಬಿಲ್ ಸಾವಿರ ಸಾವಿರ ಬರುತ್ತಿದ್ದು, ಈ ವೆಚ್ಚ ಭರಿಸಲು ಅರುಂಧತಿ ಕುಟುಂಬಸ್ಥರಿಗೆ ಕಷ್ಟವಾಗುತ್ತಿದೆ ಎಂದು ಅವರ ಸ್ನೇಹಿತೆ, ಗೋಪಿಕಾ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತಮಿಳಿನ ನಟಿಯಾಗಿರುವ ಅರುಂಧತಿಯನ್ನು ತಿರುವನಂತಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನ ಸಹೋದರನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಕೋವಲಂ ಬೈಪಾಸ್ ಬಳಿ ಕಾರು ಡಿಕ್ಕಿಯಾಗಿ ಅಪಘಾತವಾಗಿದೆ. ಈ ವೇಳೆ ಅಕ್ಕ ತಮ್ಮ ಇಬ್ಬರಿಗೂ ಗಂಭೀರವಾದ ಗಾಯವಾಗಿದ್ದು, ಇಬ್ಬರನ್ನೂ ಆಸ್ಪತ್ರೆದೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆದರೆ ಪ್ರತಿದಿನದ ಆಸ್ಪತ್ರೆ ವೆಚ್ಚ ಸಾವಿರ ಸಾವಿರವಿದ್ದು, ಅದನ್ನು ಭರಿಸಲು ನಟಿಯ ಕುಟುಂಬಸ್ಥರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅರುಂಧತಿಯ ಸ್ನೇಹಿತೆ ಗೋಪಿಕಾ ಅನಿಲ್, ನನ್ನ ಸ್ನೇಹಿತೆಗೆ ಅಪಘಾತವಾಗಿದೆ, ಪ್ರತಿದಿನದ ಆಸ್ಪತ್ರೆ ವೆಚ್ಚ ಭರಿಸಲು, ಅವರ ಕುಟುಂಬಸ್ಥರಿಗೆ ಕಷ್ಟವಾಗಿದೆ. ಹಾಗಾಗಿ ನಿಮ್ಮಿಂದ ಸಾಧ್ಯವಾದಷ್ಟು, ಇವರ ಅಕೌಂಟ್‌ಗೆ ಹಣ ಹಾಕಿ, ಸಹಾಯ ಮಾಡಿ ಎಂದು ಅಕೌಂಟ್ ಡಿಟೇಲ್ಸ್ ಕೂಡ ಕೊಟ್ಟಿದ್ದಾರೆ.
ಮತ್ತೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್: ಇನ್ನು 6 ವರ್ಷ ವ್ಲಾದಿಮೀರ್ ಪಟ್ಟ ಗಟ್ಟಿ..