Health Tips: ಇಂದಿನ ಕಾಲದ ಯುವಕ ಯುವತಿಯರಿಗೆ ತಲೆಗೂದಲು ಉದುರುವುದು ಪ್ರಮುಖ ಸೌಂದರ್ಯ ಸಮಸ್ಯೆಯಾಗಿದೆ. ಪುರುಷರು, ಮಹಿಳೆಯರು ಇಬ್ಬರೂ ಈ ಸಮಸ್ಯೆ ಎದುರಿಸುತ್ತಿದ್ದು, ಮಾರುಕಟ್ಟೆಗೆ ಬರುವ ಎಲ್ಲ ಪ್ರಾಡಕ್ಟ್‌ಗಳ ಬಳಕೆ ಮಾಡುತ್ತಿದ್ದಾರೆ. ಆದರೆ ಕೂದಲು ಉದುರುವಿಕೆಯ ಸಮಸ್ಯೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನೀವು ಕೆಲ ಆಹಾರಗಳನ್ನು ಸೇವಿಸಬೇಕು. ಆ ಆಹಾರಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ನೀವು ಬೆಳಿಗ್ಗೆ ಎದ್ದ ತಕ್ಷಣ ನೀರಿನಲ್ಲಿ ನೆನೆಸಿಟ್ಟ ಕೆಲ ವಸ್ತುಗಳನ್ನು ಸೇವಿಸಿದರೆ, ನಿಮ್ಮ ಸೌಂದರ್ಯ, ಆರೋಗ್ಯ ಮತ್ತು ನಿಮ್ಮ ತಲೆಗೂದಲ ಬೆಳವಣಿಗೆ ಎಲ್ಲವೂ ಸರಿಯಾಗುತ್ತದೆ.
ಬಾದಾಮಿ: ನೀರಿನಲ್ಲಿ ನೆನೆಸಿಟ್ಟ 5 ಬಾದಾಮಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಿಪ್ಪೆ ತೆಗೆದು ತಿನ್ನುವುದರಿಂದ, ನಮ್ಮ ನೆನಪಿನ ಶಕ್ತಿ ಚೆನ್ನಾಗಿರುತ್ತದೆ. ನಮ್ಮ ತ್ವಚೆಯ ಆರೋಗ್ಯ ಹೆಚ್ಚಾಗುತ್ತದೆ. ನಮ್ಮ ದೇಹದ ಆರೋಗ್ಯವೂ ಉತ್ತಮವಾಗುತ್ತದೆ. ಜೊತೆಗೆ ನಮ್ಮ ಕೂದಲ ಬೆಳವಣಿಗೆ ಕೂಡ ಚೆನ್ನಾಗಿರುತ್ತದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿ, ಸಿಪ್ಪೆ ತೆಗೆದ 5 ಬಾದಾಮಿ ತಿನ್ನಬೇಕು.
ಅಖ್ರೋಟ್: ಅಖ್ರೋಟ್ ಅಂದರೆ ವಾಲ್ನಟ್, 2 ವಾಲ್ನಟ್ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ, ನಮ್ಮ ಮೆದುಳಿನ ಬೆಳವಣಿಗೆ, ಕೂದಲ ಬೆಳವಣಿಗೆ ಚೆನ್ನಾಗಿರುತ್ತದೆ. ಗರ್ಭಣಿಯರು ಪ್ರತಿದಿನ ಬೆಳಿಗ್ಗೆ ಎರಡು ನೆನೆಸಿದ ವಾಲ್ನಟ್ ತಿಂದರೆ, ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಅಲ್ಲದೇ, ಅವರ ಕೂದಲಿನ ಆರೋಗ್‌ಯ ಚೆನ್ನಾಗಿರುತ್ತದೆ. ಬಾಣಂತನದ ಸಮಯದಲ್ಲಿ ಹೆಚ್ಚು ಕೂದಲು ಉದುರುವುದಿಲ್ಲ. ಮಗು ಕೂಡ ಚುರುಕಾಗಿರುತ್ತದೆ.
ಒಣದ್ರಾಕ್ಷಿ: ಒಣದ್ರಾಕ್ಷಿ ಸೇವನೆಯಿಂದ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ. ಹಾಗಾಗಿ ಪುಟ್ಟ ಮಕ್ಕಳಿಗೆ ನೆನೆಸಿಟ್ಟ ಒಣದ್ರಾಕ್ಷಿ ಕೊಡುತ್ತಾರೆ. ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾದಾಗಲೇ, ನಮ್ಮ ಕೂದಲ ಬುಡ ಗಟ್ಟಿಗೊಳ್ಳುತ್ತದೆ. ಮತ್ತು ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ಅಂಜೂರ: ನೀರಿನಲ್ಲಿ ನೆನೆಸಿಟ್ಟ ಅಂಜೂರ ತಿನ್ನಲು ಹಲವರು ಬಯಸುವುದಿಲ್ಲ. ಏಕೆಂದರೆ, ಅದು ಮುಟ್ಟಲು ಮತ್ತು ಸೇವಿಸಲು ಹಿಂಜರಿಕೆಯಾಗುತ್ತದೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ 1 ಅಂಜೂರ ಸೇವಿಸಿದರೆ, ನಮ್ಮ ಕೂದಲು ಆರೋಗ್ಯವಾಗಿರುತ್ತದೆ. ಗಟ್ಟಿಮುಟ್ಟಾಗಿರುತ್ತದೆ.
ಹಾಲು, ಮೊಸರು: ರಾತ್ರಿ ಮಲಗುವಾಗ ಅಥವಾ ಬೆಳಿಗ್ಗೆ ತಿಂಡಿ ತಿನ್ನುವಾಗ, ಹಾಲು ಕುಡಿಯಿರಿ. ಎರಡು ಹೊತ್ತು ಕುಡಿದರೂ ಉತ್ತಮ. ಇನ್ನು ಮೊಸರಿನ ಸೇವನೆ ಬೆಳಿಗ್ಗೆ ತಿಂಡಿಯೊಂದಿಗೆ ಅಥವಾ ಮಧ್ಯಾಹ್ನ ಊಟದೊಂದಿಗೆ ಮಾಡಿ. ಸೂರ್ಯಾಸ್ತದ ಬಳಿಕ ಮೊಸರಿನ ಸೇವನೆ ಮಾಡಬಾರದು. ಇದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಇನ್ನು ಹಾಲು, ಮೊಸರಿನ ಸೇವನೆಯಿಂದ ನಮ್ಮ ಆರೋಗ್ಯ, ಸೌಂದರ್‌ಯ, ಕೂದಲಿನ ಬೆಳವಣಿಗೆ ಎಲ್ಲವೂ ಚೆನ್ನಾಗಿರುತ್ತದೆ.
ನೀರು: ನಮಗೆ ಎಷ್ಟು ಜೀರ್ಣ ಮಾಡಿಕೊಳ್ಳುವ ಶಕ್ತಿ ಇರುತ್ತದೆಯೋ, ಅಷ್ಟು ನೀರು ಕುಡಿಯಬೇಕು. ಇದರಿಂದ ನಮ್ಮ ಆರೋಗ್ಯ, ಸೌಂದರ್ಯ ಎಲ್ಲವೂ ಉತ್ತಮವಾಗಿರುತ್ತದೆ. ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ, ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ, ನಮ್ಮ ಆರೋಗ್ಯ ಚೆನ್‌ನಾಗಿರುತ್ತದೆ. ಕೂಡ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು, ಹೀಗೆ ಮಾಡಿದರೆ, ಬಹುಬೇಗ ತೂಕ ಇಳಿಯುತ್ತದೆ. ಇದರೊಂದಿಗೆ ವ್ಯಾಯಾಮವೂ ಮುಖ್ಯ.
ಫಾಸ್ಟ್ಫುಡ್ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ಎಷ್ಟು ಡೇಂಜರ್ ಗೊತ್ತಾ..?
Health Tips: ಪೇನ್ ಕಿಲ್ಲರ್ ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ.. ಇದೇ ಚಟವಾಗದಿರಲಿ..