ಯಾರು ದುಡ್ಡು ಪಾವತಿಸುತ್ತಾರೋ ಅವರಿಗಷ್ಟೇ ಬ್ಲೂ ಟಿಕ್ ಮಾರ್ಕ್ ಸಿಗುತ್ತದೆ ಎಂದು ಮಸ್ಕ್ ರೂಲ್ಸ್ ಮಾಡಿದ್ದರು. ಹಾಗಾಗಿ ಕೆಲವೇ ಕೆಲವರು ದುಡ್ಡು ಕೊಟ್ಟು ತಮಗೆ ಬೇಕಾದ ಟ್ವಿಟರ್ ಬ್ಲೂ ಮಾರ್ಕ್ ತೆಗೆದುಕೊಂಡಿದ್ದರು. ಇನ್ನು ಕೆಲವರು ತಟಸ್ಥರಾಗಿದ್ದರು. ಹಾಗಾಗಿಯೇ ಸೆಲೆಬ್ರಿಟಿಗಳ ಟ್ವಿಟರ್ ಅಕೌಂಟ್ನಲ್ಲಿ ಬ್ಲೂಟಿಕ್ ಮಾರ್ಕ್ ಇಲ್ಲದಿದ್ದರೂ, ಅವರ ಫ್ಯಾನ್ ಫಾಲೋವರ್ಸ್ ಇರುವ ಅಕೌಂಟ್‌ನಲ್ಲಿ ಬ್ಲೂ ಟಿಕ್ ಮಾರ್ಕ್ ಇತ್ತೆಂದು, ಹಾಸ್ಯ ಮಾಡಲಾಗಿತ್ತು.
ಇದೀಗ ಇದೇ ರೂಲ್ಸ್ ನಟಿ ಅನುಷ್ಕಾ ಶೆಟ್ಟಿಗೆ ಲಕ್ ಆಗಿ ಪರಿಣಮಿಸಿದೆ. ಈಕೆ ದುಡ್ಡು ಕೊಡದಿದ್ದರೂ, ಈಕೆಯ ಟ್ವಿಟರ್ ಅಕೌಂಟ್ನಲ್ಲಿ ಬ್ಲೂಟಿಕ್ ಉಚಿತವಾಗಿ ಸಿಕ್ಕಿದೆ.
ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಸಿನಿಮಾ ಪ್ರಮೋಷನ್‌ನಲ್ಲಿ ಸಖತ್ ಬ್ಯುಸಿಯಾಗಿರುವ ಅನುಷ್ಕಾ ಟ್ವಿಟರ್‌ನಲ್ಲಿ ನಿನ್ನೆ ತಾನೇ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅದೇ ರೀತಿ ಯಾರು ಟ್ವಿಟರ್‌ನಲ್ಲಿ 10 ಲಕ್ಷ ಚಂದಾದರರನ್ನ ಹೊಂದಿರುತ್ತಾರೋ, ಅವರಿಗೂ ಬ್ಲೂಟಿಕ್ ಮಾರ್ಕ್ ಕೊಡುತ್ತೇನೆಂದು ಮಸ್ಕ್ ಹೇಳಿದ್ದರು. ಅದಕ್ಕಾಗಿ ಅನುಷ್ಕಾಗೆ ಬ್ಲೂ ಟಿಕ್ ಮಾರ್ಕ್ ಸಿಕ್ಕಿದೆ.
ಪಾದ್ರಿಯ ಜಮೀನಿನಲ್ಲಿ ಪತ್ತೆಯಾಯ್ತು 47 ಶವ, ಇದರ ಹಿಂದಿದೆ ಭಯಂಕರ ಕಾರಣ..