International News: ಕೆಲ ಸಮಯಗಳ ಹಿಂದಷ್ಟೇ ರಷ್ಯಾದ ರಾಜಧಾನಿ, ಮಾಸ್ಕೋದ ಮಾಲ್ ಒಂದರಲ್ಲಿ ಐಸಿಸ್ ಉಗ್ರರು ಬಾಂಬ್ ಬ್ಲಾಸ್ಟ್ ಮಾಡಿದ್ದು, ನೂರಾಹತ್ತಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆ ನಡೆದ 24 ಗಂಟೆಯೊಳಗೆ 11 ಮಂದಿಯನ್ನು ಬಂಧಿಸಲಾಗಿದೆ.
ಇನ್ನು ಈ 11 ಮಂದಿಯಲ್ಲಿ ಕೆಲವರು ಉಕ್ರೇನ್‌ನವರಾಗಿದ್ದು, ಘಟನೆ ಬಳಿಕ, ರಷ್ಯಾ ಉಕ್ರೇನ್ ಗಡಿ ದಾಟಲು ಪ್ರಯತ್ನಿಸಿದ್ದರಂತೆ. ಉಕ್ರೇನಿಯನ್ ಭಾಗದಲ್ಲಿ ಸಂಪರ್ಕ ಹೊಂದಿದ್ದರು ಎಂದು ಸುದ್ದಿಯಾಗಿದೆ. ಇನ್ನು ಈ ಆರೋಪ ಕೇಳಿ ಬರುತ್ತಿದ್ದಂತೆ, ಉಕ್ರೇನ್ ಆರೋಪವನ್ನು ತಳ್ಳಿ ಹಾಕಿದೆ. ರಷ್ಯಾದಲ್ಲಿ ನಡೆದ ಭಯೋತ್ಪಾದಕ ದಾಳಿಗೂ ನಮಗೂ ಸಂಬಂಧವಿಲ್ಲವೆಂದು ಉಕ್ರೇನ್ ಹೇಳಿದೆ.
ಉಕ್ರೇನ್‌ನ ಈ ಸ್ಪಷ್ಟನೆ ಬಲಿಕ, ಐಸಿಸ್ ಉಗ್ರ ಸಂಘಟನೆ, ಈ ದಾಳಿ ನಡೆಸಿದ್ದು ನಾವೇ ಎಂದು ಒಪ್ಪಿಕೊಂಡಿದೆ. ಮಾಲ್ ಒಳಗೆ ಮಾಸ್ಕ್ ಧಾರಿಗಳಾಗಿ ನುಗ್ಗಿದ ಐವರು ಉಗ್ರರು ಹತ್ತಾರು ಕಡೆ ಬಾಂಬ್ ಇರಿಸಿ, ಹೊರ ನಡೆದಿದ್ದಾರೆ. ಬಳಿಕ ಬಾಂಬ್ ಬ್ಲಾಸ್ಟ್ ಆಗಿದ್ದು, ಹಲವರು ಘಟನೆಯಲ್ಲಿ ಸಜೀವ ದಹನವಾದರೆ, ಇನ್ನು ಕೆಲವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮೂರು ಹೆಲಿಕ್ಯಾಪ್ಟರ್ ಬಳಸಿ, ಮಾಲ್‌ನಲ್ಲಿ ಹತ್ತಿಕೊಂಡಿದ್ದ ಬೆಂಕಿ ನಂದಿಸಲಾಗಿದೆ.
ಉಡುಪಿ ಕಾಲೇಜು ಶೌಚಾಲಯದಲ್ಲಿ ವೀಡಿಯೋ: ವಿದ್ಯಾರ್ಥಿನಿಯರ ನೀಚತನ ಸಾಬೀತು..
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಕಾಂಗ್ರೆಸ್ ಸರ್ಕಾರಕ್ಕೇ ಗ್ಯಾರಂಟಿ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ




