Friday, May 9, 2025

Latest Posts

ಬಟ್ಟೆ ಸರಿ ಹಾಕಿಕೊಳ್ಳದಿದ್ದರೂ, ಮಾನವೀಯತೆ ಮೆರೆದ ನಟಿಗೆ ಎಲ್ಲರಿಂದ ಶ್ಲಾಘನೆ..

- Advertisement -

ಮುಂಬೈ: ಊಟ ನಮ್ಮಿಚ್ಛೆ, ನೋಟ ಪರರಿಚ್ಛೆ. ಹಾಗಾಗಿ ಸರಿಯಾಗಿ ಉಡುಪು ಧರಿಸಬೇಕು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಆದ್ರೆ ಇಂದಿನ ಕಾಲದಲ್ಲಿ ಬಟ್ಟೆ ನೋಡಿ, ನಾವು ಜನರ ಮನಸ್ಸನ್ನು ಅರಿಯಲು ಸಾಧ್ಯವಿಲ್ಲ. ಎಷ್ಟೋ ಕಡೆ ಮೈ ತುಂಬ ಬಟ್ಟೆ, ಬಳೆ, ಸಿಂಧೂರ, ತಾಳಿ, ಎಲ್ಲವನ್ನೂ ಹಾಕಿಕೊಂಡು ಮದ್ಯಪಾನ, ಧೂಮಪಾನ, ಹೇಸಿಗೆಯ ಕೆಲಸ ಮಾಡುವವರನ್ನ ನಾವು ನೋಡಿರುತ್ತೇವೆ. ಆದರೆ ಅವರ ಜೊತೆಗೆ ಇದ್ದು, ಅರ್ದಂಬರ್ಧ ಬಟ್ಟೆ ಧರಿಸಿಯೂ, ಯಾವುದೇ ಕೆಟ್ಟ ಚಟವಿಲ್ಲದೇ, ನಿಯತ್ತಿನಿಂದ ಇರುವವರನ್ನೂ ನೋಡಿರುತ್ತೇವೆ. ಹಾಗಾಗಿ ಬಟ್ಟೆಯಿಂದ ಯಾವ ಮನುಷ್ಯನನ್ನೂ ನಾವು ಜಡ್ಜ್ ಮಾಡಲು ಸಾಧ್ಯವಿಲ್ಲ.

ಇದೇ ರೀತಿ ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಫ್ಯಾಷನ್ ಇನ್‌ಫ್ಲುಯೆನ್ಸರ್ ಎನ್ನಿಸಿಕೊಂಡಿರುವ ಊರ್ಫಿ ಜಾವೇದ್ ಉಡುಪಿಗೆ ಜನ ಛೀ, ಥೂ ಎಂದು ಉಗಿಯುತ್ತಿದ್ದರು. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್‌ ಆಗಿರುವ ವೀಡಿಯೋವೊಂದನ್ನ ನೋಡಿ, ಆಕೆಗೆ ಜನ ಭೇಷ್ ಎನ್ನುತ್ತಿದ್ದಾರೆ. ಆಕೆಗೆ ಸರಿಯಾಗಿ ಡ್ರೆಸ್ ಸೆನ್ಸ್ ಇಲ್ಲದಿದ್ದರೂ, ಮಾನವೀಯತೆ ಅಂತೂ ಇದೆ ಎನ್ನುತ್ತಿದ್ದಾರೆ.

ಮುಂಬೈನ ಐಷಾರಾಮಿ ಹೊಟೇಲ್‌ಗಳ ಬದಿ, ಬಡವರು, ನಿರ್ಗತಿಕರು ಬಂದು, ಸೆಲೆಬ್ರಿಟಿಗಳ ಬಳಿ ಬೇಡೋದು ಕಾಮನ್. ಆದರೆ ಎಲ್ಲ ಸೆಲೆಬ್ರಿಟಿಗಳು ಅವರಿಗೆ ದುಡ್ಡು ಕೊಡುವುದಿಲ್ಲ. ಕೆಲವರು ನೋಡಿಯೂ ನೋಡದ ಹಾಗೆ, ಹೋದರೆ, ಇನ್ನು ಕೆಲವರು ಕೊಂಚ ದುಡ್ಡು ಕೊಟ್ಟು ಹೋಗುತ್ತಾರೆ. ಊರ್ಫಿ ಜಾವೇದ್ ಒಂದು ರೆಸ್ಟೋರೆಂಟ್‌ಗೆ ಊಟಕ್ಕೆ ಬಂದಿದ್ದು, ಊಟ ಮುಗಿಸಿ ಹೋಗುವಾಗ ಕೆಲ ಮಕ್ಕಳು ಆಕೆಯ ಬಳಿ ಹಣ ಬೇಡಿದ್ದಾರೆ. ಆಕೆ ತನ್ನ ಪರ್ಸ್‌ನಿಂದ 500ರ ಎರಡು ನೋಟ್ ತೆಗೆದು ಇಬ್ಬರು ಮಕ್ಕಳಿಗೆ ಕೊಟ್ಟಿದ್ದಾಳೆ.

ಇದಕ್ಕೆ ಉತ್ತಮ ಕಾಮೆಂಟ್ಸ್ ಬಂದಿದೆ. ಈಕೆಗೆ ಸರಿಯಾಗಿ ಬಟ್ಟೆ ಹಾಕಲು ಬಾರದಿದ್ದರೂ, ಇವಳ ಮನಸ್ಸು ಮಾತ್ರ ಒಳ್ಳೆಯದಿದೆ. ಇವಳಿಗೆ ಕರುಣೆ ಇದೆ. ಮನಸ್ಸಿನಿಂದ ಇವಳು ಶುದ್ಧವಾಗಿದ್ದಾಳೆ. ಹೀಗೆ ಊರ್ಫಿ ಈ ಬಾರಿ ಒಳ್ಳೊಳ್ಳೆ ಕಾಮೆಂಟ್ಸ್ ಪಡೆದುಕೊಂಡಿದ್ದಾರೆ. ಊರ್ಫಿ ದುಡ್ಡು ದಾನ ಮಾಡಿದ ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ. 

- Advertisement -

Latest Posts

Don't Miss