Wednesday, April 16, 2025

Latest Posts

ಸೇನೆಗೆ ಸೇರಲು ನಕಲಿ ದಾಖಲೆ ಪೋರ್ಜರಿ:ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ ಒಂಬತ್ತು ಜನ ಬಂಧನ

- Advertisement -

ವಿಜಯನಗರ: ಸೇನೆಯಲ್ಲಿ ಕೆಲಸ ಕೊಡಿಸಲು ದಾಖಲಾತಿಗಳ ತಿದ್ದುಪಡಿ, ನಕಲಿ ದಾಖಲೆ ಕೊಟ್ಟ ಆರೋಪದಡಿಯಲ್ಲಿ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು 9 ಜನರನ್ನು ಬಂಧಿಸಿದ್ದಾರೆ.ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಆರೋಪಿಗಳಾದಪೊಲೀಸ್ ಸಿಬ್ಬಂದಿ ಅಂಕಲೇಶ್, ರಾಮಾಂಜನಿ ಹಾಗೂ ವೈಭವ್, ನೇತಾಜಿ ರಾಮ್ ಸಾವಂತ್, ಜಂಬಣ್ಣ, ಮನೋಜ್, ಅಜಿತ್ ಕೊಂಡೆ, ವೆಂಕಟೇಶ್, ಪರಶುರಾಮ್ ಬಂಧಿತ ಆರೋಪಿಗಳು.ಸೃಷ್ಟಿ ಮಾಡಿ ಇತರರ ಬಳಿ ಹಣ ಪಡೆದು ಸೇನೆಗೆ ಸೇರಲು ಸಹಾಯ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳು ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯದ ಜನರನ್ನು ಸ್ಥಳೀಯರು ಎನ್ನುವಂತೆ ದಾಖಲೆಗಳ ಫೋರ್ಜರಿ ಮಾಡಿದ್ದಾರೆ. ಐದಾರು ಲಕ್ಷ ಹಣಕ್ಕೆ ಫೋರ್ಜರಿ ಮಾಡಿ ದಾಖಲೆ ತಿದ್ದುಪಡಿ ಮಾಡಿದ್ದಾರೆ. ಸೇನೆಯಿಂದ ದಾಖಲಾತಿ ಪರಿಶೀಲಿಸುವಂತೆ ಮಾಹಿತಿ ಬಂದ ಹಿನ್ನೆಲೆ ಈ ಪ್ರಕರಣ ಬೆಳಕಿಗೆ ಬಂದಿದೆ. ಸೇನೆಯಲ್ಲಿ ಇನ್ನೂ ಹಲವಾರು ಜನ ಇದೇ ರೀತಿ ಕೆಲಸಕ್ಕೆ ಸೇರಿರುವ ಅನುಮಾನ ವ್ಯಕ್ತವಾಗಿದ್ದು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ವಿಜಯನಗರ ಜಿಲ್ಲೆ ಎಸ್ಪಿ ಡಾ. ಅರುಣ್ ಕೆ ಮಾಹಿತಿ ನೀಡಿದ್ದಾರೆ.

- Advertisement -

Latest Posts

Don't Miss