ಪುನಿತ್ ನಿಧನದ ಸುದ್ದಿ ಕೇಳಿ ಅಭಿಮಾನಿ ಹೃದಯಾಘಾತದಿಂದ ಸಾವು..!

ಚಾಮರಾಜನಗರ- ನಟ ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ರಾಜ್ಯಾದ್ಯಂತ ದುಃಖ ಮಡುಗಟ್ಟಿದೆ. ಈ ಮಧ್ಯೆ ಪವರ್ ಸ್ಟಾರ್ ನಿಧನದ ಸುದ್ದಿ ಕೇಳಿ ಅಭಿಮಾನಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಜಿಲ್ಲೆಯ ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದ ಮುನಿಯಪ್ಪ ಸಾವನ್ನಪ್ಪಿದ ಪುನೀತ್ ಅಭಿಮಾನಿಯಾಗಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ಪುನೀತ್ ಇನ್ನಿಲ್ಲ ಅನ್ನೋ ಸುದ್ದಿ ತಿಳಿಯುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ಇನ್ನು ಮುನಿಯಪ್ಪ ಚಿಕ್ಕ ವಯಸ್ಸಿನಿಂದಲೂ ಪವರ್ ಸ್ಟಾರ್ ಅಭಿಮಾನಿಯ ಕಟ್ಟಾ ಅಭಿಮಾನಿಯಾಗಿದ್ರು. ಪುನೀತ್ ನಟನೆಯ ಬಹುತೇಕ ಎಲ್ಲಾ ಚಿತ್ರಗಳನ್ನೂ ತಪ್ಪದೇ ನೋಡುತ್ತಿದ್ದ ಮುನಿಯಪ್ಪ ನೆಚ್ಚಿನ ನಟನ ಸುದ್ದಿ ತಿಳಿದು ಆಘಾತಕ್ಕೀಡಾಗಿದ್ರು.

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮುನಿಯಪ್ಪ ಸಾವನ್ನಪ್ಪಿದ್ದಾರೆ.

ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

About The Author