‘ನಾಗೇಶ್ ಕೈ ಕೊಡ್ತಾರೆ ಅಂತ ನನಗೆ ಮೊದಲೇ ಗೊತ್ತಿತ್ತು’- ಮಾಜಿ ಸಂಸದ ಮುನಿಯಪ್ಪ

ಬೆಂಗಳೂರು: ಪಕ್ಷೇತರ ಶಾಸಕ ಎಚ್.ನಾಗೇಶ್ ರನ್ನು ನಂಬಬೇಡಿ ಅಂತ ನಾನು ಕಾಂಗ್ರೆಸ್ ನಾಯಕರಿಗೆ ಮೊದಲೇ ಹೇಳಿದ್ದೆ. ಆದ್ರೆ ಇವತ್ತು ಅವರೇ ರಾಜೀನಾಮೆ ನೀಡಿ ಹೋಗಿದ್ದಾರೆ ಅಂತ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ, ಎಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯತ್ತ ಮುಖ ಮಾಡಿರೋ ವಿಚಾರವಾಗಿ ಪ್ರತಿಕ್ರಿಯಿಸಿದ್ರು. ಪಕ್ಷೇತರ ಶಾಸಕರಿಗೆ ಮಂತ್ರಿಗಿರಿ ನೀಡುವಾಗ ನಾನು ಮೊದಲೇ ಕಾಂಗ್ರೆಸ್ ನಾಯಕರಿಗೆ ಅವರನ್ನು ನಂಬಬೇಡಿ ಅಂತ ಹೇಳಿದ್ದೆ. ಅವರು ಯಾವುದೇ ಕ್ಷಣದಲ್ಲಾದ್ರೂ ಕೈ ಕೊಡಬಹುದು ಅಂತ ಹೇಳಿದ್ದೆ. ಆದ್ರೆ ಪಕ್ಷದ ನಾಯಕರು ನನ್ನ ಮಾತು ಕೇಳದೆ ಅವರಿಗೆ ಮಂತ್ರಿಗಿರಿ ನೀಡಿದ್ರು. ಅವರ ಬದಲಾಗಿ ಪಕ್ಷಕ್ಕೆ ನಿಷ್ಠಾವಂತರಾಗಿರುವವರಿಗೆ ಸ್ಥಾನ ನೀಡಬಹುದಿತ್ತು ಅಂತ ಮಾಜಿ ಸಂಸದ ಮುನಿಯಪ್ಪ ಇದೇ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಚ್.ನಾಗೇಶ್ ವಿಶೇಷ ಫ್ಲೈಟ್ ಮೂಲಕ ಈಗಾಗಲೇ ಮುಂಬೈನಲ್ಲಿ ವಾಸ್ತವ್ಯಹೂಡಿರುವ ಅತೃಪ್ತ ಶಾಸಕರನ್ನು ಭೇಟಿಯಾಗಲಿದ್ದಾರೆ.

ಮುಂದಿನ ಸಿಎಂ ಯಾರು..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=Q0csvcKK3qc

About The Author