Saturday, October 5, 2024

Latest Posts

ಬರಿಗಾಲಿನಲ್ಲಿ ಓಡಾಡುತ್ತಿರುವ ಸಚಿವ ಎಚ್.ಡಿ.ರೇವಣ್ಣ..!

- Advertisement -

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಅಸ್ಥಿರತೆ ಉಂಟಾಗಿರೋ ಮಧ್ಯೆ ಸಚಿವ ಎಚ್.ಡಿ ರೇವಣ್ಣ ಬರಿಗಾಲಿನಲ್ಲಿ ಓಡಾಡುತ್ತಿರೋದು ಕಂಡುಬಂದಿದ್ದು ಸುದ್ದಿಗೆ ಗ್ರಾಸವಾಗಿದ್ದಾರೆ.

ನಿಂಬೆಹಣ್ಣುಗಳನ್ನು ಕೈಲಿಡಿದುಕೊಂಡು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ಸಚಿವ ಎಚ್.ಡಿ ರೇವಣ್ಣ ಟೀಕೆಗೆ ಗುರಿಯಾಗಿದ್ರು. ಇದೀಗ ರೇವಣ್ಣ ಮತ್ತೆ ಇಂಥಾದ್ದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಹೌದು, ರಾಜ್ಯ ರಾಜಕಾರಣದಲ್ಲಿ ಕೋಲಾಹಲವೆದ್ದಿರೋ ಮಧ್ಯೆ ರೇವಣ್ಣ ನಿನ್ನೆಯಿಂದಲೂ ಬರಿಗಾಲಿನಲ್ಲಿ ಓಡಾಡುತ್ತಿರೋದು ಕಂಡುಬಂದಿದೆ. ಇಂದು ಮಧ್ಯಾಹ್ನ ವಿಧಾನಸೌಧದ ತಮ್ಮ ಕಚೇರಿಗೆ ಆಗಮಿಸಿದ ವೇಳೆ ಸಚಿವ ರೇವಣ್ಣ ತಮ್ಮ ಕಾಲಿಗೆ ಚಪ್ಪಲಿ ಧರಿಸದೆ ಬರಿಗಾಲಿನಲ್ಲಿ ನಡೆದುಕೊಂಡು ಬಂದರು. ಇನ್ನು ನಿನ್ನೆ ಕೂಡ ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ನಡೆದ ಜೆಡಿಎಲ್ ಪಿ ಸಭೆಗೂ ಸಚಿವ ರೇವಣ್ಣ ಬರಿಗಾಲಿನಲ್ಲಿ ಬಂದಿದ್ರು.

ಆಧ್ಯಾತ್ಮದಲ್ಲಿ ಸಾಕಷ್ಟು ಒಲವಿರೋ ಸಚಿವ ರೇವಣ್ಣ ಒಂದು ವೇಳೆ ಮೈತ್ರಿ ಸರ್ಕಾರದಲ್ಲಿ ಉಂಟಾಗಿರೋ ಕೋಲಾಹಲ ಶಮನಕ್ಕಾಗಿ ಚಪ್ಪಲಿ ಹಾಕದೇ ಓಡಾಡುತ್ತೇನೆಂದು ಯಾವುದಾದ್ರೂ ದೇವರಿಗೆ ಹರಕೆ ಹೊತ್ತಿದ್ದಾರಾ ಅನ್ನೋ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಮುಂದಿನ ಸಿಎಂ ಯಾರು…? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=Q0csvcKK3qc
- Advertisement -

Latest Posts

Don't Miss