Sunday, December 22, 2024

Latest Posts

Dinakar-Appu ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್..!

- Advertisement -

ಸಿನಿಮಾ : ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneet Rajkumar) ನಮ್ಮನ್ನಗಲಿ ಇಂದಿಗೆ ಎರಡು ತಿಂಗಳುಗಳಾಗಿವೆ. ಕಡೆಯದಾಗಿ ಜೇಮ್ಸ್ (James Cinema) ಸಿನಿಮಾದಲ್ಲಿ ನಟಿಸಿದ್ದರು. ಜೇಮ್ಸ್ ನಂತರ ದಿನಕರ್ ತೂಗೂದೀಪ (Dinakar Thoogudeepa) ಜೊತೆ ಸಿನಿಮಾ ಮಾಡಲು ಮುಂದಾಗಿದ್ದರು. ದಿನಕರ್ ಜೊತೆ ಒಂದೊಳ್ಳೆ ಸಿನಿಮಾ ಮಾಡಾಲು ರೆಡಿಯಾಗಿದ್ದ ಅಪ್ಪು ಸಿನಿಮಾ ಬಗ್ಗೆ ಎಲ್ಲಾ ವಿಷಯಗಳನ್ನು ಮತ್ತು ಯಾವ ರೀತಿಯಲ್ಲಿ ಮೂಡಿಬರಲಿದೆ, ಯಾರೇಲ್ಲಾ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎನ್ನುವ ವಿಚಾರಗಳನ್ನು ದಿನಕರ್ ಜೊತೆ ಚರ್ಚಿಸಿದ್ದರು. ಈ ಕಾಂಬಿನೇಷನ್ (Combination) ಸಿನಿಮಾವನ್ನು ಜಯಣ್ಣ-ಭೋಗಣ್ಣ(Jayanna-Bhoganna) ನಿರ್ಮಾಣಮಾಡಲು ಮುಂದಾಗಿದ್ದರು. ಈ ಚಿತ್ರದಲ್ಲಿ ಅಪ್ಪು ಜೊತೆ ಖಳನಟನ ಪಾತ್ರದಲ್ಲಿ ಸ್ಯಾಂಡಲ್‌ವುಡ್‌(Sandalwood) ನ ಖ್ಯಾತ ನಟರೊಬ್ಬರು ನಟಿಸುತ್ತಾರೆ ಎಂಬ ಮಾಹಿತಿ ಈಗ ಬೆಳಕಿಗೆ ಬರುತ್ತಿದೆ.

ಸದ್ಯ ಮೂಲಮಾಹಿತಿಗಳ ಪ್ರಕಾರ ಕೆಲವು ವಿಷಯಗಳು ಬೆಳಕಿಗೆ ಬಂದಿವೆ. ದಿನಕರ್-ಅಪ್ಪು (Dinakar-Appu) ಕಾಂಬೋ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ “ದುನಿಯಾ ವಿಜಯ್” (Dunya Vijay) ನಟಿಸಬೇಕಿತ್ತು. ಈ ಸಿನಿಮಾದ ಕಥೆಯನ್ನು ಕೇಳಿ ಪಕ್ಕಾ ವಿಲನ್ ಪಾತ್ರಮಾಡುವುದಾಗಿ ಒಪ್ಪಿಕೊಂಡಿದ್ದರು ದುನಿಯಾ ವಿಜಯ್. ಆದರೇ ಅಪ್ಪು ಅಕಾಲಿಕ ಮರಣದಿಂದ ಇದು ಸಾದ್ಯವಾಗಿಲ್ಲ. ಅಪ್ಪು ಮತ್ತು ವಿಜಯ್ ಪಾತ್ರಗಳು ತೆರೆಮೇಲೆ ಹೇಗೆ ಮೂಡಿಬರುತ್ತಿತ್ತು ಎಂಬದು ಈಗ ಎಲ್ಲರಲ್ಲು ಕುತೂಹಲ ಉಂಟುಮಾಡುತ್ತಿದೆ. ದಿನಕರ್ ಈ ಸಿನಿಮಾವನ್ನು ಈಗ ಯಾರು ಮಾಡುತ್ತಾರೆ ಎಂಬ ಪ್ರಶ್ನೇಗಳು ಕೇಳಿಬರುತ್ತಿದ್ದು. ಒಂದೆಡೆ ಯುವರಾಜ್‌ಕುಮಾರ್(yuva rajkumar) ದಿನಕರ್ ಜೊತೆ ನಟಿಸುತ್ತಾರೆ ಎಂಬ ಮಾತುಗಳು ಕೇಳುತ್ತಿವೆ, ಮತ್ತೊಂದೆಡೆ ದಿನಕರ್ ಸಿನಿಮಾದಲ್ಲಿ ಶ್ರೀಮುರುಳಿ (srimurali) ಅಭಿನಯಿಸಲಿದ್ದಾರೆ ಎನ್ನುವ ಮಾಹಿತಿಗಳು ಕೇಳಿಬರುತ್ತಿವೆ. ಇದೆಲ್ಲದರ ಬಗ್ಗೆ ಮಾಹಿತಿ ಬಿಟ್ಟುಕೊಡದ ದಿನಕರ್ ಮುಂದೆ ಏನು ಮಾಡಬಹುದು ಎನ್ನುವುದನ್ನು ಕಾದುನೋಡಬೇಕಿದೆ ಮತ್ತು ದುನಿಯಾ ವಿಜಯ್ ಅವರೇ ವಿಲನ್ ಆಗಿರುತ್ತಾರೆ ಎನ್ನುವುದನ್ನು ಕಾದು ತಿಳಿದುಕೊಳ್ಳಬೇಕಿದೆ.

                                                                                                    ರೂಪೇಶ್ ಫಿಲಂ ಬ್ಯೂರೋ ಕರ್ನಾಟಕ ಟಿವಿ.

- Advertisement -

Latest Posts

Don't Miss