ಚುನಾವಣೆಗೆ ಸಜ್ಜಾದ ಹಾಸನ, ಅಭ್ಯರ್ಥಿಗಳ ಗೆಲುವು ನಿರ್ಧರಿಸಲಿದ್ದಾರೆ ಮತದಾರರು..

ಹಾಸನ: ಬುಧವಾರ ನಡೆಯಲಿರುವ ವಿಧಾನಸಭಾ ಚುನಾವಣೆ-೨೦೨೩ಕ್ಕೆ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಪರಿಶೀಲಿಸಿಕೊಂಡು ಪೊಲೀಸ್ ಬಿಗಿ ಬಂದುಬಸ್ಸ್ತ್ ನೊಡನೆ ಆಯಾ ಮತಗಟ್ಟೆಗಳಿಗೆ ಚುನಾವಣೆ ಅಧಿಕಾರಿಗಳು ಪ್ರಯಾಣ ಬೆಳೆಸಿದರು. ಇದುವರೆಗೂ ಅಭ್ಯರ್ಥಿಗಳು ಮತಯಾಚನೆಗೆ ಹಲವಾರು ಸರ್ಕಸ್ ಮಾಡಿ ಪ್ರಚಾರದಲ್ಲಿ ತೊಡಗಿದ್ದರು. ಆದರೇ ಅಂತಿಮವಾಗಿ ಮತದಾರರು ಮತ ಹಾಕುವುದರ ಮೂಲಕ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವರು.

ಮಂಗಳವಾರದಂದು ನಗರದ ಸರಕಾರಿ ಕಲಾ ಕಾಲೇಜಿನ ಆವರಣದಿಂದ ಪೊಲೀಸ್ ಬಿಗಿ ಬಂದುಬಸ್ತ್ ನೊಡನೆ ಹೊರಡಲು ಚುನಾವಣಾಧಿಕಾರಿಗಳು ಮತಯಂತ್ರಕ್ಕಾಗಿ ಬೆಳಿಗ್ಗೆಯಿಂದಲೇ ಕಾದುಕುಳಿತರು. ಬೆಳಿಗ್ಗೆ ೧೦ ಗಂಟೆಗೆ ಕೊಡುವುದಾಗಿ ತಿಳಿಸಿ ಕಾಯಿಸಿದರು. ಸುಮಾರು ೧೨:೩೦ರ ವೇಳೆಗೆ ಚುನಾವಣಾಧಿಕಾರಿಗಳು ಆಗಮಿಸಿ ಭದ್ರತೆಯಲ್ಲಿ ಇಡಲಾಗಿದ್ದ ಕೊಠಡಿಯ ಬಾಗಿಲು ತೆಗೆಸಿ ಮಂತ್ರಯಂತ್ರ ಕಳುಹಿಸಿಕೊಟ್ಟರು. ಮದ್ಯಾಹ್ನದ ವೇಳೆಗೆ ಸಲ್ಪ ಸಮಯ ಮಳೆರಾವ ಬಂದು ಅಸ್ತವ್ಯಸ್ತವಾಯಿತು. ಎಲ್ಲಾ ಮತ ಕೇಂದ್ರಗಳಿಗೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಹಾಸನದ ಸರ್ಕಾರಿ ಕಲಾ ವಾಣಿಜ್ಯ, ಸ್ನಾತಕೋತ್ತರ ಕಾಲೇಜಿನಲ್ಲಿ ಇಂದು ಮಸ್ಟರಿಂಗ್ ಕಾರ್ಯ ಯಶಸ್ವಿಯಾಗಿ ನಡೆಯಿತು. ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಇವಿಎಂ ಮಿಷನ್‌ನೊಂದಿಗೆ ಮತ ಕೇಂದ್ರಗಳಿಗೆ ಮತಗಟ್ಟೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ತೆರಳಿದರು. ಹಾಸನ ಕ್ಷೇತ್ರದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್-೨೫, ಮಿನಿ ಖಾಸಗೀ ಬಸ್-೩೦, ಜೀಪ್ ಹಾಗೂ ಕಾರು-೧೪ನ್ನು ನಿಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ೧೪,೯೯,೯೧೭ ಮತದಾರರಿದ್ದು, ಅದರಲ್ಲಿ ೭,೫೦,೧೫೩ ಮಹಿಳೆ ಮತದಾರರು ಹಾಗೂ ೭,೪೯,೭೨೦ ಪುರುಷ ಮತದಾರರು ಮತ್ತು ಇತರೆ ೪೪ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಲ್ಲೆಯಲ್ಲಿ ಒಟ್ಟು ೨೦೦೦ ಮತಗಟ್ಟೆಗಳಲ್ಲಿ ೬೪೩ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದ್ದು, ೧೦ ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು. ನೂರಕ್ಕೆ ನೂರರಷ್ಟು ಮತದಾನಕ್ಕಾಗಿ ಚುನಾವಣೆಯ ಆಯೋಗದ ನಿರ್ದೇಶನದಂತೆ ಈಗಾಗಲೇ ಜಿಲ್ಲಾಡಳಿತದಿಂದ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಿರುವುದು ಫಲ ಕೊಡುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಇನ್ನು ಮತದಾರರ ಗುರುತಿನ ಚೀಟಿ ಇಲ್ಲವಾದ್ರೆ ಗಾಬರಿಯಾಗುವುದು ಬೇಡ. ಪರ್ಯಾಯವಾಗಿ ಟ್ರೈವಿಂಗ್ ಲೇಸೆನ್ಸ್, ಆಧಾಯ ತೆರಿಗೆ ಚೀಟಿ, ಪಾನ್ ಕಾರ್ಡ್, ಕಿಸಾನ್ ಮತ್ತು ಅಂಚೆ ಪುಸ್ತಕ ಇತರೆ ಅಗತ್ಯ ದಾಖಲೆ ತೋರಿಸಿ ಮತ ಚಲಾಯಿಸಬಹುದು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮಾತನಾಡಿ, ಒಟ್ಟು ೨೦೦೦ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಇವಿಎಂ ಮಿಷನ್‌ನೊಂದಿಗೆ ಅಧಿಕಾರಿಗಳು ಮತಗಟ್ಟೆಗೆ ತೆರಳಲು ೬೩೦ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ೧೯೦ ಸಾರಿಗೆ ಬಸ್‌ಗಳು, ೯೦ ಟಿಟಿ ವಾಹನ, ೩೩೦ ಜೀಪ್, ಕಾರುಗಳ ವ್ಯವಸ್ಥೆ ಮಾಡಲಾಗಿದೆ. ೧೦೦೭ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ, ೪೫೦ ಮೈಕ್ರೋ ಅಬ್ಸರ್‌ರ್ವರ್. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಏಳು ವಿಧಾನಸಭಾ ಕ್ಷೇತ್ರಗಳಿಲ್ಲಿ

೧೦೬೫೦ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ೧೩ ಆಲ್ ವ್ಯೂಮೆನ್ ಮ್ಯಾನೇಜ್ ಬೂತ್ಸ್, ೧೧ ಯುವ ಮತದಾರರ ಸ್ಥಾಪಿಸಲಾಗಿದೆ ಎಂದರು. ಕಾಡಾನೆ ಹಾವಳಿ ಇರುವ ೬೦ ಬೂತ್‌ಗಳನ್ನು ಗುರುತಿಸಲಾಗಿದೆ. ಆನೆ ಕಾರ್ಯಪಡೆ ಕಾಡಾನೆಗಳ ಚಲನವಲನದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕೆ ಘಟನೆಗಳು ಸಂಭವಿಸಿದಂತೆ ಮುನ್ನೆಚರಿಕ ಕ್ರಮವಹಿಸಿರುವುದಾಗಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ ೩೫೦೦ ಹೆಚ್ಚು ಪೊಲೀಸ್, ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ೭ ಕೆ.ಸ್.ಆರ್.ಪಿ. ತುಕಡಿ, ೨೩ ಸಿಎಪಿಎಫ್ ಕಂಪನಿ ಬಂದಿದೆ. ತಮಿಳುನಾಡು, ಕೊಡಗು, ಮೈಸೂರು, ಹಾಸನ ಜಿಲ್ಲೆಯಿಂದ ಹೋಂಗಾರ್ಡ್ಸ್ ಸೇರಿ ೩೫೦೦ ಕ್ಕೂ ಹೆಚ್ಚು ಮಂದಿ ಚುನಾವಣೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವತ್ತು ರಾತ್ರಿ ಹೆಚ್ಚಿನ ಗಸ್ತು ನಡೆಯುತ್ತದೆ. ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಚೆಕ್ ಪೋಸ್ಟ್‌ನಂತೆ ೨೧ ಚೆಕ್ ಪೋಸ್ಟ್ ತೆರೆಯಲಾಗಿದೆ ಎಂದರು. ೧೦೦ ಕ್ಕಿಂತ ಜಾಸ್ತಿ ಸೆಕ್ಟರ್ ಆಫಿಸರ್ಸ್, ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಯಾವುದಾದರೂ ಅಹಿತಕರ ಘಟನೆ ನಡೆದರೆ ಐದರಿಂದ, ಹತ್ತು ನಿಮಿಷದಲ್ಲಿ ಆ ಸ್ಥಳಕ್ಕೆ ಪೊಲೀಸರು ಆಗಮಿಸಲು ವ್ಯವಸ್ಥೆ ಮಾಡಲಾಗಿದೆ. ಹನ್ನೆರಡು ಮತಗಟ್ಟೆಗಳಲ್ಲಿ ಫೋನ್ ನೆಟ್ವರ್ಕ್ ಇಲ್ಲ ಎಂಬ ಕಾರಣಕ್ಕೆ ಪೊಲೀಸ್ ವೈರ್‌ಲೆಸ್ ಸಿಸ್ಟಂ ಅಳವಡಿಸಿದ್ದೇವೆ ಎಂದು ಮಾಹಿತಿ ನೀಡಿದರು.

‘ಈ ಮಟ್ಟಕ್ಕೆ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ ಪಕ್ಷ ಬಿಜೆಪಿ’

ಉತ್ತರಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ನೋಡಲು ಕೊಡಬೇಕಾಗಿಲ್ಲ ತೆರಿಗೆ: ಯೋಗಿ ಆದೇಶ

‘ಮಲ್ಲಿಕಾರ್ಜುನ ಖರ್ಗೆಗೆ ನನ್ನ ಹೆಸರಲ್ಲಿ ನಕಲಿ ಪತ್ರ: ಇದು RSSನಂಥ ಕುತಂತ್ರಿಗಳ ಕೆಲಸ’

About The Author