www.karnatakatv.net :ರಾಯಚುರು : ರಾಜ್ಯದಲ್ಲಿ ಎರಡು ವರ್ಷಗಳಿಂದ ಮಾಹಮಾರಿ ಕೊರೊನಾ ಹಿನ್ನೆಲೆಯಲ್ಲಿ ಹಿಂದೂ ಧರ್ಮದ ಹಬ್ಬಗಳು ಸಂಪೂರ್ಣ ಸಬ್ದವಾಗಿವೆ. ಆದ್ರೆ ಈ ಬಾರಿ ಕೊರೊನಾ ಕೊಂಚ ಬಿಡುವು ನೀಡಿದ ಹಿನ್ನಲೆ ಗಣೇಶ ಈ ಬಾರಿ ತುಸು ಸದ್ದು ಮಾಡುತ್ತಿದ್ದಾನೆ. ಅದ್ರಲ್ಲೂ ರಾಜ್ಯ ಸರ್ಕಾರ ಎರಡು ವರ್ಷಗಳಿಂದ ಪರಿಸರಕ್ಕೆ ಹಾನಿ ಅಂತ ಪಿಓಪಿ ಗಣೇಶನನ್ನ ಬ್ಯಾನ್ ಮಾಡಿದ್ದು, ಮಣ್ಣಿನ ಗಣೇಶನ ವಿಗ್ರಹಗಳಿಗೆ ಈ ಬಾರಿ ಬಹಳ ಬೇಡಿಕೆ ಬಂದಿದೆ.
ರಾಯಚೂರು ನಗರದ ಬೋಳಮಾನದೊಡ್ಡಿ ರಸ್ತೆಯ ಎನ್ ಜಿ ಓ ಕಾಲೋನಿಯಲ್ಲಿ ಈ ಬಾರಿಯ ಗಣೇಶ ಹಬ್ಬಕ್ಕೆ ತರ ತರದ ಪರಿಸರ ಸ್ನೇಹಿ ಗಣೇಶನ ವಿಗ್ರಹಗಳು ರೆಡಿಯಾಗುತ್ತಿವೆ. ಸ್ಥಳೀಯ ನಿವಾಸಿ ಸುರೇಶ್ ಎಂಬ ಯುವಕನ ಕೈ ಚಳಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಮಣ್ಣಿನ ಗಣೇಶನ ವಿಗ್ರಹಗಳು ಈ ಬಾರಿ ಸಾಕಷ್ಟು ಗ್ರಾಹಕರನ್ನ ಕೈ ಬೀಸಿಕರೆಯುತ್ತಿವೆ.
ಈಗಾಗಲೇ ಗ್ರಾಹಕರ ಅಭಿರುಚಿಗೆ ತಕ್ಕಂತೆ ಜೇಡಿ ಮಣ್ಣಿನಿಂದ 800ಕ್ಕೂ ಅಧಿಕ ಪರಿಸರಸ್ನೇಹಿ ಮಣ್ಣಿನ ಗಣೇಶ ವಿಗ್ರಹಗಳನ್ನು ಸುರೇಶ್ ನಿರ್ಮಿಸಿದ್ದಾರೆ . ಈ ವಿಗ್ರಹಗಳು ರಾಸಯನಿಕ ರಹಿತ ವಸ್ತುಗಳಿಂದ ನಿರ್ಮಿಸಿರುವುದು ಮತ್ತೊಂದು ವಿಶೇಷ. ಈ ರೀತಿಯಾಗಿ ರೆಡಿಯಾಗಿರುವ ಗಣೇಶನ ಮೂರ್ತಿಗಳಿಗೆ ವಾಟರ್ ಕಲರ್ ಬಳಕೆ ಮಾಡುವುದರಿಂದ ಮತ್ತಷ್ಟು ಅತ್ಯಾಕರ್ಷಕವಾಗಿ ಕಾಣಿಸುತ್ತಿವೆ, ಹಾಗಾಗಿಯೇ ಈ ಬಾರಿ ಈ ಗಣೇಶನ ವಿಗ್ರಹಗಳಿಗೆ ವಿಶೇಷ ಬೇಡಿಕೆ ಇದೆ ಅಂತಾರೆ ತಯಾರಕರು.
ನಾಗರ ಪಂಚಮಿ, ಮಣ್ಣೆತ್ತಿನ ಅಮವಾಸೆ ಸಮಯದಲ್ಲಿ ಹೇಗೆ ಈ ನಾಡಿನಲ್ಲಿ ಮಣ್ಣಿನ ನಾಗರ, ಮಣ್ಣಿನ ಎತ್ತುಗಳಿಗೆ ಬೆಲೆ ಹೆಚ್ಚೋ, ಹಾಗೆ ಈ ಮಣ್ಣಿನ ಗಣೇಶನಿಗೂ ಹೆಚ್ಚು ಬೆಲೆ ಇದೆ. ಅಧುನಿಕತೆಯ ಭರಾಟೆಯಲ್ಲಿ ವ್ಯಾಪಾರದ ಸರಕಾಗಿದ್ದ ಗಣೇಶ ಈಗ ಈ ಮಣ್ಣಿನ ರೂಪದಲ್ಲಿ ಸಹಜ ಸ್ಥಿತಿಗೆ ಮರಳಿದ್ದಾನೆ ಹಾಗೆ ನೋಡಿದರೆ ಪಿಓಪಿ ಗಣೇಶನಿಗಿಂತ ಮಣ್ಣಿನ ಗಣೇಶನಿಗೆ ಬೆಲೆ ಜಾಸ್ತಿ.
ಇನ್ನು ಇಲ್ಲಿ ಸುರೇಶ್ ಮತ್ತು ಆತನ ಕುಟುಂಬದವರು ಆರು ಇಂಚಿನಿಂದ ಹಿಡಿದು ಮೂರು ಅಡಿಯ ವರೆಗೆ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಾರೆ. ನವಿಲು ಗಣೇಶ , ಮಹಾರಾಜ ಗಣೇಶ ಸೇರಿದಂತೆ ಹಲವು ರೂಪದ ಗಣೇಶನ ಪ್ರತಿಮೆಗಳು ಇಲ್ಲಿ ಕಾಣ ಸಿಗುತ್ತವೆ. ಮಣ್ಣಿನ ಗಣೇಶ್ ವಿಗ್ರಹಗಳಿಗೆ ಪೂಜೆ ಮಾಡಿದರೆ ಭೂಮಿ ತಾಯಿಗೆ ಪೂಜೆ ಮಾಡಿದ ಹಾಗೆ ಎಂಬ ನಂಬಿಕೆಯಿಂದ ಗ್ರಾಹಕರು ಮುಂಗಡವಾಗಿಯೇ ಬುಕಿಂಗ್ ಮಾಡುತ್ತಿದ್ದಾರೆ.
ಒಟ್ನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಜನರನ್ನು ಒಂದು ಗೂಡಿಸಲು ಬಾಲಗಂಗಾಧರ ತಿಲಕ್ ಗಣೇಶನ ಉತ್ಸವ ಆಚರಿಸುತ್ತಿದ್ದರು. ಆದರೆ ಇಂತಹ ಹಿಂದೂಗಳ ಈ ವಿಶೇ಼ಷ ಹಬ್ಬವನ್ನ ಕಳೆದೆರಡು ವರ್ಷಗಳಿಂದ ಮಹಾಮಾರಿ ಕರೋನ ಬಲಿ ಪಡೆದಿತ್ತು. ಈ ಬಾರಿ ಕೊಂಚ ದೊರೆತಿರುವ ಅವಕಾಶವನ್ನ ಬಳಸಿಕೊಂಡು ಕರೋನಾ ನಿಯಮಗಳನ್ನ ಪಾಲಿಸ್ತಾ ಹಬ್ಬವನ್ನ ಸಂಭ್ರಮಿಸೋಣ..
ಅನಿಲ್‌ಕುಮಾರ್, ಕರ್ನಾಟಕ ಟಿವಿ- ರಾಯಚೂರು