Wednesday, September 17, 2025

Latest Posts

Duniya Vijay 28 : ಮತ್ತೊಮ್ಮೆ ರಕ್ತಸಿಕ್ತ ದುನಿಯಾದತ್ತ ವಿಜಯ್..!

- Advertisement -

ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್ (Duniya vijhay) ಸಲಗ ಚಿತ್ರದಿಂದ ಬಿಗ್ ಬ್ರೇಕ್ ಪಡೆದುಕೊಂಡ ನಂತರ ಮತ್ಯಾವ ಸಿನಿಮಾ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿಗೆ ಮಹಾಶಿವರಾತ್ರಿಯ (Mahashivaratri) ದಿನ ಬ್ರೇಕ್ ಬಿದ್ದಿದೆ. ದುನಿಯಾ ವಿಜಯ್ ಮುಂದಿನ ಸಿನಿಮಾ ಟೈಟಲ್ ರಿವೀಲ್ ಆಗಿದೆ. ಮತ್ತೊಮ್ಮೆ ವಿಜಿ ಪವರ್‌ಫುಲ್ ಟೈಟಲ್ ಮೂಲಕ ರ‍್ತಿದ್ದಾರೆ. ಅದೇ ಭೀಮ. ಹೌದು ಭೀಮಾತೀರದಲ್ಲಿ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿದ್ದ ವಿಜಯ್ ಮತ್ತೊಮ್ಮೆ ಅಂತದ್ದೇ ರಕ್ತಸಿಕ್ತ ದುನಿಯಾ ತೋರಿಸೋದು ಕನ್ಫರ್ಮ್ ಆಗಿದೆ. ಮತ್ತೊಂದು ವಿಶೇಷ ಅಂದ್ರೆ ಒನ್ಸ್ ಅಗೇನ್ ಈ ಸಿನಿಮಾ ಕೂಡ ದುನಿಯಾ ವಿಜಯ್ ನಿರ್ದೇಶನ. ಇಲ್ಲಿ ಇರೋ ಟ್ಯಾಗ್‌ಲೈನ್ ನೋಡಿದ್ರೆ ಚಿತ್ರ ಮಾಸ್ ಸಿನಿಮಾ ಅನ್ನೋದು ಕನ್ಫರ್ಮ್ ಆಗುತ್ತೆ, ಚಿತ್ರಕ್ಕಿರೋ ಟ್ಯಾಗ್‌ಲೈನ್ `ಕೆಣಕದಿದ್ರೆ ಕ್ಷೇಮ’. ಭೀಮ ಎಷ್ಟು ಪವರ್‌ಫುಲ್ ಅಂದ್ರೆ ಕೆಣಕದಿದ್ರೆ ಕ್ಷೇಮ ಎನ್ನುತ್ತಿದ್ದಾರೆ. ಇನ್ನು ಸ್ಟೋರಿ, ಸ್ಕಿçÃನ್ ಪ್ಲೇ ಕೂಡ ವಿಜಯ್ ಮಾಡ್ತಿದ್ದು ಮತ್ತೊಮ್ಮೆ ಸಲಗ ಸಕ್ಸಸ್ ರಿಪೀಟ್ ಮಾಡೋ ಪ್ಲಾö್ಯನ್‌ನಲ್ಲಿದ್ದಾರೆ ಬ್ಲಾö್ಯಕ್ ಕೋಬ್ರಾ. ಡೈಲಾಗ್‌ನಲ್ಲಿ ಒನ್ಸ್ ಅಗೇನ್ ವಿಜಿಗೆ ಜೊಡಿಯಾಗ್ತಿದ್ದಾರೆ ಮಾಸ್ ರೈಟರ್ ಮಾಸ್ತಿ. ಸದ್ಯ ತೆಲುಗಿನ ಬಾಲಕೃಷ್ಣ ಅಭಿನಯದ ೧೦೭ನೇ ಸಿನಿಮಾದಲ್ಲಿ ವಿಜಿ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ. ತೆಲುಗಿನ ಸಿನಿಮಾ ಜೊತೆ ಕನ್ನಡದಲ್ಲೂ ತಮ್ಮದೇ ನಟನೆ ನಿರ್ದೇಶನದ ಸಿನಿಮಾದ ಶೂಟಿಂಗ್ ನಡೆಸಲಿರೋ ವಿಜಿ ಇಲ್ಲಿ ದೊಡ್ಡ ತಾರಾಗಣವನ್ನು ತೆರೆ ಮೇಲೆ ತರಲಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯೇನನ್ನೂ ಬಿಟ್ಟುಕೊಡದಿದ್ದರೂ ಟೈಟಲ್ ಮತ್ತು ಮೋಷನ್ ಪೋಸ್ಟರ್ ಭಯಾನಕ ಮಾಸ್ ಸಿನಿಮಾ ಭೀಮ ಅನ್ನೋದನ್ನು ಸಾರಿ ಹೇಳ್ತಿದೆ.

- Advertisement -

Latest Posts

Don't Miss