Saturday, July 5, 2025

Latest Posts

ಚಾಮರಾಜನಗರದಲ್ಲಿ ನಟ ಪುನೀತ್ ಗೆ ಶ್ರದ್ಧಾಂಜಲಿ

- Advertisement -

ಚಾಮರಾಜನಗರ- ನಟ ಪುನೀತ್ ರಾಜ್ ಕುಮಾರ್ ವಿಧಿವಶರಾದ ಹಿನ್ನೆಲೆಯಲ್ಲಿ ಕರುನಾಡು ಕಂಬನಿ ಮಿಡಿಯುತ್ತಿದೆ. ಚಾಮರಾಜನರದಲ್ಲಿ ಕರುನಾಡು ಯುವಶಕ್ತಿ ಸಂಘಟನೆ ಹಾಗು ವಿವಿಧ ಕನ್ನಡಪರ ಸಂಘಟನೆಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯ್ತು.

ಈ ವೇಳೆ ನಟ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯ್ತು. ಈ ಸಂದರ್ಭದಲ್ಲಿ ಮಾತನಾಡಿದ ಕರುನಾಡ ಯುವ ಶಕ್ತಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಅಶೋಕ್ ರಾಜ್ ರವರು ಮಾತನಾಡುತ್ತಾ ಪುನೀತ್ ರಾಜಕುಮಾರ್ ರವರು ನಮ್ಮ ಚಾಮರಾಜನಗರ ಜಿಲ್ಲೆಯ ಹೆಮ್ಮೆಯ ಸುಪುತ್ರರಾಗಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.ಜೊತೆಗೆ ತಂದೆಯಂತೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಚಿತ್ರರಂಗದ ಕಲಾವಿದರಿಗೆ ಹಾಗೂ ಪ್ರೇಕ್ಷಕರಿಗೆ ಮಾದರಿ ಆಗಿದ್ದರು.  ಅವರ ಅಗಲಿಕೆ ತೀವ್ರ ಬೇಸರ ತಂದಿದೆ ಎಂದ್ರು.  

- Advertisement -

Latest Posts

Don't Miss