small stories
ಒಂದು ಕಾಡಿನಲ್ಲಿ ಆನೆಯೊಂದು ಸಿಕ್ಕಿದ ಎಲ್ಲಾ ಪ್ರಾಣಿಗಳನ್ನು ಹಿಂಸಿಸುತ್ತಿತ್ತು, ಕಂಡ ಪ್ರಾಣಿಗಳನ್ನೆಲ್ಲಾ ಕೊಲ್ಲುತ್ತಿತ್ತು. ಹೀಗೆ ಆ ಆನೆಗೆ ಸಿಕ್ಕು ಅನೇಕ ಪ್ರಾಣಿಗಳು ಸತ್ತುಹೋದುವು. ಆಗ ಪ್ರಾಣಿಗಳೆಲ್ಲಾ ಸಭೆ ಸೇರಿ ಆನೆಯ ಹಾವಳಿಯಿಂದ ಪಾರಾಗಲು ಒಂದು ಉಪಾಯವನ್ನು ಯೋಚಿಸಿದವು. ಪ್ರಾಣಿಗಳೆಲ್ಲಾ ಒಂದಾಗಿ ಆನೆಯ ಬಳಿ ಬಂದು ‘ನೀನೇ ಕಾಡಿನ ರಾಜನಾಗಬೇಕು’ ಎಂದು ಕೇಳಿಕೊಂಡವು. ಆನೆ ಅದಕ್ಕೆ ಒಪ್ಪಿ ಹೆಮ್ಮೆಯಿಂದ ಬೀಗಿತು.
ಹೀಗಿರುವಾಗ ಪ್ರಾಣಿಗಳೆಲ್ಲಾ ಸೇರಿ ಮೊದಲೇ ಒಂದು ಸ್ಥಳದಲ್ಲಿ ಕೆಸರಿನ ಹೊಂಡವನ್ನು ಸಿದ್ಧಮಾಡಿದ್ದವು. ಆ ಹೊಂಡದ ಮೇಲೆ ಮರದ ರೆಂಬೆ ಕೊಂಬೆಗಳನ್ನೆಲ್ಲಾ ಹಾಕಿ ಮರೆ ಮಾಡಿದ್ದವು. ಮರದಿಂದ ಸಿಂಹಾಸನವನ್ನು ಮಾಡಿ ಇಟ್ಟು ಆನೆಯನ್ನು ಪಟ್ಟಾಭಿಷೇಕಕ್ಕಾಗಿ ಕರೆತಂದವು.
ಪ್ರಾಣಿಗಳ ಈ ತಂತ್ರ ಅರಿಯದ ಆನೆಯು ಗಂಭೀರವಾಗಿ ಆ ಸ್ಥಳಕ್ಕೆ ನಡೆಯಿತು. ಮುಚ್ಚಿಟ್ಟಿದ್ದ ಕೆಸರ ಹೊಂಡದಲ್ಲಿ ಆನೆಯು ಬಿದ್ದು ಬಿಟ್ಟಿತು. ಎಲ್ಲಾ ಪ್ರಾಣಿಗಳು ಸೇರಿ ಆನೆಯು ಹೊಂಡದಿಂದ ಬರದಂತೆ ನೋಡಿಕೊಂಡವು. ಕೆಸರನಲ್ಲಿ ಸಿಕ್ಕಿಕೊಂಡ ಆನೆಯು ಹೊರಕ್ಕೆ ಬರಲಾಗದೆ ಹಸಿವಿನಿಂದ ಒದ್ದಾಡಿ ಸತ್ತುಹೋಯಿತು.
ಎಲ್ಲಾ ಪ್ರಾಣಿಗಳು ಆನೆಯ ಸಾವಿನಿಂದ ಸಂತಸಗೊಂಡವು.ಅಪಾಯ ಬಂದಾಗ ಉಪಾಯದಿಂದ ಪಾರಾಗಬೇಕು ಎಂಬ
ಗುಣಪಾಠವನ್ನು ತಿಳಿದುಕೊಂಡವು.
ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜಕುಮಾರ್, ತಾರಾ ಅನುರಾಧಾ ಗೆ 3 ವಿಶೇಷ ಪ್ರಶಸ್ತಿಗಳು..!