Bengaluru News: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟವಾಗಿದ್ದು, ಐವರಿಗೆ ಗಂಭೀರ ಗಾಯವಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ. ಆದರೆ ಸ್ಪೋಟವಾಗಿದ್ದು ಹೇಗೆ ಅಂತಾ ಇನ್ನೂ ಸಹ ತಿಳಿದು ಬಂದಿಲ್ಲ.
ಮೊದ ಮೊದಲು ಸಿಲಿಂಡರ್ ಅಥವಾ ಬಾಯ್ಲರ್ ಬ್ಲಾಸ್ಟ್ ಆಗಿರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಸ್ಪೋಟವಾದ ಜಾಗದಲ್ಲಿ ಬ್ಯಾಟರಿ, ಐಡಿಕಾರ್ಟ್, ಬ್ಯಾಗ್ ಕಂಡು ಬಂದಿದೆ. ಹಾಗಾಗಿ ಈ ಸ್ಪೋಟದಲ್ಲಿ ಯಾರದ್ದಾದರೂ ಸಂಚಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಪೊಲೀಸರು ಸಿಸಿಟಿವಿ ಕ್ಯಾಮೆರಾ ಚೆಕ್ ಮಾಡಿ, ಬ್ಲಾಸ್ಟ್‌ಗೆ ಕಾರಣವೇನು ಎಂದು ಪರಿಶೀಲನೆ ನಡೆಸಿದ್ದಾರೆ. ಇನ್ನು ಶ್ವಾನದಳ, ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಸೇರಿ ಹಲವರು ಸ್ಥಳಕ್ಕೆ ಧಾವಿಸಿದ್ದು, ಇದು ಹೊಟೇಲ್‌ನಲ್ಲಿದ್ದ ವಸ್ತುನಿಂದ ಆದ ಬ್ಲಾಸ್ಟ್ ಅಲ್ಲ, ಹೊರಗಿನಿಂದ ಬಂದ ವಸ್ತುವಿನಿಂದ ಆದ ಬ್ಲಾಸ್ಟ್ ಎಂದು ತಿಳಿದು ಬಂದಿದೆ.
ಇನ್ನು ಗಾಯಗೊಂಡ ಐವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಬ್ರೂಕ್‌ಫೀಲ್ಡ್ ಆಸ್ಪತ್ರೆಲ್ಲಿ ಮೂವರು ಮತ್ತು ವೈದೇಹಿ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದ ಜನ ಬಿಜೆಪಿಗೆ ಯಾಕೆ ಓಟ್ ಹಾಕಬೇಕು..? ಸಿ.ಟಿ.ರವಿ ಹೇಳಿದ್ದೇನು..?
ಅನ್ನದಾನ ಸೇವೆಯೊಂದಿಗೆ ಅನಂತ್ ಅಂಬಾನಿ- ರಾಧಿಕಾ ಮದುವೆ ಕಾರ್ಯಕ್ರಮ ಶುರು
ಇಂಥ ಆದೇಶ ನೀಡಿರುವ ಕಾಂಗ್ರೆಸ್ ವಿಕೃತ ಮನಸ್ಥಿತಿಯ ಪ್ರತೀಕ: ಸಂಸದ ತೇಜಸ್ವಿ ಸೂರ್ಯ

