Saturday, July 27, 2024

Latest Posts

ನಾಮಪತ್ರ ಹಿಂಪಡೆಯದಿದ್ದಲ್ಲಿ ಬಿಜೆಪಿಯಿಂದ ಈಶ್ವರಪ್ಪ ಉಚ್ಛಾಟನೆ..?

- Advertisement -

Political News: ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರು ಬಿಜೆಪಿ ವಿರುದ್ಧವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ತಮ್ಮನ್ನು ಗೆಲ್ಲಿಸುವಂತೆ ಮೋದಿ ಫೋಟೋ ಬಳಸಿ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕಾರಣವೇನು ಎಂದರೆ, ತಾನು ಗೆದ್ದರೆ, ತನ್ನ ಪೂರ್ತಿ ಬೆಂಬಲ ಪ್ರಧಾನಿ ಮೋದಿಯವರಿಗಿರುತ್ತದೆ ಎಂದು ಈಶ್ವರಪ್ಪ ಹೇಳಿದ್ದರು. ಅಲ್ಲದೇ, ಅಪ್ಪ ಮಗ ಆಡಳಿತ ಕೊನೆಗೊಳಿಸಬೇಕು ಎಂಬ ಕಾರಣದಿಂದ ಮಾತ್ರ ತಾನು ಪಕ್ಷೇತರವಾಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದರು.

ಏಕೆಂದರೆ ಲೋಕಸಭೆ ಚುನಾವಣೆಗೆ ತಮ್ಮ ಮಗನಿಗೆ ಬಿಜೆಪಿಯಿಂದ ಟಿಕೇಟ್ ನೀಡಬೇಕು ಎಂದು ಈಶ್ವರಪ್ಪ ಮನವಿ ಮಾಡಿದ್ದರು. ಆದರೆ ಅವರ ಮಗನಿಗೆ ಈ ಬಾರಿ ಟಿಕೇಟ್ ಸಿಗಲಿಲ್ಲ. ಹಾಗಾಗಿ ಯಡಿಯೂರಪ್ಪನವರು ತಮಗೆ ಬೇಕಾದವರಿಗೆ ಟಿಕೇಟ್ ನೀಡಿದ್ದಾರೆ. ಆದರೆ ತಮ್ಮ ಮಗನಿಗೆ ಟಿಕೇಟ್ ಕೊಡಿಸದೇ, ತಾರತಮ್ಯ ಮಾಡಿದ್ದಾರೆ ಎಂಬ ಆರೋಪ ಈಶ್ವರಪ್ಪನವರದ್ದಾಗಿತ್ತು. ಹಾಗಾಗಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

ಇನ್ನುಈಶ್ವರಪ್ಪನವರ ಮನವೊಲಿಸಿ, ಲೋಕಸಭಾ ಚುನಾವಣೆಯಿಂದ ಹಿಂದೆ ಸರಿಯುವಂತೆ ಬಿಜೆಪಿ ಹೈಕಮಾಂಡ್ ಮನವಿ ಮಾಡಿದ್ರೂ ಕೂಡ, ಯಾರ ಮಾತತನ್ನು ಕೇಳದಿರಲು ಈಶ್ವರಪ್ಪ ನಿರ್ಧರಿಸಿದ್ದಾರೆ. ಹಾಗಾಗಿ ಈಶ್ವರಪ್ಪನವರಿಗೆ ಗಡುವು ನೀಡಲಾಗಿದ್ದು, ಏಪ್ರಿಲ್ 22ರೊಳಗೆ ಈಶ್ವರಪ್ಪನವರು ನಾಮಪತ್ರ ವಾಪಸ್ ಪಡೆಯದಿದ್ದಲ್ಲಿ, ಈಶ್ವರಪ್ಪನವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸುವ ಎಚ್ಚರಿಕೆ ನೀಡಲಾಗಿದೆ..

ಈ ಮೊದಲು ನನಗೆ ಇಷ್ಟೆಲ್ಲ ಜನರ ಬೆಂಬಲ ಸಿಕ್ಕಿರಲೇ ಇಲ್ಲ: ಜಗದೀಶ್ ಶೆಟ್ಟರ್

ನಮ್ಮಲ್ಲಿ ಬಿಕ್ಕಟ್ಟಿಲ್ಲ, ನಮ್ಮಲ್ಲಿ ಒಗ್ಗಟ್ಟಿದೆ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

ಕುಮಾರಸ್ವಾಮಿ ಸಚಿವರಾದರೆ ಅಸ್ತಿತ್ವವೇ ಇರುವುದಿಲ್ಲವೆಂಬ ಭಯ ಡಿಕೆಶಿಗೆ ಕಾಡುತ್ತಿದೆ: ವಿಜಯೇಂದ್ರ

- Advertisement -

Latest Posts

Don't Miss