National News: ಮಾಜಿ ಸಂಸದೆ ಮತ್ತು ನಟಿ ಜಯಪ್ರಧಾ ನಾಪತ್ತೆಯಾಗಿದ್ದಾರೆ. ಅವರನ್ನು ಬಂಧಿಸಬೇಕು ಎಂದು ಕೋರ್ಟ್ ಆದೇಶ ನೀಡಿದೆ.
ಜಯಪ್ರದಾ ವಿರುದ್ಧ 2 ಪ್ರಕರಣಗಳು ದಾಖಲಾಗಿದ್ದು, ಮಾರ್ಚ್ 6ರೊಳಗೆ ಇವರನ್ನು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಬೇಕು ಎಂದು ಉತ್ತರಪ್ರದೇಶ ನ್ಯಾಯಾಲಯ ಆದೇಶ ನೀಡಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀತಿ ಉಲ್ಲಂಘನೆ ಮಾಡಿದ ಆರೋಪ ಜಯಪ್ರದಾ ಮೇಲಿತ್ತು. ಹಾಗಾಗಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಾಬೀತಾಗುತ್ತಿದ್ದಂತೆ, ಜಯಪ್ರದಾ ಎಸ್ಕೇಪ್ ಆಗಿದ್ದಾರೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋರ್ಟ್‌ಗೆ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದರೂ ಕೂಡ, ಜಯಪ್ರದಾ ಇದುವರೆದೂ ಒಂದು ಸಾರಿಯೂ ವಿಚಾರಣೆಗೆ ಹಾಜರಾಗಿಲ್ಲ.
ಅಲ್ಲದೇ, 7 ಬಾರಿ ವಾರೆಂಟ್ ರಹಿತ ಜಾಮೀನು ನೀಡಲಾಗಿದ್ದು, ಇದುವರೆಗೂ ಪೊಲೀಸರು ಆಕೆಯನ್ನು ಕೋರ್ಟ್ ಮುಂದೆ ತರಲಾಗಿಲ್ಲ. ಹಾಗಾಗಿ ಮಾರ್ಚ್ 6ರೊಳಗೆ ಜಯಪ್ರದಾರನ್ನು ಹುಡುಕಿ ಅರೆಸ್ಟ್ ಮಾಡಿ, ಕೋರ್ಟ್ ಮುಂದೆ ಹಾಜರುಪಡಿಸಲೇಬೇಕು ಎಂದು ಉತ್ತರಪ್ರದೇಶದ ಕೋರ್ಟ್ ಆದೇಶ ನೀಡಿದೆ.
ಇನ್ನನು ಜಯಪ್ರದಾ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಹಾಗಾಗಿ ಕೋರ್ಟ್ ಆಕೆ ಭೂಗತರಾಗಿದ್ದಾರೆಂದು ಘೋಷಿಸಿದ್ದಾರೆ. ಜಯಪ್ರದಾ ಸಿಕ್ಕಿ, ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ, ಕಠಿಣ ಶಿಕ್ಷೆ ನೀಡಲು ಕೋರ್ಟ್ ನಿರ್ಧರಿಸಿದೆ.
ಶಕ್ತಿಕೇಂದ್ರ ವಿಧಾನಸೌಧದಲ್ಲಿ ಇಂಥ ಘಟನೆ ನಡೆದಿದ್ದು ಖಂಡನೀಯ: ಜಗದೀಶ್ ಶೆಟ್ಟರ್
ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ ನಟಿ..