Tuesday, April 15, 2025

Latest Posts

ಶೀಘ್ರವೇ ಬದಲಾಗಲಿದೆ ಫೇಸ್ ಬುಕ್ ಹೆಸರು..!

- Advertisement -

ಸೋಶಿಯಲ್ ಮೀಡಿಯಾದ ದೈತ್ಯ ಫೇಸ್ ಬುಕ್ ಸಂಸ್ಥೆ ತನ್ನ ಹೆಸರನ್ನು ಅತಿ ಶೀಘ್ರದಲ್ಲೇ ಬದಲಿಸಿಕೊಳ್ಳಲಿದೆ.

ಹೌದು, ಇಡೀ ವಿಶ್ವಾದ್ಯಂತ ಅತ್ಯಧಿಕವಾಗಿ ಬಳಕೆಯಾಗ್ತಿರೋ ಫೇಸ್ ಬುಕ್ ಸದ್ಯ ತನ್ನ ಹೆಸರನ್ನು ಚೇಂಜ್ ಮಾಡಿಕೊಳ್ತಿದೆ. ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಇಷ್ಟರಲ್ಲೇ ಹೊಸ ಹೆಸರನ್ನು ಘೋಷಿಸಲಿದ್ದಾರೆ.

ಅ.28 ರಂದು ಫೇಸ್ ಬುಕ್ ಸಂಸ್ಥೆಯ ವಾರ್ಷಿಕ ಸಮ್ಮೇಳನ ನಡೆಯಲಿದ್ದು,ಅಂದೇ ಹೆಸರು ಬದಲಾವಣೆಯ ಪ್ರಸ್ತಾವವನ್ನು ಜುಕರ್ಬರ್ಹ್ ಮಂಡಿಸಲಿದ್ದಾರೆ ಅಂತ ಹೇಳಲಾಗ್ತಿದೆ.

ಸದ್ಯ  ಸಾಮಾಜಿಕ ಜಾಲತಾಣವಾಗಿರೋ ಫೇಸ್ ಬುಕ್ ಇನ್ನೂ ಅನೇಕ ಆಪ್ಶನ್ ಗಳಿಂದ ಮತ್ತಷ್ಟು ವಿಚಾರಗಳಿಗೆ ಬಳಕೆಯಾಗುವಂತೆ ರಚನೆ ಮಾಡಲಾಗ್ತಿದೆ.  ಈ ಮೂಲಕ ಮಾರ್ಕ್ ಜುಕರ್ಬರ್ಗ್ ಸಂಸ್ಥೆಯನ್ನು ಬೆಳೆಸೋ ಉದ್ದೇಶ ಹೊಂದಿದ್ದಾರೆ ಅಂತ ಹೇಳಲಾಗ್ತಿದೆ.

ಇನ್ನು ಭವಿಷ್ಯದ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಮತ್ತಷ್ಟು ಮಾರ್ಪಾಟು ಮಾಡಲಾಗ್ತಿದೆ. ಅಲ್ಲದೆ ಇದು ಫೇಸ್ ಬುಕ್ ರೀಬ್ರಾಂಡಿಂಗ್ ಸಲುವಾಗಿ ಮಾರ್ಕ್ ಜುಕರ್ಬರ್ಗ್ ಈ ನಿರ್ಧಾರಕ್ಕೆ ಬಂದಿದ್ದಾರೆ.

ಕೇವಲ ಸಾಮಾಜಿಕ ಜಾಲತಾಣಕ್ಕಷ್ಟೇ ಸೀಮಿತವಾಗದೇ ಫೇಸ್ ಬುಕ್ ಈಗಾಗಲೇ ಅಗ್ಯುಮೆಂಟೆಡ್ ರಿಯಾಲಿಟಿ ಗ್ಲಾಸ್, ಅಂದ್ರೆ ನೋಡಿದ್ದನ್ನೆಲ್ಲಾ ದೃಶ್ಯವನ್ನಾಗಿ ಪರಿವರ್ತಿಸೋ ಕನ್ನಡಕದ ತಯಾರಿಕೆಯಲ್ಲಿ ರೇಬ್ಯಾನ್ ಸಂಸ್ಥೆ ಜೊತೆಗೂಡಿ ತಯಾರಿಸುವತ್ತೆ ಹೆಜ್ಜೆಯಿಟ್ಟಿದೆ. ಇನ್ನು ಈ ಕಾನ್ಸೆಪ್ಟ್ ಭವಿಷ್ಯದಲ್ಲಿ ಸ್ಮಾರ್ಟ್ ಫೋನ್ ಗಳಂತೆ ಸರ್ವವ್ಯಾಪಿ ಬಳಕೆಯಾಗಲಿದೆ ಅನ್ನೋದು ಜುಕರ್ಬರ್ಗ್ ನ ಬಲವಾದ ನಂಬಿಕೆಯಾಗಿದೆ.

ಇನ್ನು ಮಾರ್ಕ್ ಜುಕರ್ಬರ್ಗ್ ಒಡೆತನದಲ್ಲಿ ಫೇಸ್ ಬುಕ್ ಜೊತೆಗೆ ಇನ್ಸ್ಟಾಗ್ರಾಮ್, ವಾಟ್ಸ್ ಆಪ್, ಆಕ್ಯುಲಸ್ ಸೇರಿದಂತೆ ಇತರೆ ಸಂಸ್ಥೆಗಳಿದ್ದು ಈ ಎಲ್ಲಾ ಸಮೂಹ ಸಂಸ್ಥೆಗಳನ್ನೂ ಪ್ರತಿನಿಧಿಸೋ ಹೆಸರಿಡಲಾಗುತ್ತೆ.  

ಒಟ್ಟಾರೆ ವಿಶ್ವವ್ಯಾಪಿ ಮೇನಿಯಾ ಕ್ರಿಯೇಟ್ ಮಾಡಿರೋ ಫೇಸ್ ಬುಕ್ ಮತ್ತೆ ಹೊಸ ಹೆಸರಲ್ಲಿ ಯಾವೆಲ್ಲಾ ಹೊಸತನವನ್ನು ಪರಿಚಯಿಸ್ಬಹುದು ಅನ್ನೋದು ನೆಟ್ಟಿಗರ ಕುತೂಹಲ ಕೆರಳಿಸಿದೆ.

ಬ್ಯೂರೋ ರಿಪೋರ್ಟ್, ಕರ್ನಾಟಕ ಟಿವಿ

- Advertisement -

Latest Posts

Don't Miss