Friday, March 14, 2025

Latest Posts

Government ವಿರುದ್ಧವೇ ಈಶ್ವರಪ್ಪ ಅಸಮಾಧಾನ..!

- Advertisement -

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಂದ ಸರ್ಕಾರ  ನೈಟ್ ಕರ್ಫ್ಯೂ ಜೊತೆಗೆ ಎರಡು ವಾರಗಳ ಕಾಲ  ವೀಕೆಂಡ್ ಕರ್ಫ್ಯೂವನ್ನು ಸಹ ಜಾರಿಗೆ ತಂದಿದೆ. ಆದರೆ ಇದಕ್ಕೆ ತಮ್ಮ ಸರ್ಕಾರದ ವಿರುದ್ಧವೇ ಗ್ರಾಮೀಣಾಭಿವೃದ್ಧಿ ಸಚಿವ  ಕೆಎಸ್ ಈಶ್ವರಪ್ಪ ಬೇಸರ  ವ್ಯಕ್ತಪಡಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಒಂದೇ ರೂಲ್ಸ್ ಇದೆ ಎಂದು ಹೇಳಿದ್ದು ಯಾರು?, ಯಾವ ಕರ್ಫ್ಯೂ ಇಲ್ಲ ಏನು ಇಲ್ಲ , ನಮ್ಮ ಶಿವಮೊಗ್ಗದಲ್ಲಿ  ಯಾವ ಸುಡುಗಾಡು ಇಲ್ಲ, ಜಿಲ್ಲೆಗಳಿಗೆ ಇನ್ನೂ ಯಾವುದೇ ರೀತಿಯ ಆದೇಶ ಬಂದಿಲ್ಲ , ಬೆಂಗಳೂರಿನಲ್ಲಿ ಬೇಕಾದರೆ ಕೋವಿಡ್ ನಿಯಮ ಮಾಡುವುದು ಮಾಡಿ, ಬೇರೆ ಜಿಲ್ಲೆಗಳಿಗೆ ಕಠಿಣ ನಿಯಮ ಮಾಡುವುದು ಬೇಡ, ನನಗೆ ಬೇಜಾರಿಲ್ಲ, ಆದರೆ ಜನರ ಭಾವನೆಗಳನ್ನು ವ್ಯಕ್ತ ಪಡಿಸಿದ್ದೇನೆ, ಸಂಪುಟ ಸಭೆಯಲ್ಲಿ  ಸಿಎಂ ಜೊತೆ ಇದನ್ನೇ ಮಾತನಾಡುವೆ ಎಂದು ಕೆಎಸ್ ಈಶ್ವರಪ್ಪ ಮಾಧ್ಯಮಗಳೊಂದಿಗೆ ಹೇಳಿಕೆಯನ್ನು ನೀಡಿದ್ದಾರೆ.

- Advertisement -

Latest Posts

Don't Miss