Political News: ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಇದೀಗ ಬೆಸ್ಕಾಂ ಮತ್ತೊಂದು ಬರೆ ಎಳೆದಿದ್ದು, ವಿದ್ಯುತ್ ಮೀಟರ್ ದರ ಶೇ.400 ರಿಂದ ಶೇ.800 ರಷ್ಟು ಹೆಚ್ಚಳ ಮಾಡುವ ಮೂಲಕ ಮತ್ತೊಂದು ಶಾಕ್ ನೀಡಿದೆ. ಈ ಕುರಿತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತನ್ನ ವ್ಯಾಪ್ತಿಯಲ್ಲಿ ಬರುವ ಎಂಟು ಜಿಲ್ಲೆಗಳಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.
ಸ್ಮಾರ್ಟ್ ಮೀಟರ್ ಅಂದ್ರೆ ಏನು..?
ಇನ್ನೂ ಕೆಲ ಗ್ರಾಹಕರು ನಿಗದಿತ ಅವಧಿಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಮುಂದಾಗದೆ ಸಂಸ್ಥೆಯ ಆದಾಯಕ್ಕೆ ಖೋತಾ ಬೀಳುತ್ತಿತ್ತು. ಇದನ್ನು ತಪ್ಪಿಸಲು ಹೊಸ ಪ್ಲಾನ್ ಅನ್ನು ಬೆಸ್ಕಾಂ ಕಳೆದ ಜನವರಿ 15ರಿಂದ ಕಂಡುಕೊಂಡಿದೆ. ಈ ಮೂಲಕ ಬೆಸ್ಕಾಂ ಆದಾಯಕ್ಕೆ ಯಾವುದೇ ನಷ್ಟವಾಗದಂತೆ ಸ್ಮಾರ್ಟ್ ಮೀಟರ್ ಅಳವಡಿಸಿದೆ. ರಿಚಾರ್ಜ್ ಮಾಡಿ ನಾವು ಬಳಸುವ ಮೊಬೈಲ್ ಹಾಗೂ ಇನ್ನಿತರ ಸಾಧನಗಳಂತೆಯೇ ಕಾರ್ಯನಿರ್ವಹಿಸುವ ಈ ಮೀಟರ್ಗೆ ಕಡ್ಡಾಯವಾಗಿ ರಿಚಾರ್ಜ್ ಮಾಡಿದಾಗ ಮಾತ್ರ ಅದು ತನ್ನ ಕಾರ್ಯನಿರ್ವಹಿಸಲಿದೆ. ಅಲ್ಲದೆ ರಿಚಾರ್ಜ್ ಮಾಡಿಲ್ಲವಾದರೆ ವಿದ್ಯುತ್ ಸಂಪರ್ಕವನ್ನು ಕಟ್ ಮಾಡಲಾಗುತ್ತದೆ. ಸ್ವಯಂ ಪ್ರೇರಿತವಾಗಿ ಕಟ್ ಆಗದಿದ್ದರೂ, ಬೆಸ್ಕಾಂನವರು ಕಟ್ ಮಾಡುತ್ತಾರೆ.
ಇನ್ನೂ ಈ ಬೆಸ್ಕಾಂ ವ್ಯಾಪ್ತಿಯಲ್ಲಿ ಪಡೆದುಕೊಳ್ಳುವ ಎಲ್ಲ ತಾತ್ಕಾಲಿಕವಾಗಿ ಸಂಪರ್ಕಗಳಿಗೂ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಖಾಯಂ ಆಗಿ ಖರೀದಿಸುವ ನೂತನ ವಿದ್ಯುತ್ ಸಂಪರ್ಕದಲ್ಲೂ ಸ್ಮಾರ್ಟ್ ಮೀಟರ್ ಬಳಸಲೇಬೇಕು ಎಂದು ಬೆಸ್ಕಾಂ ತನ್ನ ಆದೇಶದಲ್ಲಿ ತಿಳಿಸಿದೆ. ಇವುಗಳಲ್ಲಿ ಗ್ರಾಹಕರು ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಆಯ್ಕೆಗಳನ್ನೂ ಸಹ ಅದರಲ್ಲಿ ನೀಡಲಾಗಿದೆ.
ರಾಜ್ಯಾದ್ಯಂತ ವಿಸ್ತರಿಸುತ್ತೇವೆ ಎಂದ ಇಲಾಖೆ
ಅಲ್ಲದೆ ಇತ್ತೀಚಿಗೆ ಸಚಿವ ಕೆ.ಜೆ. ಜಾರ್ಜ್ನೇತೃತ್ವದಲ್ಲಿ ನಡೆದ ಇಂಧನ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಬೆಂಗಳೂರಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಬೆಸ್ಕಾಂಗಳಂತೆಯೇ, ರಾಜ್ಯದ ಎಲ್ಲ ಎಸ್ಕಾಂಗಳಲ್ಲೂ ನೂತನ ನೀತಿ ಜಾರಿಗೆಯಾಗಬೇಕು. ಅಲ್ಲದೆ ಎಲ್ಲ ಕಡೆಗಳಲ್ಲೂ ಏಕರೂಪ ದರವನ್ನು ವಿಧಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕುರಿತು ತೀಮಾರ್ನಿಸಲಾಗಿದೆ. ಇದರಂತೆ ಶೀಘ್ರದಲ್ಲೆ ಇಲಾಖೆಯ ಎಲ್ಲ ಎಸ್ಕಾಂಗಳಲ್ಲೂ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗುವುದು ಎನ್ನುವಂತಹ ಪ್ರಮುಖ ವಿಚಾರಗಳು ಸಭೆಯಲ್ಲಿ ಚರ್ಚೆಯಾಗಿವೆ.
ಇನ್ನೂ ನೂತನ ನೀತಿಯಿಂದ ಗ್ರಾಹಕರನ್ನು ಸುಲಿಗೆ ಮಾಡಲು ಮುಂದಾಗಿರುವ ಬೆಸ್ಕಾಂ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಶೇ400 ರಿಂದ 800ರಷ್ಟು ತೆತ್ತು ವಿದ್ಯುತ್ ಪಡೆಯುವುದು ಜನಸಾಮಾನ್ಯರಿಗೆ ತೀರ ಪ್ರಯಾಸದಾಯಕವಾಗಿದೆ. ಬೆಲೆ ಏರಿಕೆಯಿಂದ ಮೊದಲೇ ಕಂಗಾಲಾಗಿರುವ ಜನರಿಗೆ ನೂತನ ಮೀಟರ್ ನೀತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಂದಹಾಗೆ ಈ ಮೊದಲು 980 ರೂಪಾಯಿ ಪಾವತಿಸಿ ಪಡೆಯುತ್ತಿದ್ದ ಸಿಂಗಲ್ ಫೇಸ್ನ ಮೀಟರ್ಗೆ ಇದೀಗ ಜಿಎಸ್ಟಿ ಜೊತೆಯಾಗಿ ಒಟ್ಟು 4,998 ರೂಪಾಯಿಗಳನ್ನು ನೀಡಬೇಕಿದೆ.
ಅಲ್ಲದೆ ಈ ಮೊದಲು 2450 ದೊರೆಯುತ್ತಿದ್ದ ಎಸ್ಪಿ-2 ಮಿಟರ್ಗೆ ಈಗ ಸ್ಮಾರ್ಟ್ ಮೀಟರ್ ಹೆಸರಲ್ಲಿ ಬರೊಬ್ಬರಿ 8,880 ರೂಪಾಯಿ ಪಾವತಿ ಮಾಡಬೇಕಿದೆ. ಇಷ್ಟೇ ಅಲ್ಲದೆ 3,450 ರೂಪಾಯಿಗೆ ಸಿಗುತ್ತಿದ್ದ 3-ಫೇಸ್ ಮೀಟರ್ಗೆ ಇದೀಗ ಅಚ್ಚರಿಯಾದರೂ ಸತ್ಯ 28,080 ರೂಪಾಯಿಗಳನ್ನು ತೆರಬೇಕಾದ ಅನಿವಾರ್ಯತೆಗೆ ಸಾರ್ವಜನಿಕರನ್ನು ಇಂಧನ ಇಲಾಖೆ ದೂಡಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ.




