ಮಂಡ್ಯ: ಸಿಎಂ ಕುಮಾರಸ್ವಾಮಿ, ತಮ್ಮ ಇಮೇಜ್ ಉಳಿಸಿಕೊಳ್ಳೋದಕ್ಕೆ ತಮ್ಮ ಸಹೋದರ ರೇವಣ್ಣ ಹೆಸರನ್ನು ಡ್ಯಾಮೇಜ್ ಮಾಡ್ತಿದ್ದಾರೆ ಅಂತ ಮಾಜಿ ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಮಾಜಿ ಸಚಿವ ಚಲುವರಾಯಸ್ವಾಮಿ, ರಾಜ್ಯದಲ್ಲಿ ಸದ್ಯ ಎದುರಾಗಿರೋ ಬಿಕ್ಕಟ್ಟಿಗೆ ರೇವಣ್ಣ ಕಾರಣ ಅನ್ನೋ ವಿಚಾರ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಇದಕ್ಕೆಲ್ಲಾ ಕುಮಾರಸ್ವಾಮಿಯವರೇ ನೇರ ಹೊಣೆ, ಸಿಎಂ ಕುಮಾರಸ್ವಾಮಿ ತಮ್ಮ ಹೆಸರು ಉಳಿಸಿಕೊಳ್ಳೋದಕ್ಕೆ ತಮ್ಮ ಸಹೋದರ, ಸಚಿವ ರೇವಣ್ಣ ಹೆಸರನ್ನು ಹಾಳುಗೆಡವುತ್ತಿದ್ದಾರೆ ಅಂತ ಚಲುವರಾಯಸ್ವಾಮಿ ಆರೋಪ ಮಾಡಿದ್ರು. ಅಲ್ಲದೆ ಯಾವುದೇ ವಿಚಾರ ಕುರಿತಾದ ನಿರ್ಧಾರ ತೆಗೆದುಕೊಂಡು ಸಹಿ ಹಾಕುವವರು ಮುಖ್ಯಮಂತ್ರಿಗಳೇ ಅಲ್ಲವೇ, ಹೀಗಾಗಿ ಇದಕ್ಕೆ ಅಣ್ಣ-ತಮ್ಮಂದಿರೇ ಇದಕ್ಕೆ ಕಾರಣರು, ರೇವಣ್ಣ ಒಬ್ಬರೇ ಕಾರಣವಾಗಲು ಹೇಗೆ ಸಾಧ್ಯ. ರೇವಣ್ಣ ಮಾಡುವ ಎಲ್ಲಾ ಕೆಲಸಗಳ ಹಿಂದೆ ಕುಮಾರಸ್ವಾಮಿ ಇದ್ದಾರೆ ಅಂತ ಚಲುವರಾಯಸ್ವಾಮಿ ಆರೋಪಿಸಿದ್ರು.
ಇನ್ನು ತಮ್ಮ ರಾಜೀನಾಮೆ ಕುರಿತಾಗಿ ಮಾತನಾಡಿದ ಚಲುವರಾಯಸ್ವಾಮಿ, ನಾವು 7 ಜನರು ತಪ್ಪು ಮಾಡಿ ಪಕ್ಷ ಬಿಟ್ಟು ಬರಲಿಲ್ಲ, ಇದೀಗ ನಾರಾಯಣಗೌಡ ಪಕ್ಷ ಬಿಟ್ಟು ಮಾತನಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಸಿಎಂ ಆಪ್ತ , ಸಚಿವ ಪುಟ್ಟರಾಜುರವರಿಗೂ ಬರಲಿದೆ ಅಂತ ಚಲುವರಾಯಸ್ವಾಮಿ ಇದೇ ವೇಳೆ ಕುಟುಕಿದ್ರು.
ಕೈ ಚೆಲ್ಲಿದ ದೋಸ್ತಿ.., ಸಿಎಂ ರಾಜೀನಾಮೆ ಯಾವಾಗ..? ಮಿಸ್ ಮಾಡದೇ ಈ ವಿಡಿಯೋ ನೋಡಿ