Tuesday, May 6, 2025

Latest Posts

ಆರ್‌ಸಿಬಿಯನ್ನು ಅಣಕಿಸಿದ್ದಕ್ಕೆ ನಟಿಗೆ ಖಡಕ್ ರಿಪ್ಲೈ ಕೊಟ್ಟ ಫ್ಯಾನ್ಸ್..

- Advertisement -

Movie News: ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ನಟಿಸಿರುವ ನಟಿ ಕಸ್ತೂರಿ ಶಂಕರ್, ಆರ್‌ಸಿಬಿಯನ್ನು ಟ್ರೋಲ್ ಮಾಡಿದ್ದಾರೆ. ಇದಕ್ಕೆ ಆರ್‌ಸಿಬಿ ಫ್ಯಾನ್ಸ್ ಕೂಡ ಚೆನ್ನಾಗಿ ರಿಪ್ಲೈ ಕೊಟ್ಟಿದ್ದಾರೆ.

ಮೊನ್ನೆ ಚೆನ್ನೈ ಮತ್ತು ಆರ್‌ಸಿಬಿ ಮಧ್ಯೆ ನಡೆದ ಮ್ಯಾಚ್‌ನಲ್ಲಿ ಚೆನ್ನೈ ಸೋಲೊಪ್ಪಿಕೊಂಡಿತ್ತು. ಈ ಕಾರಣಕ್ಕಾಗಿ ಚೆನ್ನೈ ಆಟಗಾರ ತುಷಾರ್ ದೇಶಪಾಂಡೆ ಉರಿದುಕೊಂಡು, ಆರ್‌ಸಿಬಿ ಸೋಲುವುದನ್ನೇ ಕಾದು, ಆರ್‌ಸಿಬಿ ವಿರುದ್ಧ ಪೋಸ್ಟ್ ಹಾಕಿದ್ದ. ಇದೇ ಪೋಸ್ಟನ್ನು ಕಸ್ತೂರಿ ಶಂಕರ್ ಶೆರ್ ಮಾಡಿದ್ದಾರೆ.

ಈ ಪೋಸ್ಟ್‌ನಲ್ಲಿ ಬೆಂಗಳೂರು ದಂಡು ಎಂಬ ಬೋರ್ಡ್ ಇದ್ದು, ಇದನ್ನು ಇಂಗ್ಲೀಷಿನಲ್ಲಿ ಬೆಂಗಳೂರು ಕಾಂಟ್ ಅಂತಾ ಬರೆಯಲಾಗಿದೆ(bengaluru cant). ಇದನ್ನು ಹಾಕಿ, ಇಲ್ಲಿರುವ ಲೋಕಲ್ಸ್‌ಗಳು ಇದನ್ನು ಹಲವು ವರ್ಷಗಳಿಂದ ಎಕ್ಸ್‌ಪಿರಿಯನ್ಸ್ ಮಾಡಿದ್ದಾರೆಂದು ಕಸ್ತೂರಿ ಟೀಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆರ್‌ಸಿಬಿ ಫ್ಯಾನ್ಸ್, ನಟಿ ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದನ್ನು ನೆನಪಿಸಿದ್ದಾರೆ. ಮೊನ್ನೆ ಮ್ಯಾಚ್‌ನಲ್ಲಿ ಆರ್‌ಸಿಬಿ ಚೆನ್ನೈಯನ್ನು ಹೇಗೆ ಸೋಲಿಸಿತ್ತು ಅಂತಲೂ ನೆನಪಿಸಿದ್ದಾರೆ. ಅಲ್ಲದೇ ಚೈನ್ನೈ ತಂಡ ಯಾವ ರೀತಿ ಚೀಟ್ ಮಾಡಿ ಎರಡು ವರ್ಷ ಬ್ಯಾನ್ ಆಗಿತ್ತು ಅಂತಲೂ ನೆನಪಿಸಿದ್ದಾರೆ.

- Advertisement -

Latest Posts

Don't Miss