Monday, April 21, 2025

Latest Posts

ಹಿರಿಯ ನಿರ್ದೇಶಕ ಜಿ.ಕೆ.ಮುದ್ದುರಾಜ್ ನಿರ್ದೇಶನದ “ಎಜುಕೇಟೆಡ್ ಬುಲ್ಸ್” ಆರಂಭ .

- Advertisement -

Movie News: “ಜಯಭೇರಿ”, ” ರಣಚಂಡಿ” ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕ ಜಿ.ಕೆ.ಮುದ್ದುರಾಜ್ ಹಲವು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿ ಬಂದಿದ್ದಾರೆ. “ಎಜುಕೇಟೆಡ್ ಬುಲ್ಸ್” ಎಂಬ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ರಾಜಾಜಿನಗರದ ಆಂಜನೇಯ ಹಾಗೂ ಸಾಯಿಬಾಬಾ ದೇವಸ್ಥಾನದಲ್ಲಿ ನೆರವೇರಿತು. ಭಾ.ಮ.ಗಿರೀಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಡಾ||ವಿ.ನಾಗೇಂದ್ರಪ್ರಸಾದ್ ಕ್ಯಾಮೆರಾ ಚಾಲನೆ ಮಾಡಿದರು‌.

ಒಡೆಯರ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಜಗದೀಶ್ ಅವರದು. ಬೆಂಗಳೂರು ಒಂದೇ ಹಂತದಲ್ಲಿ ಸುತ್ತಮುತ್ತ ಸುಮಾರು ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ.

ತನುಷ್, ಯಶಸ್ ಅಭಿ, ರಾಕೇಶ್ ಚಂದ್ರ, ಹರ್ಷಿಣಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಘವೇಂದ್ರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಬಾಬುಖಾನ್ ಅವರ ಕಲಾ ನಿರ್ದೇಶನ “ಎಜುಕೇಟೆಡ್ ಬುಲ್ಸ್” ಚಿತ್ರಕ್ಕಿದೆ.

ಪಸಂದಾಗಿದೆ “ಗರಡಿ” ಚಿತ್ರದ ಮೊದಲ ಹಾಡು: “ಹೊಡಿರೆಲೆ ಹಲಗಿ” ಎಂದ ಯೋಗರಾಜ್ ಭಟ್ .

ಗಿನ್ನಿಸ್ ದಾಖಲೆ ಮಾಡುವತ್ತ “ದೇವರ ಆಟ ಬಲ್ಲವರಾರು “: ಕನ್ನಡದಲ್ಲಿ ಮತ್ತೊಂದು ಹೊಸ ಪ್ರಯತ್ನ

ಟೈಟಲ್ ಟೀಸರ್ ನಲ್ಲೇ ನೋಡುಗರ ಮನ ಗೆಲ್ಲುತ್ತಿದೆ “ಆಟ ಸಾಮಾನು” ..

- Advertisement -

Latest Posts

Don't Miss