Thursday, April 17, 2025

Latest Posts

ಫೆ. 29ರಿಂದ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಶುರು: ಚಾಲನೆ ಮಾಡಲಿದ್ದಾರೆ ಸಿಎಂ

- Advertisement -

Movie News: ಈ ಬಾರಿ ಫೆ. 29 ರಿಂದ ಮಾರ್ಚ್ 7ರ ವರೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 15ನೇ ಆವೃತ್ತಿಯ ಸಿದ್ಧತೆಗಳು ಜೋರಾಗಿ ನಡೆದಿದೆ.

ಚಿತ್ರೋತ್ಸವದ ಕೋರ್ ಸಮಿತಿಯ ಅಧ್ಯಕ್ಷರು ಹಾಗೂ ಸರ್ಕಾರದ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪದನಿಮಿತ್ತ ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ ಡಾ.ತ್ರಿಲೋಕಚಂದ್ರ ಕೆ.ವಿ ಚಿತ್ರೋತ್ಸವದ ಬಗ್ಗೆ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂಹಾಸನ, ಸಾಮ್ಮಾ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್, ಮುಂತಾದ ಚಿತ್ರಗಳ ಖ್ಯಾತಿಯ ಡಾ.ಜಬ್ಬಾರ್ ಪಟೇಲ್, ಖ್ಯಾತ ನಟರಾದ ಶಿವರಾಜ್ ಕುಮಾರ್, ಇತ್ತೀಚೆಗೆ ವಿಶಾಲ್ ಭಾರದ್ವಾಜ್ ನಿರ್ದೇಶನದ “ಖುಷಿಯಾ” ಚಿತ್ರದಲ್ಲಿ ನಟಿಸಿದ ಬಾಂಗ್ಲಾದೇಶದ ಖ್ಯಾತ ನಟಿ ಅಜಮೇರಿ ಬಂದೋನ್, ಜೆಕ್ ರಿಪಬ್ಲಿಕ್‌ನ ಚಲನಚಿತ್ರ ಶಿಕ್ಷಣ ತಜ್ಞ ವಿಮರ್ಶಕಿ ವಿಯರಾ ಲ್ಯಾಂಗರೊವಾ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಮೂರು ಬಾರಿ ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರಿಂದ ಉದ್ಘಾಟನೆಗೆ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಘಾಟನಾ ಚಿತ್ರವಾಗಿ ಸ್ವಿಸ್ ಚಲನಚಿತ್ರ ಪೀಟರ್ ಲೂಸಿ ನಿರ್ದೇಶನದ, 88 ನಿಮಿಷಗಳ ಅವಧಿಯ ‘ಬೋಂಜೂರ್ ಸ್ವಿಜ್ಡರ್ ರ್ಲೆಂಡ್’ ಪ್ರದರ್ಶನವಾಗಲಿದೆ.

ಕನ್ನಡ ಭಾರತೀಯ ಮತ್ತು ಏಷ್ಯನ್ ಸಿನಿಮಾಗಳಲ್ಲಿ ಸ್ಪರ್ಧಾತ್ಮಕ ವಿಭಾಗಗಳು, ಸಮಕಾಲೀನ ವಿಶ್ವ ಸಿನೆಮಾ, ದೇಶಕೇಂದ್ರಿತ, ವಿಮರ್ಶಕರ ವಾರ, ಪುನರವಲೋಕನ, ವಿಷಯಾಧಾರಿತ ಸಾಕ್ಷ್ಯಚಿತ್ರ ವಿಭಾಗ, ಜೀವನಚರಿತ್ರೆ, ಸ್ಮರಣೆ, ಗೌರವ, ಮಹಿಳಾ ಶಕ್ತಿ ಹೀಗೆ ವಿವಿಧ ವಿಭಾಗಗಳಲ್ಲಿ 50 ಕ್ಕೂ ಹೆಚ್ಚು ದೇಶಗಳ, 180 ಚಲನಚಿತ್ರಗಳು ಈ ಉತ್ಸವದಲ್ಲಿ ಪ್ರದರ್ಶನವಾಗಲಿವೆ.

ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮತ್ತು ಕರ್ನಾಟಕದ 50 ವರ್ಷಗಳ ಸಂಭ್ರಮದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಚಲನಚಿತ್ರಗಳನ್ನು ಪುದರ್ಶಿಸಲಾಗುವುದು. ಏಷ್ಯನ್ ಸಿನಿಮಾ ಸ್ಪರ್ಧೆಗೆ ಅಂತಾರಾಷ್ಟ್ರೀಯ ತೀರ್ವುಗಾರರು ಭಾರತೀಯ ಸಿನಿಮಾ ಸ್ಪರ್ಧೆಗಾಗಿ ಅಂತರಾಷ್ಟ್ರೀಯ ವಿಮರ್ಶಕ ತೀರ್ಪುಗಾರರು ಮತ್ತು ರಾಷ್ಟ್ರೀಯ ತೀರ್ಪುಗಾರರು ಕನ್ನಡ ಸಿನಿಮಾ ಸ್ಪರ್ಧೆಗಾಗಿ ಅಂತರಾಷ್ಟ್ರೀಯ ವಿಮರ್ಶಕ ತೀರ್ಪುಗಾರರು ಮತ್ತು ರಾಷ್ಟ್ರೀಯ ತೀರ್ಪುಗಾರರು ಸೇರಿದಂತೆ ಚಿತ್ರೋತ್ಸವದಲ್ಲಿ ಐದು ತೀರ್ಪುಗಾರ ತಂಡಗಳಿರುತ್ತವೆ.

ವಿದೇಶದಿಂದ ದೃಢಪಡಿಸಿದ ಅಂತಾರಾಷ್ಟ್ರೀಯ ತೀರ್ಪುಗಾರರ ಸದಸ್ಯರಲ್ಲಿ ರಷ್ಯಾದಿಂದ ನೀನಾ ಕೊಚಲೆವಾ, ಸ್ಪೇನ್ನ ರೊಸಾನ್ನಾ ಜಿ ಅಲೋನ್ಯೂ ಬಾಂಗ್ಲಾದೇಶದ ಅಜೇರಿ ಹಕ್ ಬಾಂಧೋನ್, ಯುಕೆಯಿಂದ ಕ್ಯಾರಿ ರಾಜಿಂದರ್ ಸಾಹಿ ಸೋವಾಕಿಯಾದ ವೈರಾ ಲಾಂಗರೋವಾ, ತೈವಾನ್‌ನಿಂದ ಹ್ಯಾನ್ ಟಿಯನ್, ಆಸ್ಟ್ರೇಲಿಯಾದಿಂದ ಮಾಕ್ಸಿನ್ನ ವಿಲಿಯಮ್ಮನ್ ಮತ್ತು ಬಿಲ್ಲೇರಿಯಾದ ಆಂಡೋನಿಕಾ ಮಾರ್ಟೋನೊವಾ ಸೇರಿದ್ದಾರೆ. ರಾಷ್ಟ್ರೀಯ ತೀರ್ಪುಗಾರರ ಸದಸ್ಯರಲ್ಲಿ ಒರಿಸ್ತಾದಿಂದ ವಿಜಯಾ ಜೆನಾ, ಮಣಿಪುರದಿಂದ ಮೇಘಚಂದ್ರ ಕೊಂಗ್ರಾಮ್, ಕೊಲ್ಲೋತಾದಿಂದ ಶೇಖರ್ ದಾಸ್, ಮಹಾರಾಷ್ಟ್ರದಿಂದ ಸಂಜಯ್ ಕೃಷ್ಣಾಜಿ ಪಾಟೀಲ್, ಅಸ್ಸಾಂನಿಂದ ಜಾದುಮೋನಿ ದತ್ತಾ ಸೇರಿದ್ದಾರೆ. ಇವರೆಲ್ಲ ಹೆಸರಾಂತ ನಿರ್ದೇಶಕರು ಇಲ್ಲವೇ ವಿಮರ್ಶಕರು ಸ್ಥಳೀಯ ಚಿತ್ರನಿರ್ದೇಶಕರು, ವಿಮರ್ಶಕರು ಪತ್ರಕರ್ತರು ಕೆಲವರು ರಾಷ್ಟ್ರೀಯ, ಅಂತರರಾಷ್ಟ್ರೀಯ ತೀರ್ಪುಗಾರ ತಂಡದ ಭಾಗವಾಗಿರುತ್ತಾರೆ. ಕನ್ನಡ ಜನಪ್ರಿಯ ಮನರಂಜನಾ ಚಲನಚಿತ್ರಗಳ ವಿಭಾಗದಲ್ಲಿ 11 ಚಿತ್ರಗಳಿವೆ. ದೇಶ ಕೇಂದ್ರಿತ ವಿಭಾಗದಲ್ಲಿ ನಿರ್ದಿಷ್ಟ ದೇಶದಿಂದ ಸಮಕಾಲೀನ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು ಈ ಬಾರಿ ಜರ್ಮನಿಯ ಸಿನಿಮಾಗಳ ಮೇಲೆ ಗಮನ ಹರಿಸಲಾಗಿದೆ ಎಂದರು

ಅದ್ಭುತ ಬಾರತ ನಮ್ಮ ಉತ್ಸವದ ಅನನ್ಯ ವಿಭಾಗ ಇದರಲ್ಲಿ ಭಾರತದ ಕಡಿಮೆ ತಿಳಿದಿರುವ ಭಾಷೆಗಳಲ್ಲಿ ತಯಾರಾದ ಚಿತ್ರಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತದೆ. ಈ ಆವೃತ್ತಿಯಲ್ಲಿ ತುಳು, ಕೊಡವ, ಬಂಜಾರ, ಅರೆಬಾಷೆ, ಮಾರ್ಕೋಡಿ, ಗಾಲೆ, ರಾಭ, ಸಂತಾಲಿ. ತಾಯಿಫಾಕ, ಭಾಷೆಗಳ 9 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಬೇರೆ ದೇಶಗಳ ತೀರ್ಪುಗಾರರು, ವಿದೇಶದಿಂದ ಮತ್ತು ಭಾರತದ ಇತರ ಭಾಗಗಳ ಚಲನಚಿತ್ರ ತಯಾರಕರು, ವಿಮರ್ಶಕರು/ಪತ್ರಕರ್ತರು, ಚಲನಚಿತ್ರೋತ್ಸವ ಪ್ರತಿನಿಧಿಗಳು, ಪ್ರೋಗ್ರಾಮರ್‌ಗಳು, ಸಲಹೆಗಾರರು ಮೊದಲಾದವರು ಅತಿಥಿಗಳಾಗಿ ಬರಲಿದ್ದಾರೆ. ವಿದೇಶದಿಂದ ಸುಮಾರು 20 ಮಂದಿ ಸೇರಿದಂತೆ ಸುಮಾರು 70 ಅತಿಥಿಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಶ್ರೀಲಂಕಾ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಇರಾನ್, ಉಜೈಕಿಸ್ತಾನ್, ಜೆಕ್ ರಿಪಬ್ಲಿಕ್, ಯುಕೆ, ಬಲ್ಲೇರಿಯಾ, ತೈವಾನ್, ಸ್ಪೇನ್, ಜರ್ಮನಿ ಮತ್ತು ರಷ್ಯಾವನ್ನು ಪ್ರತಿನಿಧಿಗಳು, ಸ್ಥಳೀಯ ಚಲನಚಿತ್ರ ಮತ್ತು ಸಾಂಸ್ಕೃತಿಕ ಮಂದಿ, ಬೆಂಗಳೂರಿನಲ್ಲಿರುವ ವಿದೇಶಿ ಸಂಸ್ಥೆಗಳ ಪ್ರತಿನಿಧಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಶಸ್ತಿ ಪ್ರದಾನದೊಂದಿಗೆ ಸಮಾರೋಪ ಸಮಾರಂಭವು, ಮಾರ್ಚ್ 7, ಗುರುವಾರದಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದೆ. ವಿವಿಧ ವಿಭಾಗಗಳ ಸದಸ್ಯರು, ಸಾರ್ವಜನಿಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ನ್ ಮೂಲಕ ಸೂಕ್ತ ಪಾವತಿ ಮಾಡಿ ಪ್ರತಿನಿಧಿಗಳಾಗಬಹುದು.ಕೊನೆಯ ದಿನಾಂಕ ಫಬ್ರವರಿ 28, ಸಂಜೆ 5ಗಂಟೆಯ ವರೆಗೆ ಎಂದು ಮಾಹಿತಿ ನೀಡಿದರು

ಪತ್ರಿಕಾಗೋಷ್ಠಿಯಲ್ಲಿ ಚಿತ್ರೋತ್ಸವ ಕೋರ್ ಸಮಿತಿ ಉಪಾಧ್ಯಕ್ಷರು ಹಾಗೂ ಆಯುಕ್ತರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೇಮಂತ್ ಎಂ . ನಿಂಬಾಳ್ಕರ್ ಐಪಿಎಸ್,
ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರು ಎನ್ ವಿದ್ಯಾಶಂಕರ್,ಚಿತ್ರೋತ್ಸವ ಕೋರ್ ಸಮಿತಿ ಸದಸ್ಯರು ಹಾಗೂ ಜಂಟಿ ನಿರ್ದೇಶಕರು (ಆಡಳಿತ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಜುನಾಥ ಡೊಳ್ಳಿನ್,
ಚಿತ್ರೋತ್ಸವ ಕೋರ್ ಸಮಿತಿ ಸದಸ್ಯ ಕಾರ್ಯದರ್ಶಿಗಳು ಹಾಗೂ ರಿಜಿಸ್ಟ್ರಾರ್ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಿಮಂತರಾಜು. ಜಿ ಉಪಸ್ಥಿತರಿದ್ದರು

ಕಾಂಗ್ರೆಸ್ ಅವನತಿಗೆ ಕಾರಣವೇನು..? ಈ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು..?

ನರೇಂದ್ರ ಮೋದಿ ಬಳಿಕ ದೇಶದ ಮುಂದಿನ ಪ್ರಧಾನಿ ಯಾರಾಗ್ತಾರೆ..?

ಸಂವಿಧಾನ ಬದಲಾಯಿಸಲು ಬಂದವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss