Health Tips: ಬೇಸಿಗೆಗಾಲದಲ್ಲಿ ಬೆವರುವುದು ಸಾಮಾನ್ಯ. ಆದರೆ ಬೇಸಿಗೆಗಾಲ ಬಿಟ್ಟು ಚಳಿಗಾಲ ಮತ್ತು ಮಳೆಗಾಲದಲ್ಲಿಯೂ ಅತಿಯಾಗಿ ಬೆವರಿದರೆ, ಅದು ಆರೋಗ್ಯಕರವಾಗಿರುವ ಸೂಚನೆ ಅಲ್ಲ. ಹಾಗಾದ್ರೆ ಅತೀಯಾಗಿ ಬೆವರಿದರೆ ಅದಕ್ಕೆ ಏನರ್ಥ..? ಯಾಕೆ ಆ ತೊಂದರೆಯಾಗುತ್ತಿದೆ..? ಇದೆಲ್ಲದರ ಬಗ್ಗೆ ಪಾರಂಪರಿಕ ವೈದ್ಯೆ ಪವಿತ್ರಾ ಅವರು ವಿವರಣೆ ನೀಡಿದ್ದಾರೆ.
ಬೆವರು ಅನ್ನೋದು ದೇಹದ ತ್ಯಾಜ್ಯ. ನಮ್ಮ ದೇಹದಲ್ಲಿರುವ ತ್ಯಾಜ್ಯ ಮೂತ್ರದ ಮೂಲಕ ಹೇಗೆ ಹೋಗುತ್ತದೆಯೋ, ಅದೇ ರೀತಿ ದೇಹದ ತ್ಯಾಜ್ಯ ಬೆವರಿನ ಮೂಲಕ ಹೊರಹೋಗುತ್ತದೆ. ಅದರಲ್ಲೂ ದೇಹದ ತೂಕ ಅತಿಯಾಗಿದ್ದವರಿಗೆ ಹೆಚ್ಚು ಬೆವರು ಬರುತ್ತದೆ.
ಹೀಗೆ ಯಾರು ಹೆಚ್ಚು ಬೆವರುತ್ತಾರೋ, ಅವರು ಆದಷ್ಟು ಸ್ವಚ್ಛವಾಗಿರಬೇಕು. ಹೆಚ್ಚು ಬೆವರಿದಾಗ ಸ್ನಾನ ಮಾಡಬೇಕು. ನೀವು ಬೆವರಿದ ದೇಹದಲ್ಲೇ ಅಡುಗೆ ಮಾಡಿದರೆ, ಅಥವಾ ಆಹಾರ ಸೇವಿಸಿದರೆ, ರೋಗ ರುಜಿಗಳು ನಿಮ್ಮ ದೇಹ ಸೇರುತ್ತದೆ. ಹಾಗಾಗಿ ಬೆವರಿದಾಗ, ಸ್ವಚ್ಛವಾಗಿರಬೇಕು.
ಇನ್ನು ದೇಹದಲ್ಲಿ ನಿಶ್ಶಕ್ತಿ ಇದೆ. ರಕ್ತಹೀನತೆ ಇದೆ. ಸರಿಯಾಗಿ ರಕ್ತಸಂಚಾರವಾಗುತ್ತಿಲ್ಲ ಎಂದಾಗ ಕೂಡ, ನಮ್ಮ ದೇಹದಲ್ಲಿ ಹೆಚ್ಚು ಬೆವರು ಬರುತ್ತದೆ. ಇದರಿಂದ ದೇಹದಲ್ಲಿ ನೀರಿನ ಅಂಶದ ಕೊರತೆ ಉಂಟಾಗುತ್ತದೆ. ಇನ್ನು ಹೆಣ್ಣು ಮಕ್ಕಳು ಹೆಚ್ಚು ಬೆವರುತ್ತಿದ್ದಾರೆ ಎಂದರೆ, ಅವರಲ್ಲಿ ಋತುದೋಷವಿದೆ ಎಂದರ್ಥ. ಅಂದರೆ ಮುಟ್ಟಿನ ಸಮಸ್ಯೆ ಇರುವ ಹೆಣ್ಣು ಮಕ್ಕಳು ಹೆಚ್ಚು ಬೆವರುತ್ತಾರೆ. ಹಾಗಾದ್ರೆ ಇನ್ನೂ ಯಾವ ಯಾವ ಕಾರಣಕ್ಕಾಗಿ ಬೆವರು ಬರುತ್ತದೆ..? ಇದಕ್ಕಿರುವ ಪರಿಹಾರವೇನು ಎಂದು ತಿಳಿಯಲು ವೀಡಿಯೋ ನೋಡಿ.